ಮಾನ್ಸೂನ್ ಮಳೆಯಲ್ಲಿ ಮಿಂದೆದ್ದ ಧನಂಜಯ್-ರಚಿತಾ: ಬೋಲ್ಡ್ ಪಾತ್ರದಲ್ಲಿ ಡಿಂಪಲ್ ಕ್ವೀನ್
Team Udayavani, Aug 14, 2021, 8:59 AM IST
ಧನಂಜಯ್ ಹಾಗೂ ರಚಿತಾ ರಾಮ್ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾವೊಂದು ತಯಾರಾಗುತ್ತಿದ್ದ ವಿಷಯ ನಿಮಗೆ ಗೊತ್ತೇ ಇದೆ. ಆದರೆ, ಚಿತ್ರತಂಡ ಮಾತ್ರ ಈ ಸಿನಿಮಾದ ಕುರಿತಾಗಿ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಈಗ ಚಿತ್ರದ ಟೈಟಲ್ ಹಾಗೂ ಫಸ್ಟ್‌ಲುಕ್ ಟೀಸರ್ ಬಿಡುಗಡೆ ಮಾಡಿದೆ. ಚಿತ್ರಕ್ಕೆ “ಮಾನ್ಸೂನ್ ರಾಗ’ ಎಂದು ಟೈಟಲ್ ಇಡಲಾಗಿದ್ದು, ಆ್ಯಕ್ಷನ್ ಜೊತೆಗೆ ಲವ್ ಸ್ಟೋರಿ ಇರೋದು ಎದ್ದುಕಾಣುತ್ತದೆ.
ಇಲ್ಲಿ ಗಮನಿಸಬೇಕಾದ ಮತ್ತೂಂದು ಅಂಶವೆಂದರೆ ರಚಿತಾ ರಾಮ್ ಪಾತ್ರ. ಚಿತ್ರದಲ್ಲಿ ರಚಿತಾ ತುಂಬಾ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಸವಾಲಿನ ಪಾತ್ರವಾಗಿದ್ದು, ರಚಿತಾ ರಾಮ್ ಧೈರ್ಯದಿಂದ ಈ ಪಾತ್ರ ಮಾಡಿದ್ದಾರೆ. ಟೀಸರ್‌ನಲ್ಲಿ ಬರುವಕೆಲವು ದೃಶ್ಯಗಳನ್ನು ನೋಡಿದಾಗ ರಚಿತಾ ಸಖತ್ ಬೋಲ್ಡ್ ಪಾತ್ರ ಮಾಡಿರೋದು ಗೊತ್ತಾಗುತ್ತದೆ.
ವಿಖ್ಯಾತ್ ಈ ಸಿನಿಮಾದ ನಿರ್ಮಾಪಕರು. ಈಗಾಗಲೇ “ಇನ್ಸ್‌ಪೆಕ್ಟರ್ ವಿಕ್ರಂ’ ಸಿನಿಮಾ ಮಾಡಿರುವ ವಿಖ್ಯಾತ್ ಈಗ “ಮಾನ್ಸೂನ್ ರಾಗ’ ಸಿನಿಮಾ ಮಾಡಿದ್ದಾರೆ. ರವೀಂದ್ರನಾಥ್ ಚಿತ್ರದ ನಿರ್ದೇಶಕರು. ಈ ಹಿಂದೆ “ಪುಷ್ಪಕ ವಿಮಾನ’ ಸಿನಿಮಾ ನಿರ್ದೇಶಿಸಿದ ರವೀಂದ್ರ ನಾಥ್ ಈಗ “ಮಾನ್ಸೂನ್ ರಾಗ’ ಮಾಡಿದ್ದಾರೆ. ಚಿತ್ರತಂಡ ಹೇಳುವಂತೆ, “ಮಾನ್ಸೂನ್ ರಾಗ’ ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಸಿನಿಮಾ.
ಇದನ್ನೂ ಓದಿ:ಬಹುಪತ್ನಿ ವಂಚಕನ ವಿರುದ್ಧ ನ್ಯಾಯಕ್ಕಾಗಿ ಮೊರೆ !
ಅವರದ್ದೇ ಮಾತಲ್ಲಿ ಹೇಳುವುದಾದರೆ ಕಲ್ಟ್ ಸಿನಿಮಾ. ಚಿತ್ರದ ಕಥೆ ಕೂಡಾ ವಿಭಿನ್ನ ಲೊಕೇಶನ್ ಅನ್ನು ಬಯಸಿದ್ದರಿಂದ, ಕುಂದಾಪುರದ ಬೀಚ್, ಪೋರ್ಟ್, ಆಗುಂಬೆ, ಗಂಗೊಳ್ಳಿ, ಶೃಂಗೇರಿ, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.