ಮಡಿಕೇರಿಯಲ್ಲಿ ಉದ್ಘರ್ಷ ಮುಹೂರ್ತ
Team Udayavani, May 9, 2017, 11:40 AM IST
ಸುನೀಲ್‌ಕುಮಾರ್ ದೇಸಾಯಿ “ಉದ್ಘರ್ಷ’ ಎಂಬ ಸಿನಿಮಾ ನಿರ್ದೇಶನಕ್ಕೆ ಅಣಿಯಾಗಿದ್ದಾರೆ ಅಂತ ಮೊನ್ನೆಯಷ್ಟೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆ ಚಿತ್ರಕ್ಕೀಗ ಮುಹೂರ್ತ ನಡೆದಿದೆ. ಮಡಿಕೇರಿಯ ಕೋಟೆ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ, ಉದ್ಯಮಿ ಪ್ರಕಾಶ್‌ರಾವ್ ಸಾತೆ ಕ್ಲಾಪ್ ಮಾಡಿದ್ದಾರೆ. ಸಂಪತ್‌ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದಾರೆ.
ಬಾಲಿವುಡ್‌ನ ಖಳನಟ ಕಬೀರ್‌ಸಿಂಗ್ ಪುನಃ ಕನ್ನಡಕ್ಕೆ ಆಗಮಿಸಿರುವುದು ವಿಶೇಷ. ಈ ಚಿತ್ರದಲ್ಲಿ ಕಬೀರ್‌ಸಿಂಗ್ ಅವರದು ಖಳನಟನ ಪಾತ್ರ. ಈಗಾಗಲೇ “ಹೆಬ್ಬುಲಿ’ ಮತ್ತು ಮಹೇಶ್‌ಬಾಬು ನಿರ್ದೇಶನದ “ಆ ದಿನಗಳು’ ಚೇತನ್ ಅಭಿನಯದ ಹೊಸ ಚಿತ್ರದಲ್ಲೂ ಕಬೀರ್‌ಸಿಂಗ್ ನಟಿಸಿದ್ದಾರೆ. ಇವರೊಂದಿಗೆ “ಬಾಹುಬಲಿ’ ಖ್ಯಾತಿಯ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸುಮಾರು 30 ದಿನಗಳ ಕಾಲ ಮಡಿಕೇರಿಯಲ್ಲೇ ಚಿತ್ರೀಕರಣಗೊಳ್ಳುವ ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ ಎಂಬುದು ಚಿತ್ರತಂಡದ ಮಾತು. ಒಂದು ಸಿನಿಮಾ ಅಂದಮೇಲೆ, ನಾಯಕ, ನಾಯಕಿ ಪ್ರತಿ ದೃಶ್ಯದಲ್ಲೂ ಕಾಣಿಸಿಕೊಳ್ಳುವುದು ವಾಡಿಕೆ. ಆದರೆ, ಈ ಚಿತ್ರದ ನಾಯಕ ಮತ್ತು ನಾಯಕಿ, ಸಿನಿಮಾ ಶುರುವಾದಾಗಿನಿಂದ ಮುಗಿಯೋವರೆಗೆ ಕೇವಲ ಎರಡು ಸಲ ಮಾತ್ರ ಮುಖಾಮುಖೀಯಾಗಲಿದ್ದಾರಂತೆ.
ಯಾವುದೋ ಒಂದು ಸಮಸ್ಯೆಗೆ ಸಿಲುಕುವ ಒಂದು ಜೋಡಿಯ ಸುತ್ತವೇ ಕಥೆ ಸಾಗಲದ್ದು, ಇದೊಂದು ಪಕ್ಕಾ ಥ್ರಿಲ್ಲರ್ ಸ್ಟೋರಿ ಎನ್ನುತ್ತೆ ಚಿತ್ರತಂಡ. ಈ ಚಿತ್ರಕ್ಕೆ ಠಾಕೂರ್ ಅನೂಪ್ ಸಿಂಗ್ ಹೀರೋ ಆಗಿದ್ದಾರೆ. ಮೂಲತಃ ಬಾಡಿಬಿಲ್ಡರ್ ಆಗಿರುವ ಅನೂಪ್ ಸಿಂಗ್ ಗೋಲ್ಡ್ ಮೆಡಲ್ ಗೆದ್ದಿದ್ದಾರೆ. ಇನ್ನು, ಇವರಿಗೆ ಧನ್ಸಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕರೀಷ್ಮಾ ಸೇರಿದಂತೆ ಇತರೆ ಕಲಾವಿದರು ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.