‘ಟಕ್ಕರ್’ ಟ್ರೇಲರ್ ಗೆ ಮೆಚ್ಚುಗೆ
Team Udayavani, May 2, 2022, 4:36 PM IST
ನವನಟ ಮನೋಜ್ ನಾಯಕರಾಗಿ ನಟಿಸಿರುವ “ಟಕ್ಕರ್’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿ ಸಿನಿಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಸ್ ಕ್ಲಾಸ್ ಎರಡೂ ಅಂಶಗಳೊಂದಿಗೆ ಚಿತ್ರ ಸಾಗುವ ಸೂಚನೆಯನ್ನು ಟ್ರೇಲರ್ ನೀಡಿದೆ.”ಎಸ್‌ಎಲ್‌ಎನ್ ಕ್ರಿಯೇಶನ್ಸ್’ ಬ್ಯಾನರ್ ಅಡಿಯಲ್ಲಿ ಕೆ. ಎನ್ ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ “ಟಕ್ಕರ್’ ಚಿತ್ರಕ್ಕೆ ವಿ. ರಘು ಶಾಸ್ತ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ರಘುಶಾಸ್ತ್ರೀ, “ಸಿನಿಮಾದಲ್ಲಿ ಎಂಟರ್‌ಟೈನ್ಮೆಂಟ್ ಜೊತೆಗೆ ಹೊಸ ವಿಷಯವನ್ನು ಹೇಳಬೇಕು. ಹೊಸಬರ ಸಿನಿಮಾದಲ್ಲಿ ಹೊಸತನವಿದ್ದಾಗ ಅದು ಆಡಿಯನ್ಸ್‌ಗೆ ಇಷ್ಟವಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು “ಟಕ್ಕರ್’ ಸಿನಿಮಾ ಮಾಡಿದ್ದೇವೆ. ಸ್ಮಾರ್ಟ್‌ಪೋನ್ ಮತ್ತು ಇಂಟರ್‌ನೆಟ್ ದುರುಪಯೋಗದಿಂದ ಏನೆಲ್ಲಾ ಅನಾಹುತಗಳು ಸಂಭವಿಸುತ್ತಿವೆ, ಮಳೆಯರಿಗೆ ಅದು ಹೇಗೆ ಮಾರಕವಾಗುತ್ತಿದೆ ಎಂಬ ಅಂಶದ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ನಮ್ಮ ಸುತ್ತಮುತ್ತ ಈಗಾಗಲೇ ನಡೆದಿರುವ, ಮುಂದೆಯೂ ನಡೆಯಬಹುದಾದ ಘಟನೆಗಳನ್ನು ಇಟ್ಟು ಸಿನಿಮಾ ಮಾಡಿದ್ದೇವೆ. ಇದೊಂದು ಸೈಬರ್ ಕ್ರೈಂ ಸಬ್ಜೆಕ್ಟ್ ಸಿನಿಮಾ. ಅದನ್ನು ಆ್ಯಕ್ಷನ್, ಸಸ್ಪೆನ್ಸ್, ಸೆಂಟಿಮೆಂಟ್, ಕಾಮಿಡಿ ಹೀಗೆ ಪಕ್ಕಾ ಮಾಸ್ ಎಂಟರ್ ಟೈನ್ಮೆಂಟ್ ಎಲಿಮೆಂಟ್ಸ್ ಇಟ್ಟುಕೊಂಡು ಹೇಳಿದ್ದೇವೆ. ಹಾಗಾಗಿ ಸಿನಿಮಾದ ಸಬ್ಜೆಕ್ಟ್ ಇಂದಿನ ಜನರೇಶನ್ ಆಡಿಯನ್ಸ್‌ಗೆ ಬೇಗ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ.
“ಟಕ್ಕರ್’ ಚಿತ್ರದಲ್ಲಿ ನವನಟ ಮನೋಜ್ ನಾಯಕನಾಗಿ ಕಾಣಿಸಿಕೊಂಡರೆ, “ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಕೆ. ಎಸ್ ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, “ಭಜರಂಗಿ’ ಖ್ಯಾತಿಯ ಸೌರವ್ ಲೋಕಿ, ಅಶ್ವಿನ್ ಹಾಸನ್, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಕುರಿ ಸುನಿಲ್, ಜೈಜಗದೀಶ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಟಕ್ಕರ್’ ಚಿತ್ರದ ಹಾಡುಗಳಿಗೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಚಿತ್ರಕ್ಕೆ ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಡಿಫರೆಂಟ್ ಡ್ಯಾನಿ ಸಾಹಸ, ಮೋಹನ್ ನೃತ್ಯ ನಿರ್ದೇಶನವಿದೆ. ಗುರುರಾಜ್ ದೇಸಾಯಿ ಸಂಭಾಷಣೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.