ಸಸ್ಪೆನ್ಸ್-ಥ್ರಿಲ್ಲರ್ ‘ಮೋಕ್ಷ’: ಟ್ರೇಲರ್ ನಲ್ಲಿ ಹೊಸಬರ ಪ್ರಯತ್ನ
Team Udayavani, Mar 30, 2021, 10:01 AM IST
ಕನ್ನಡದಲ್ಲಿ ಈಗಾಗಲೇ ಹಲವು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಮೋಕ್ಷ’ ಎಂಬ ಸಿನಿಮಾ ಕೂಡ ಬರುತ್ತಿದೆ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದೆ.
ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಸುದೀಪ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಟ್ರೇಲರ್ ಕುತೂಹಲಕಾರಿಯಾಗಿದ್ದು, ಹೊಸಬರ ಪ್ರಯತ್ನ ಮೆಚ್ಚುವಂತಿದೆ. ಟ್ರೇಲರ್‌ನಲ್ಲಿ ಬರುವ ಮಾಸ್ಕ್ ಮ್ಯಾನ್ ಸಿನಿಮಾದ ಹೈಲೈಟ್‌ಗಳಲ್ಲೊಂದು ಎನ್ನಬಹುದು.
ಈ ಚಿತ್ರದ ಮೂಲಕ ಸಮರ್ಥ್ ನಾಯ್ಕ ನಿರ್ದೇಶಕರಾಗಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಸಮರ್ಥ್ ಇದಕ್ಕೂ ಮುನ್ನ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡಿದವರು. ಎಂಜಿನಿಯರಿಂಗ್, ಎಂಬಿಎ ಮಾಡಿರುವ ಅವರು ಡೆಲ್ ಸೇರಿದಂತೆ ಇತರೆ ಕಂಪೆನಿಗಳಲ್ಲಿ ಐದು ವರ್ಷ ಕೆಲಸ ಮಾಡುತ್ತಲೇ, ಸಿನಿಮಾ ಆಸಕ್ತಿ ಇಟ್ಟುಕೊಂಡವರು. ಸುಮಾರು 300 ಕ್ಕೂ ಹೆಚ್ಚು ಕಾರ್ಪೋರೇಟ್ ಜಾಹೀರಾತುಗಳನ್ನು ನಿರ್ದೇಶನ ಮಾಡಿದ ಅನುಭವ ಪಡೆದಿದ್ದಾರೆ. ಆ ಅನುಭವದ ಮೇಲೆ “ಮೋಕ್ಷ’ ಚಿತ್ರ ಮಾಡಿದ್ದಾರೆ.
ಇದನ್ನೂ ಓದಿ:ನಟಿ Divyansha Kaushik ಫೋಟೋ ಗ್ಯಾಲರಿ
ಚಿತ್ರದ ಬಗ್ಗೆ ಮಾತನಾಡುವ ಸಮರ್ಥ್, “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಹಾಗಂತ ರೆಗ್ಯುಲರ್ ಮರ್ಡರ್ ಮಿಸ್ಟ್ರಿ ಇಲ್ಲಿಲ್ಲ. ನಾರ್ಮಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೂಡ ಅಲ್ಲ. ಬಾಲಿವುಡ್‌ನಲ್ಲಿ ಬಂದ “ಬಾಜಿಗಾರ್’, “ರೇಸ್’ ಚಿತ್ರಗಳ ಕೆಟಗರಿಗೆ ಸೇರುವ ಚಿತ್ರ ಇದಾಗಿದ್ದು, ಕನ್ನಡಿಗರಿಗೆ ಹೊಸತನ ಚಿತ್ರ ಕೊಡುವ ಪ್ರಯತ್ನ ಮಾಡಲಾಗಿದೆ’ ಎನ್ನುತ್ತಾರೆ. ಇಲ್ಲಿ ಮಾಸ್ಕ್ ಮ್ಯಾನ್ ಒಬ್ಬನ ವಿಚಿತ್ರ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ.
ಒಬ್ಬ ಮಾಸ್ಕ್ ಮ್ಯಾನ್ ಚಿತ್ರದ ಹೈಲೈಟ್. ಜೊತೆಗೆ ಒಬ್ಬ ಹುಡುಗ, ಹುಡುಗಿಯ ನಡುವಿನ ಲವ್ ಸ್ಟೋರಿ ಸಹ ಚಿತ್ರದ ಜೀವಾಳ. ಇಲ್ಲಿ ಮಾಸ್ಕ್ ಮ್ಯಾನ್ ಮೂಡಿಸುವ ಅಚ್ಚರಿಗಳು, ಊಹಿಸಲಾಗದಂತೆ ಕೊಡುವ ಟ್ವಿಸ್ಟ್‌ಗಳು, ಬರುವ ಪ್ರತಿ ಪಾತ್ರದ ಭಾವನೆಗಳ ತೊಳಲಾಟ, ಹುಚ್ಚು ಪ್ರೀತಿ, ದ್ವೇಷ, ಅಸೂಯೆ, ಒಂಟಿತನ, ಹತಾಶೆ ಮತ್ತು ಸಂಬಂಧಗಳ ಘರ್ಷಣೆ ಇತ್ಯಾದಿ ವಿಷಯಗಳು ಅಡಕವಾಗಿವೆ’ ಎನ್ನುತ್ತಾರೆ ಸಮರ್ಥ್.
ಇದನ್ನೂ ಓದಿ: “ಕನ್ನಡತಿ’ ಹೀರೋ ಈಗ ಬಹದ್ದೂರ್ ಗಂಡು
ಚಿತ್ರಕ್ಕೆ ಮೋಹನ್ ಧನ್‌ರಾಜ್ ನಾಯಕರಾಗಿದ್ದಾರೆ. ಬಾಲಿವುಡ್‌ನ ಐದಾರು ಚಿತ್ರಗಳಲ್ಲಿ ನಟಿಸಿರುವ ಮೋಹನ್ ಧನ್‌ರಾಜ್ ಮೂಲತಃ ಕನ್ನಡಿಗ. ಎಂಬಿಎ ಓದಿ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದವರು ಬಾಲಿವುಡ್‌ಗೆ ಬಂದು, ಅಲ್ಲಿಂದ ಈಗ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.
ಇನ್ನು, ಆರಾಧ್ಯ ಲಕ್ಷ್ಮಣ್ ನಾಯಕಿ. ಇವರಿಗೆ ಇದು ಮೊದಲ ಚಿತ್ರ. ಮಾಡೆಲ್ ಆಗಿರುವ ಆರಾಧ್ಯ ಹಲವು ಕಮರ್ಷಿಯಲ್ ಆ್ಯಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಿನಿಮಾ ಬಗೆಗಿನ ತಮ್ಮ ಅನುಭವ ಹಂಚಿಕೊಂಡರು. ಸುಮಾರು 70 ದಿನಗಳ ಕಾಲ ಬೆಂಗಳೂರು, ಹಾಸನ, ಕಾರವಾರ, ಗೋಕಾಕ್, ಗೋವಾ ಸಮೀಪದ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.