ಫೆಬ್ರವರಿಗೆ ಪ್ರೇಕ್ಷಕರ ಮುಂದೆ ಮಟಾಶ್
Team Udayavani, Jan 24, 2019, 5:47 AM IST
ಈ ಹಿಂದೆ “ಮಟಾಶ್’ ಚಿತ್ರದ ಬಗ್ಗೆ ಇದೇ ಬಾಲ್ಕನಿಯಲ್ಲಿ ಬಿಡುಗಡೆ ಕುರಿತು ಹೇಳಲಾಗಿತ್ತು. ಆದರೆ, ಚಿತ್ರ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಬಂತು. ಅದಕ್ಕೆ ಕಾರಣ ತಾಂತ್ರಿಕ ದೋಷ ಮತ್ತು ಸಮಯಕ್ಕೆ ಸರಿಯಾಗಿ ಸಿಗದ ಚಿತ್ರಮಂದಿರಗಳ ಸಮಸ್ಯೆ. ಇವೆಲ್ಲಾ ಕಾರಣಗಳಿಂದಾಗಿ ನಿರ್ದೇಶಕ ಎಸ್.ಡಿ.ಅರವಿಂದ್, ಚಿತ್ರ ಬಿಡುಗಡೆ ಮುಂದೂಡಿದ್ದರು. ಈಗ ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿ 1 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. “ಚಿತ್ರದ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ, ಇನ್ನೇನು ಪ್ರೇಕ್ಷಕರ ಮುಂದೆ ತರಬೇಕು ಎಂದು ಹಲವು ಡೇಟ್‌ಗಳನ್ನು ಘೋಷಣೆ ಮಾಡಿದ್ದರೂ, ಅದು ಸಾಧ್ಯವಾಗಿರಲಿಲ್ಲ. ಈಗ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮುಂದಕ್ಕೆ ಹಾಕುವುದಿಲ್ಲ. ಫೆ.1 ರಂದು ಬಿಡುಗಡೆ ಮಾಡಲು ರೆಡಿ’ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಸಂಕ್ರಾಂತಿ ಹಬ್ಬದಂದು ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ಆ ಹಾಡಲ್ಲಿ ಮತ್ತಿನ ಹಣಬೆಯಿಂದಾಗುವ ಯಡವಟ್ಟುಗಳ ಬಗ್ಗೆ ಹೇಳಲಾಗಿತ್ತು. ಅದನ್ನು ತಿಂದವರು ಮತ್ತಿನಲ್ಲೇ ಇರುತ್ತಾರೆ ಎಂಬ ಕುರಿತಾದ ಹಾಡು ಅದಾಗಿತ್ತು. “ರುಂ ರುಂ ರುರುಂ…’ ಎಂದು ಶುರುವಾಗುವ ಹಾಡು ಸದ್ಯಕ್ಕೆ ಹೊಸತನದ ಸೌಂಡಿಂಗ್‌ನಲ್ಲಿ ಮೂಡಿಬಂದಿದ್ದು, ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂಬುದು ನಿರ್ದೇಶಕರ ಮಾತು.
ಅಂದಹಾಗೆ, ಗೋಲ್ಡ್ ಆ್ಯಂಡ್ ಡ್ರೀಮ್ಸ್ ಕ್ರೋಮ್ಸ್-ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸತೀಶ್ ಪಾಠಕ, ಗಿರೀಶ್ ಪಟೇಲ್, ಚಂದ್ರಶೇಖರ್ ಮಣೂರ ಹಾಗೂ ಎಸ್.ಡಿ.ಅರವಿಂದ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಮರ್ಥ್ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರದ್ವಾಜ್, ರಘು ರಮಣಕೊಪ್ಪ, ವಿ.ಮನೋಹರ್, ನಂದಗೋಪಾಲ್, ಸದಾನಂದ್ ಕಾಳಿ, ರವಿಕಿರಣ್ ರಾಜೇಂದ್ರನ್, ಸಿದ್ದಾಂತ್ ಸುಂದರ್, ರಂಗಸ್ವಾಮಿ, ಅಮೋಘ ರಾಹುಲ್, ಗಣೇಶ್ ರಾಜ್, ಬಾಲಾಜಿ ಪಿ ಶೆಟ್ಟಿ, ಗೌತಮ್, ನಾಗಾರ್ಜುನ್, ಸಿದ್ದು, ಅರ್ಜುನ್ ಸೇರಿದಂತೆ ಹಲವರು ನಟಿಸಿದ್ದಾರೆ.
ರಾನಿ ಅಬ್ರಾಹಿಂ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ನಿರ್ದೇಶಕ ಎಸ್.ಡಿ.ಅರವಿಂದ್ ಅವರೇ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತಕ್ಕೆ ವಿಜಯ್ ಕೃಷ್ಣ ಸಾಥ್ ನೀಡಿದ್ದಾರೆ. ಅವಿನಾಶ್ ನರಸಿಂಹರಾಜು ಕಲಾ ನಿರ್ದೇಶನ, ವಿನೋದ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.