‘ಮೂಕಜ್ಜಿ’ಗೆ ಮಹಾನಗರದ ಮಾಲ್ ಗಳಲ್ಲಿ ಭರ್ಜರಿ ರೆಸ್ಪಾನ್ಸ್
Team Udayavani, Dec 1, 2019, 5:50 PM IST
ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರ ‘ಮೂಕಜ್ಜಿಯ ಕನಸುಗಳು’ ಇದೀಗ ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಇದೀಗ ನಿಧಾನವಾಗಿ ಸಿನಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಕುರಿತಾಗಿ ಇಂದು ಟ್ವೀಟ್ ಒಂದನ್ನು ಮಾಡಿರುವ ನಿರ್ದೇಶಕ ಪಿ. ಶೇಷಾದ್ರಿ ಅವರು ‘ಮೂಕಜ್ಜಿ ಗೆದ್ದಳು’ ಇಂದಿನ ಜಯನಗರದ ಗರುಡ ಸ್ವಾಗತ್ ಮತ್ತು ರಾಜಾಜಿನಗರದ ಓರಿಯನ್ ಮಾಲ್ ಬುಕ್ಕಿಂಗ್ ಸ್ಟೇಟಸ್’ ಎಂದು ಅವಿಗಳ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ.
ಈ ಸ್ಕ್ರೀನ್ ಗಳಲ್ಲಿ ಆದಿತ್ಯವಾರದ ಪ್ರದರ್ಶನಗಳು ಬಹುತೇಕ ಹೌಸ್ ಫುಲ್ ಆಗಿರುವುದು ‘ಮೂಕಜ್ಜಿ’ ಚಿತ್ರತಂಡವನ್ನು ಖುಷಿಯಾಗಿಸಿದೆ. ಒಂದೇ ದಿನ 45 ಸಿನೇಮಾಗಳು ಬಿಡುಗಡೆಗೊಂಡಿದ್ದರೂ, ಇವುಗಳ ಭರಾಟೆಯ ನಡುವೆ ಮೂಕಜ್ಜಿಗೆ ನಿಧಾನವಾಗಿಯಾದರೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿರುವುದು ಆಶಾದಾಯಕ ಬೆಳವಣಿಗೆಯೇ ಸರಿ.
ಮೂಕಜ್ಜಿ ಗೆದ್ದಳು!
ಇಂದಿನ ಜಯನಗರದ Garuda swagath,
ಮತ್ತು ರಾಜಾಜಿನಗರದ Orion Mall booking status!
All most HOUSEFULL !!!
ಒಂದೇ ದಿನ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ 45.
ಈ ಪೈಪೋಟಿಯಲ್ಲಿ ಕೈ ಹಿಡಿದ ಕನ್ನಡಿಗರಿಗೆ ಧನ್ಯವಾದಗಳು
Audience, Thanks for this success! pic.twitter.com/8XnVgaOTWb— P Sheshadri (@psheshadri) December 1, 2019
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.