Kannada Cinema; ಕೈ ಹಿಡಿಯೋ ಕೈವ…: ಮುಸ್ಲಿಂ ಹುಡುಗಿಯಾಗಿ ಮೇಘಾ ಮಿಂಚು
Team Udayavani, Dec 5, 2023, 12:18 PM IST
ನಟಿ ಮೇಘಾ ಶೆಟ್ಟಿ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಕೈವ’. ಧನ್ವೀರ್ ನಾಯಕರಾಗಿರುವ, ಜಯತೀರ್ಥ ನಿರ್ದೇಶನದ “ಕೈವ’ ಚಿತ್ರ ಡಿ.8ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿ.
ಈಗಾಗಲೇ ಬಿಡುಗಡೆಯಾಗಿರುವ ಹಾಡು, ಟ್ರೇಲರ್ ಹಿಟ್ ಆಗುವ ಜೊತೆಗೆ ಮೇಘಾ ಲುಕ್ ಗಮನ ಸೆಳೆದಿದೆ. ಈ ಕುರಿತು ಮಾತನಾಡುವ ಮೇಘಾ, “ಕೈವ ಮೇಲೆ ನನಗೆ ದೊಡ್ಡ ನಿರೀಕ್ಷೆ ಇದೆ. ಅದಕ್ಕೆ ಕಾರಣ ನನ್ನ ಪಾತ್ರ. ಒಬ್ಬ ನಟಿಯಾಗಿ ಇದು ನನಗೆ ಸವಾಲಿನ ಪಾತ್ರ. ಆ ಸವಾಲು ಏನೆಂಬುದನ್ನು ತೆರೆಮೇಲೆ ನೋಡಬೇಕು. ಮುಖ್ಯವಾಗಿ ಈ ಪಾತ್ರದಲ್ಲಿ ಭಾವತೀವ್ರತೆ ಹೆಚ್ಚಿತ್ತು. ಜೊತೆಗೆ ನಾನಿಲ್ಲಿ ಸಲ್ಮಾ ಎನ್ನುವ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದು ಹೊಸ ಸಂಸ್ಕೃತಿ, ಸಂಪ್ರದಾಯವನ್ನು ನಾನು ಕಲಿತು, ಅದಕ್ಕೆ ತಕ್ಕಂತೆ ನಾನು ನಟಿಸಬೇಕಿತ್ತು. ಅದು ನಿಜಕ್ಕೂ ಸವಾಲು. ಆದರೆ, ನಿರ್ದೇಶಕ ಜಯತೀರ್ಥ ಹಾಗೂ ತಂಡ ನೀಡಿದ ಪ್ರೋತ್ಸಾಹದಿಂದ ಅದು ಸಾಧ್ಯವಾಯಿತು’ ಎನ್ನುವುದು ಮೇಘಾ ಶೆಟ್ಟಿ ಮಾತು.
ಅಂದಹಾಗೆ, ಇನ್ನು ಕೈವ ಬಗ್ಗೆ ಹೇಳುವುದಾದರೆ, ಕೈವ ಇದು ಒಬ್ಬ ವ್ಯಕ್ತಿಯ ಹೆಸರು.1983 ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ಇದು ಶವಾಗಾರದಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ ಈ ಘಟನೆ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡೆವು. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಅದೇ ಇಸವಿಯಲ್ಲಿ ನಡೆದ ಗಂಗಾರಾಮ್ ಕಟ್ಟಡದ ದುರಂತಕ್ಕೆ ಹಾಗೂ ಈ ಚಿತ್ರದ ಕಥೆಗೂ ಸಂಬಂಧವಿದೆ. ದಿನಕರ್ ತೂಗುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ’ ಎನ್ನುವುದು ತಂಡದ ಮಾತು.
ನೈಜ ಘಟನೆಯಾಧರಿತ “ಕೈವ’ ಮೇಲೆ ಮೇಘಾ ಶೆಟ್ಟಿ ನಿರೀಕ್ಷೆ ಇಟ್ಟಿದ್ದು, ಒಂದೊಳ್ಳೆಯ ಪಾತ್ರದ ಮೂಲಕ ಸಿನಿಪ್ರೇಮಿಗಳ ಮುಂದೆ ಬರಲು ರೆಡಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.