‘ಹುಡುಕಾಟದ ಹಾದಿಯಲ್ಲಿ ನಿಶ್ಚಯದ ಹೆಜ್ಜೆ’ : ಮಿಸ್ಸಿಂಗ್ ಬಾಯ್ ಮಿಸ್ಟರಿ
Team Udayavani, Mar 8, 2019, 8:12 AM IST
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ. ಈ ಸಾಲಿನಲ್ಲಿ ಇದೀಗ ಹೊಸ ಸೇರ್ಪಡೆ ರಘುರಾಂ ನಿರ್ದೇಶನದ ಚಿತ್ರ ‘ಮಿಸ್ಸಿಂಗ್ ಬಾಯ್’. ಎಲ್ಲವೂ ಇದ್ದು ಏನೋ ಇಲ್ಲದಂತೆ ಚಡಪಡಿಸುವ ಯುವಕನೊಬ್ಬನ ಕ(ವ್ಯ)ಥೆಯೇ ಈ ‘ಮಿಸ್ಸಿಂಗ್ ಬಾಯ್’ ಎಂದು ಈ ಚಿತ್ರದ ಟ್ರೈಲರ್ ನೋಡಿದಾಗ ನಮಗೆ ತಿಳಿಯುತ್ತದೆ.
ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರ ಬ್ಯಾಕ್ ಡ್ರಾಪ್ ಧ್ವನಿಯಲ್ಲಿ ಈ ಚಿತ್ರದ ಟ್ರೈಲರ್ ತೆರೆದುಕೊಳ್ಳುತ್ತಾ ಸಾಗುತ್ತದೆ. ಒಂದುಕಡೆ ಆಸ್ತಿ, ಅಂತಸ್ತು, ನೇಮ್ – ಫೇಮ್ ಎಲ್ಲಾ ಇರುವ ಯುವಕನೊಬ್ಬ ತನ್ನ ತಾಯ್ನಾಡಿಗೆ ಬಂದು ಇಲ್ಲಿನ ಹಳ್ಳಿಯೊಂದರಲ್ಲಿ ಹೆತ್ತವರನ್ನು ಹುಡುಕುವ ಕಥೆ ಇರಬಹುದೇನೋ ಎಂಬ ಊಹೆಯನ್ನು ಪ್ರೇಕ್ಷಕರಲ್ಲಿ ‘ಮಿಸ್ಸಿಂಗ್ ಬಾಯ್’ ಚಿತ್ರದ ಟ್ರೈಲರ್ ಮೂಡಿಸುತ್ತದೆ. ಅದಕ್ಕೆ ಪೂರಕವಾಗಿ ಶಿವಣ್ಣನವರ ಧ್ವನಿಯಲ್ಲಿ ಮೂಡಿಬರುವ ನಿರೂಪಣೆ ನಮ್ಮಲ್ಲಿ ಇನ್ನಷ್ಟು ಕುತೂಹಲವನ್ನು ಮೂಡಿಸುತ್ತದೆ.
ಸದ್ಯಕ್ಕೆ ಈ ಚಿತ್ರದ ಟ್ರೈಲರ್ ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಪಾಸಿಟಿವ್ ಕಮೆಂಟ್ ಗಳನ್ನು ಪಡೆದುಕೊಳ್ಳುತ್ತಿದೆ. ‘ಹುಡುಕಾಡದ ಹಾದಿಯಲ್ಲಿ ನಿಶ್ಚಯದ ಹೆಜ್ಜೆ ಕರುಳಬಳ್ಳಿಯ ಕಡೆಗೆ’ ಎಂದು ಟ್ರೈಲರ್ ನಲ್ಲಿ ಬರುವ ಸಾಲುಗಳು ಈ ಚಿತ್ರ ನಿಶ್ಚಯವಾಗಿಯೂ ‘ಚಿಗುರಿದ ಕನಸು’ ಅಥವಾ ಹಿಂದಿಯ ‘ಸ್ವದೇಶ್’ ಚಿತ್ರದ ರೀತಿಯಲ್ಲೇ ವಿಭಿನ್ನವಾದ ಕಥಾಹಂದರವನ್ನು ಹೊಂದಿರಬಹುದೆಂಬ ಭರವಸೆಯನ್ನು ನೋಡುಗರಲ್ಲಿ ಮೂಡಿಸುತ್ತದೆ. ಏನೇ ಇರಲಿ ಈಗ ‘ಮಿಸ್ಸಿಂಗ್ ಬಾಯ್’ ಚಿತ್ರದ ಟ್ರೈಲರ್ ಅನ್ನು ನೋಡಿ, ಚಿತ್ರದ ಬಿಡುಗಡೆವರೆಗೆ ಕುತೂಹಲದಿಂದ ಕಾಯೋಣ!
ಗುರುನಂದನ್, ರಘುರಾಮ್ ನಾಯಕ್, ಸುಮಿತ್ರಾ ಮುಂತಾದವರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೊಲ್ಲ ಎಂಟರ್ ಟೈನ್ ಮೆಂಟ್ ಬ್ಯಾನರ್ ನಡಿಯಲ್ಲಿ ಕೊಲ್ಲ ಪ್ರವಿಣ್, ಕೊಲ್ಲ ಮಹೇಶ್ ಮತ್ತು ಆರ್.ಕೆ. ಹೇಮಂತ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.