ಬಾಯ್ ಮಾತು ತಾಯಿ ಮತ್ತು ತಾಯ್ನಾಡಿನ ಕಥೆ
Team Udayavani, Sep 14, 2018, 6:00 AM IST
“ಮಿಸ್ಸಿಂಗ್ ಬಾಯ್…’
– ಕಾಣೆಯಾದ ಹುಡುಗನೊಬ್ಬನ ಸತ್ಯಕಥೆ ಇದು. ಕನ್ನಡದಲ್ಲಿ ಅನೇಕ ನೈಜ ಘಟನೆ ಚಿತ್ರಗಳು ಬಂದಿವೆ. ಆ ಸಾಲಿಗೆ “ಮಿಸ್ಸಿಂಗ್ ಬಾಯ್’ ಕೂಡ ಸೇರ್ಪಡೆ. ಇದು ವಿದೇಶದಿಂದ ಸ್ವದೇಶಕ್ಕೆ ಅಪ್ಪ-ಅಮ್ಮನ ಹುಡುಕಿ ಬಂದವನ ಕಥೆ ಮತ್ತು ವ್ಯಥೆ. ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದ್ದು, ಆ ಕುರಿತು ಒಂದಷ್ಟು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ರಘುರಾಮ್ ಚಿತ್ರತಂಡದೊಂದಿಗೆ ಮಾಧ್ಯಮ ಎದುರು ಬಂದಿದ್ದರು.
ಮೊದಲು ಮಾತಿಗಿಳಿದ ನಿರ್ದೇಶಕ ರಘುರಾಮ್, “ಇದು ನೈಜ ಘಟನೆಯ ಸಿನಿಮಾ. 27 ವರ್ಷದ ಹಿಂದೆ ನಡೆದ ಘಟನೆಯನ್ನು ಪೊಲೀಸ್ ಅಧಿಕಾರಿಯೊಬ್ಬ ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಥ್ರಿಲ್ಲರ್ ಅಂಶದೊಂದಿಗೆ ಕಥೆ ಸಾಗಲಿದೆ. ಇದು ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ. ಕಥೆಯಲ್ಲಿ ಸುಮಾರು ಏಳು ವರ್ಷದ ಹುಡುಗನೊಬ್ಬ, ಆಟವಾಡುತ್ತಲೇ ರೈಲಿನಲ್ಲಿ ಪಯಣ ಬೆಳೆಸಿ ಕಾಣೆಯಾಗುತ್ತಾನೆ. ಹಾಗೆ ಕಾಣೆಯಾದವನು ದೂರದ ಸ್ವೀಡನ್ ದೇಶ ಸೇರಿಕೊಳ್ಳುತ್ತಾನೆ. ಇಪ್ಪತ್ತೇಳು ವರ್ಷದ ಬಳಿಕ ಸ್ವೀಡನ್‌ನಿಂದ ಬರುವ ಸುಮಾರು 35 ವರ್ಷದ ಯುವಕ, ತನ್ನ ಅಪ್ಪ-ಅಮ್ಮನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯ ಮೊರೆ ಹೋಗುತ್ತಾನೆ. ಕಳೆದು ಹೋಗಿದ್ದ ಹುಡುಗ ಪುನಃ ವಿದೇಶದಿಂದ ಸ್ವದೇಶಕ್ಕೆ ಬಂದು ಅಪ್ಪ-ಅಮ್ಮ ಬೇಕು ಅಂದಾಗ, ಪೊಲೀಸರು ಹೇಗೆಲ್ಲಾ ಅವನ ಹೆತ್ತವರನ್ನು ಹುಡುಕುತ್ತಾರೆ., ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬುದು ಚಿತ್ರದ ಕಥೆ’ ಎಂದು ವಿವರ ಕೊಡುತ್ತಾರೆ ರಘುರಾಮ್.
ಇದು ಪೊಲೀಸ್ ಇಲಾಖೆಗೆ ಸವಾಲು ಎನಿಸುವಂತಹ ಪ್ರಕರಣ. ಪ್ರತಿಯೊಬ್ಬರ ಹೃದಯ ತಟ್ಟುವ ಕಥೆ ಇದಾಗಿರುವುದರಿಂದ ಎಲ್ಲವನ್ನೂ ಸೂಕ್ಷ್ಮವಾಗಿ, ಅಷ್ಟೇ ಭಾವುಕತೆ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಸ್ವೀಡನ್‌ಗೆ ಹೋಗಿ ನೆಲೆಸಿರುವ ಯುವಕ ಈಗ ಎಲ್ಲಿದ್ದಾನೆ, ಅವನ ಹೆತ್ತವರು ಹೇಗಿದ್ದಾರೆ ಎಂಬ ಕುರಿತ ಕಥೆ ಸಾಗಲಿದೆ ಎಂಬುದು ರಘುರಾಮ್ ಮಾತು.
ಚಿತ್ರದಲ್ಲಿ ಗುರುನಂದನ್ ನಾಯಕರಾದರೆ, ಕೇರಳ ಮೂಲದ ಅರ್ಚನಾ ಜಯಕೃಷ್ಣ ನಾಯಕಿ, ರಂಗಾಯಣ ರಘು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಅಭಿಜಯ್ ಬಾಲನಟನಾಗಿ ನಟಿಸಿದ್ದಾನೆ. ಉಳಿದಂತೆ ಲಹರಿ ವೇಲು ಇತರರು ಇದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಜೋನಿ ಹರ್ಷ ಸಂಕಲನ ಮಾಡಿದರೆ, ಜಗದೀಶ್ ವಾಲಿ ಛಾಯಗ್ರಹಣವಿದೆ. ಕೊಲ್ಲ ಪ್ರವೀಣ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಈ ವೇಳೆ ಮಾಜಿ ಪೊಲೀಸ್ ಅಧಿಕಾರಿಗಳು ಸಹ ಚಿತ್ರದ ಕಥೆ ಬಗ್ಗೆ ಮೆಚ್ಚುಗೆ ಸೂಚಿಸಿ, ಶುಭಹಾರೈಸಿದ್ದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.