ಮೋಜೋಗೆ ಯೋಗರಾಜ ಭಟ್ ಧ್ವನಿ
Team Udayavani, Aug 1, 2017, 10:55 AM IST
ಚಿತ್ರಗಳ ನಿರೂಪಣೆ, ಹಿನ್ನೆಲೆ ಧ್ವನಿಯನ್ನು ಬೇರೆ ನಟರಿಂದ, ನಿರ್ದೇಶಕರಿಂದ ಕೊಡಿಸೋದು ಹೊಸ ಟ್ರೆಂಡ್. ಈಗಾಗಲೇ ಅನೇಕರು ಕೊಟ್ಟಿದ್ದಾರೆ ಕೂಡಾ. ಈಗ ನಿರ್ದೇಶಕ ಯೋಗರಾಜ ಭಟ್ಟರು ಕೂಡಾ ಸಿನಿಮಾವೊಂದಕ್ಕೆ ಧ್ವನಿ ನೀಡಿದ್ದಾರೆ.
ಅದು “ಮೋಜೋ’ ಚಿತ್ರಕ್ಕೆ. ನಿರ್ದೇಶಕ ಶ್ರೀಶ ಬೆಳಕವಾಡಿ ನಿರ್ದೇಶನದ ಈ ಚಿತ್ರಕ್ಕೆ ಭಟ್ಟರು ಧ್ವನಿಯಾಗಿದ್ದು, ಮನುಷ್ಯನ ಉಪಪ್ರಜ್ಞೆಗೆ ಇರುವ ಅಪಾರ ಶಕ್ತಿಯ ಪರಿಚಯ ಮಾಡಿಕೊಡುವ ಪೀಠಿಕೆಯಲ್ಲಿ ಭಟ್ಟರ ಧ್ವನಿ ಕೇಳಲಿದೆ.
ಯೋಗರಾಜ್ ಭಟ್ಟರ ಧ್ವನಿಯಲ್ಲೇ ಮಾಂತ್ರಿಕತೆ ಇದೆಯೆಂದು ಹೇಳುತ್ತಾ ಚಲನಚಿತ್ರದ ಆರಂಭಕ್ಕೆ ಅವರ ಧ್ವನಿಯು ಉತ್ತಮ ಆವೇಗವನ್ನು ನೀಡಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರವನ್ನು ಪೂರ್ವಿ ಆರ್ಟ್ಸ್ ಬ್ಯಾನರಿನಲ್ಲಿ ಅಮೆರಿಕಾ ಮೂಲದ ಗಜಾನನ್ ಭಟ್ ಅವರು ನಿರ್ಮಿಸಿದ್ದಾರೆ.
ಈ ಹಿಂದೆ “ಕ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ಮನು ಇಲ್ಲಿ ನಾಯಕ. ಚಿತ್ರೀಕರಣ ಅನುಭವ ಹಂಚಿಕೊಂಡರು. ನಾಯಕಿಯಾಗಿ ಅನುಷಾ ನಟಿಸಿದ್ದು, ಅವರಿಲ್ಲಿ ಮನೋವೈದೈಯಾಗಿ ನಟಿಸಿದ್ದಾರೆ. ಅನಂತ್ ಅರಸ್ ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.