Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ
Team Udayavani, Sep 18, 2024, 11:30 AM IST
ಬೆಂಗಳೂರು: ಕೇವಲ ಸಿನಿಮಾ ರಂಗ ಅಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಶೋಷಣೆ ನಡೆಯುವುದು ಸಹಜ. ಅದನ್ನು ಎಲ್ಲರೂ ಅನುಭವಿಸಿರುತ್ತಾರೆ ಎಂದು ಚಿತ್ರ ನಟ ಉಪೇಂದ್ರ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮೀಟೂ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರ ಸುರಕ್ಷತೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಇಷ್ಟು ವರ್ಷಗಳಲ್ಲಿ ಈರೀತಿ ನಡೆದಿದ್ದು ಗೊತ್ತಿಲ್ಲ, ಬಹುಶಃ ನಾನು ಹುಡುಗಿಯಾಗಿದ್ದರೆ ಗೊತ್ತಾಗುತ್ತಿತ್ತೇನೋ. ಆದರೆ, ಗಂಡಸರಿಗೂ ಶೋಷಣೆ ಆಗಿವೆ. ಎಲ್ಲರಿಗೂ ಸಣ್ಣ ಪುಟ್ಟ ಆಗಿರುತ್ತದೆ. ನಾವು ಎಲ್ಲೋ ಒಂದು ಕಡೆ ಸ್ಕ್ರಿಪ್ಟ್ ತೆಗೆದುಕೊಂಡು ಹೋಗಿರುತ್ತೇವೆ. ಅದು ಇನ್ನೆಲ್ಲೋ ಸಿನಿಮಾ ಆಗಿಬಿಡುತ್ತೆ. ಕೆಲ ಸಿನಿಮಾಗಳನ್ನು ಮಾರಿಕೊಂಡಿರುತ್ತಾರೆ. ಅದರ ಹಣವೂ ನಮಗೆ ಸಿಗಲ್ಲ. ಆಗ ಕಾಪಿ ರೈಟ್, ಹೋರಾಟ ಮಾಡಲು ಆಗಲ್ಲ. ಕೇವಲ ಸಿನಿಮಾ ಅಷ್ಟೇ ಅಲ್ಲ ಎಲ್ಲ ಉದ್ಯಮದಲ್ಲೂ ಶೋಷಣೆ ಇದೆ. ಪ್ರಸ್ತುತ ಇದಕ್ಕಾಗಿ ಒಂದು ವೇದಿಕೆ ಸಿದ್ಧವಾಗುತ್ತಿರುವುದು ಉತ್ತಮ ಸಂಗತಿ. ಇದರಿಂದ ಮುಕ್ತವಾಗಿ ಧ್ವನಿಯೆತ್ತಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಇನ್ನು, ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಉಪೇಂದ್ರ, ಸುದ್ದಿ ಕೇಳಿದಾಗ ಬೇಜಾರಾಯ್ತು. ಸತ್ಯ ಹೊರಗಡೆ ಬರುತ್ತದೆ. ಇನ್ನೂ ವಿಚಾರಣೆ ನಡೆಯುತ್ತಿದೆ. ಪಬ್ಲಿಕ್ ಫಿಗರ್, ಪಬ್ಲಿಕ್ ಫಂಡ್ ಎಂಬ ವಿಷಯ ಬಂದಾಗ ಅದನ್ನು ತಿಳಿದುಕೊಳ್ಳಲು ಪಬ್ಲಿಕ್ ರೈಟ್ಸ್ ಇರುತ್ತೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.