ಕಾಳಿ ಅವತಾರದಲ್ಲಿ ಮೇಘನಾ ಗಾಂವ್ಕರ್‌

ಕನ್ನಡ ಮೇಷ್ಟ್ರುಗೆ ಇಂಗ್ಲೀಷ್‌ ಹೆಂಡ್ತಿ

Team Udayavani, Nov 18, 2019, 6:01 AM IST

MEGHANA

ಕವಿರಾಜ್‌ ನಿರ್ದೇಶನದ “ಕಾಳಿದಾಸ ಕನ್ನಡ ಮೇಷ್ಟ್ರು’ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್‌ ಮತ್ತು ಮೇಘನಾ ಗಾಂವ್ಕರ್‌ ಪ್ರಮುಖ ಆಕರ್ಷಣೆ. ಇದೇ ಮೊದಲ ಬಾರಿಗೆ ಮೇಘನಾ ಗಾಂವ್ಕರ್‌ ಅವರು ಜಗ್ಗೇಶ್‌ ಅವರಿಗೆ ಜೋಡಿ. ಅವರಿಲ್ಲಿ ಎಲ್ಲರ ಪಾಲಿಗೆ “ಕಾಳಿ’ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಯಾಕೆ ಅನ್ನೋದೇ ಸಸ್ಪೆನ್ಸ್‌. ತಮ್ಮ “ಕಾಳಿ’ ಅವತಾರ ಕುರಿತು ಮೇಘನಾ ಗಾಂವ್ಕರ್‌ ಮಾತನಾಡಿದ್ದಾರೆ.

* ನಿಮ್ಮ ಪಾತ್ರ ಹೇಗಿದೆ?
ತುಂಬಾ ಅದ್ಭುತ ಪಾತ್ರವದು. ಕವಿರಾಜ್‌ ಸರ್‌, ಕಥೆ ಮತ್ತು ಪಾತ್ರದ ಬಗ್ಗೆ ಹೇಳುತ್ತಿದ್ದಂತೆಯೇ,ಒಪ್ಪಿಕೊಂಡೆ. ಅದೊಂದು ಚಾಲೆಂಜಿಂಗ್‌ ರೋಲ್‌. ಈವರೆಗೆ ಮಾಡದೇ ಇರುವಂತಹ ಪಾತ್ರ. ನೋಡಿದವರು ಖಂಡಿತ ಎಂಜಾಯ್‌ ಮಾಡ್ತಾರೆ.

* ನೀವಿಲ್ಲಿ ಕಾಳಿಯಂತೆ ಹೌದಾ?
ಅದೊಂದು “ಕಾಳಿ’ ತರಹದ ಪಾತ್ರ. ಒಂದರ್ಥದಲ್ಲಿ ಕಾಳಿ ಅಂದುಕೊಂಡರೂ ತಪ್ಪಿಲ್ಲ. ಕಥೆಯಲ್ಲಿ ಕಾಳಿ ಇದ್ದಂತೆ. ಕನ್ನಡ ಮೇಷ್ಟ್ರು ಒಬ್ಬರ ವಿರುದ್ಧವಾಗಿ ಇರುವ ಪಾತ್ರವದು. ಇಂಗ್ಲೀಷ್‌ ತುಂಬ ಓದಿಕೊಂಡವಳು. ಒಂದು ರೀತಿಯ ಹೈಫೈ ಹುಡುಗಿ. ಈಗಿನ ಟ್ರೆಂಡ್‌ ಸ್ಟೋರಿ. ಕನ್ನಡದವರಾಗಿದ್ದೂ ಇಂಗ್ಲೀಷ್‌ ವ್ಯಾಮೋಹ ಬೆಳೆಸಿಕೊಂಡಂತವಳು. ತನ್ನ ಮಗುವಿಗೂ ಇಂಗ್ಲೀಷ್‌ ಕಲಿಸಬೇಕು, ಆ ಶಾಲೆನೇ ಬೇಕೆಂಬ ಆಸೆ ಪಡುವ ಪಾತ್ರ. ಹಾಗಾಗಿ ಅದು ಕಾಳಿಯಂತೆ ಕಾಣುತ್ತೆ.

* ಜಗ್ಗೇಶ್‌ ಜೊತೆ ಮೊದಲ ಸಿನ್ಮಾ ಏನನ್ನಿಸುತ್ತೆ?
ಈ ಹಿಂದೆ ಎರಡ್ಮೂರು ಅವಕಾಶ ಬಂದರೂ, ಮಾಡಲಿಲ್ಲ. ಈ ಕಥೆ, ಪಾತ್ರ ಇಷ್ಟವಾಯ್ತು. ಅದರಲ್ಲೂ ಜಗ್ಗೇಶ್‌ ಇರ್ತಾರೆ ಅಂದಾಗ ಅವಕಾಶ ಮಿಸ್‌ ಮಾಡ್ಕೊಬಾರದು ಅನಿಸಿತು. ಸೆಟ್‌ನಲ್ಲಿ ಜಗ್ಗೇಶ್‌ ಸರ್‌ ಇದ್ದರೆ ಹಾಸ್ಯಕ್ಕೆ ಕೊರತೆ ಇರುತ್ತಿರಲಿಲ್ಲ. ಅವರು ಬುದ್ಧಿವಂತ ನಟರು. ಇಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದವರು. ಹಾಗಾಗಿ ಎಲ್ಲಾ ತಾಂತ್ರಿಕತೆ ಅವರಿಗೆ ಗೊತ್ತು. ಒಂದೇ ಟೇಕ್‌ಗೆ ಫಿನಿಶ್‌ ಮಾಡುವ ಕಲಾವಿದರು. ಅವರಿಂದ ಸಾಕಷ್ಟು ಕಲಿತಿದ್ದೇನೆ. ಏನೋ ತೋಚದೇ ಹೋದಾಗ ಜಗ್ಗೇಶ್‌ ಅವರು ಸಹಾಯ ಮಾಡುತ್ತಿದ್ದರು.

* ಕಥೆ ಏನು ಹೇಳುತ್ತೆ?
ನನ್ನ ಪಾತ್ರಕ್ಕೆ ಇಲ್ಲಿ ಸಾಕಷ್ಟು ಜಾಗವಿದೆ. ಸಮಾಜವನ್ನು ಪ್ರತಿನಿಧಿಸುವ ಪಾತ್ರ ಅಂದುಕೊಳ್ಳಿ. ಈ ಸಿನಿಮಾ ಹಿಂದಿನ, ಮುಂದಿನ ಜನರೇಷನ್‌ ಎಲ್ಲದ್ದಕ್ಕೂ ಸೂಟ್‌ ಆಗುವ ಕಥೆ. ಶಿಕ್ಷಣ ವಿಷಯದಲ್ಲಿ ಸಾಕಷ್ಟು ಅಂಶಗಳನ್ನು ತೋರಿಸಲಾಗಿದೆ. ಮಕ್ಕಳ ಮೇಲೆ ಓದುವ ಒತ್ತಡ, ಪೋಷಕರ ಮೇಲೆ ಬೀಳುವ ಒತ್ತಡ, ಕನ್ನಡ ಭಾಷೆ ಪ್ರೀತಿ, ಇಂಗ್ಲೀಷ್‌ ವ್ಯಾಮೋಹ ಎಲ್ಲವೂ ಒಳಗೊಂಡಿದೆ. ಇದು ಮಕ್ಕಳಿಂದ ಹಿಡಿದು ಎಲ್ಲಾ ವರ್ಗದವರು ನೋಡುವ ಸಿನಿಮಾ.

* ಹಾಗಾದರೆ, ಕನ್ನಡಮಯ ಅನ್ನಿ?
ಕನ್ನಡ ಭಾಷೆಗೆ ಇಲ್ಲಿ ಆದ್ಯತೆ ನೀಡಲಾಗಿದೆ ನಿಜ. ಆದರೆ, ಅದರ ಜೊತೆಯಲ್ಲಿ ಮುಖ್ಯವಾಗಿ ಇಂಗ್ಲೀಷ್‌ ಜಸ್ಟ್‌ ಲಾಂಗ್ವೇಜ್‌ ನಾಟ್‌ ಎ ನಾಲೆಡ್ಜ್ ಎಂಬುದನ್ನು ಹೇಳಲಾಗಿದೆ. ಶಿಕ್ಷಣದ ವ್ಯವಸ್ಥೆ ಹೇಗೆಲ್ಲಾ ಇರುತ್ತೆ ಎಂಬುದಕ್ಕೂ ಇಲ್ಲಿ ಉತ್ತರವಿದೆ.

* ಮೇಷ್ಟ್ರುಗೆ ಸಾಕಷ್ಟು ಹಿಂಸೆ ಕೊಡ್ತೀರಾ?
ಹಾಗೇನೂ ಇಲ್ಲ. ಜಗ್ಗೇಶ್‌ ಸರ್‌ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ. ಅವರ ಪಾತ್ರಕ್ಕೆ ವಿರುದ್ಧವಾಗಿರುವ ಪಾತ್ರವಷ್ಟೇ ನನ್ನದು. ಚಿತ್ರ ನೋಡಿದವರಿಗೆ ಎಲ್ಲವೂ ಅರ್ಥವಾಗುತ್ತೆ.

ಟಾಪ್ ನ್ಯೂಸ್

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.