ಸತೀಶ್ ಮ್ಯಾಟ್ನಿ ಗೆ ರಚಿತಾ ನಾಯಕಿ ಮತ್ತೆ ಒಂದಾದ ಅಯೋಗ್ಯ ಜೋಡಿ
ಇದೊಂದು ಥ್ರಿಲ್ಲರ್ ಜಾನರ್ ಸಿನಿಮಾ
Team Udayavani, Oct 3, 2020, 12:13 PM IST
ನೀನಾಸಂ ಸತೀಶ್ ನಟನೆಯ “ಪೆಟ್ರೋಮ್ಯಾಕ್ಸ್’ ಚಿತ್ರಕ್ಕೆ ಮರುಜೀವ ಸಿಕ್ಕಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಅದು “ಮ್ಯಾಟ್ನಿ’.
ಹೌದು, ಈ ಹಿಂದೆ ಸತೀಶ್ ಹೊಸ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ಈಗ ಆ ಚಿತ್ರಕ್ಕೆ ಟೈಟಲ್ “ಮ್ಯಾಟ್ನಿ’ ಎಂದು ಟೈಟಲ್ ಇಡಲಾಗಿದೆ. ಮನೋಹರ್‌ಕಾಂಪಳ್ಳಿ ಅವರ ನಿರ್ದೇಶನ, ಎಸ್ ಪಾರ್ವತಿ ಅವರ ನಿರ್ಮಾಣ ಈ ಚಿತ್ರಕ್ಕಿದೆ. ಇದೊಂದು ಥ್ರಿಲ್ಲರ್ ಜಾನರ್‌ಗೆ ಸೇರಿದ ಸಿನಿಮಾವಾಗಿದ್ದು, ನಿರ್ದೇಶಕರು ಹೇಳಿದ ಕಥೆ ಕೇಳಿದ ಕೂಡಲೇ ಸತೀಶ್, ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಮ್ಯಾಟ್ನಿ ಚಿತ್ರಕ್ಕೆ ರಚಿತಾ ರಾಮ್ ಹೀರೋಯಿನ್ ಆಗಿ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ “ಅಯೋಗ್ಯ’ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಿತು.ಈಗ ಮತ್ತೂಮ್ಮೆ ಒಂದಾಗುತ್ತಿದೆ ಈ ಜೋಡಿ.
ಕೆಲವು ದಿನಗಳ ಹಿಂದಷ್ಟೇ ರಚಿತಾ ದಿನೇಶ್ ಬಾಬು ನಿರ್ದೇಶನದ “ಕಸ್ತೂರಿ ಮಹಲ್’ನಿಂದ ಹೊರಗಡೆ ಬಂದು ಸುದ್ದಿಯಾಗಿದ್ದರು. ಈಗ ನೇರವಾಗಿ “ಮ್ಯಾಟ್ನಿ’ ಶೋಗೆ ಬಂದಿದ್ದಾರೆ. ಚಿತ್ರಮಂದಿರ ತೆರೆಯುತ್ತಿರುವ ಬಗ್ಗೆಯೂ ಸತೀಶ್ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡುವ ಸತೀಶ್, ನಾನು ಕೂಡಾ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದೇನೆ. ಜಾತಿ, ಅಂತಸ್ತು, ಧರ್ಮವನ್ನು ಮೀರಿ ಎಲ್ಲರೂ ಒಟ್ಟಾಗಿ ಸೇರೋದು ಅದು ಚಿತ್ರಮಂದಿರದಲ್ಲಿ. ಆ ಚಿತ್ರಮಂದಿರಗಳು ಈಗ ಬಾಗಿಲನ್ನು ತೆರೆಯುತ್ತಿದ್ದು, ಖುಷಿಯ ವಿಚಾರ. ನಾನು ಚಿತ್ರಮಂದಿರ ತೆರೆದ ನಂತರ ರಿಲೀಸ್ ಆಗುವ ಮೊದಲ ಸಿನಿಮಾವನ್ನು ಎಲ್ಲರೊಂದಿಗೆ ಚಿತ್ರಮಂದಿರದಲ್ಲೇ ವೀಕ್ಷಿಸಲಿದ್ದೇನೆ’ ಎನ್ನುವ ಮೂಲಕ ಚಿತ್ರಮಂದಿರ ತೆರೆಯುತ್ತಿರುವ ಖುಷಿ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.