ಉದಯ ವಾಹಿನಿಯಲ್ಲಿ ತಾಯಿ-ಮಗಳು
Team Udayavani, Aug 23, 2017, 10:39 AM IST
ಶ್ರುತಿ ಈಗ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. ಇದು ಅವರಿಗೆ ಹೊಸದೇನಲ್ಲ. ಆದರೆ, ಈ ಬಾರಿ ಉದಯ ವಾಹಿನಿಯಲ್ಲಿ “ಸತ್ಯಕಥೆ’ ಎಂಬ ಹೊಸ ಕಾರ್ಯಕ್ರಮ ನಡೆಸಿಕೊಡಲು ಅಣಿಯಾಗಿದ್ದಾರೆ. ಆಗಸ್ಟ್ 28 ರಿಂದ ಶುರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1 ಗಂಟೆಗೆ “ಸತ್ಯಕಥೆ’ ಪ್ರಸಾರವಾಗಲಿದೆ.
ಇದು ಬದುಕಿನ ಸತ್ಯಘಟನೆಗಳನ್ನು ಆಧರಿಸಿ ಪ್ರಸ್ತುತ ಪಡಿಸುವ ಕಾರ್ಯಕ್ರಮ. ಬದುಕಿನ ಪಯಣದಲ್ಲಿ ನಾವು ಕಂಡು ಕೇಳರಿಯದ ಸತ್ಯದ ಅನಾವರಣ ಇಲ್ಲಿ ಆಗಲಿದೆ. ಮೇಲ್ನೋಟಕ್ಕೆ ಸತ್ಯದಂತೆ ಕಾಣುವ ಸುಳ್ಳಿನ ಪೊರೆ ಕಳಚಿ ಸತ್ಯ ದರ್ಶನ ಮಾಡಿಸುವುದೇ ಸತ್ಯಕಥೆ. ಈ ಕಾರ್ಯಕ್ರಮದಲ್ಲಿ ಶ್ರುತಿ ಅವರು, ಒಬ್ಬ ತಾಯಿಯಾಗಿ, ಸಹೋದರಿಯಾಗಿ, ಜವಾಬ್ದಾರಿಯುತ ಯಜಮಾನಿಯಾಗಿ ಅವರ ದುಃಖ ಆಲಿಸಿ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸಲಿದ್ದಾರೆ.
ಜೀವನದ ಕಷ್ಟಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಾರದೇ ಒದ್ದಾಡುತ್ತಿರುವ ಜೀವಗಳಿಗೆ ಯಾವ ಮುಚ್ಚುಮರೆ ಇಲ್ಲದೆ ತಮ್ಮೊಳಗಿನ ನೋವನ್ನು ಹೇಳಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಯಾಗಿದೆ. ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿದ್ದು ಮುಖ್ಯವಾಗಿ ದಂಪತಿ, ತಂದೆ-ತಾಯಿ, ಅತ್ತೆ-ಮಾವ, ಪೋಷಕರು ಮತ್ತು ಮಕ್ಕಳ ಮನಸುಗಳ ನಡುವೆ ಭಾವನೆಗಳ ಎರಕ ಹೊಯ್ಯುವ ಉದ್ದೇಶ ಹೊಂದಿದೆ. ಇಲ್ಲಿ ಬರುವ ಮನಸ್ಸುಗಳಿಗೆ ಕಾನೂನು ಸಲಹೆ ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವೂ ಆಗಲಿದೆ.
ಅಮ್ಮನ ಕೈ ರುಚಿ
ಅತ್ತ ಶ್ರುತಿ ಅವರು “ಸತ್ಯಕಥೆ’ ಕಾರ್ಯಕ್ರಮ ನಡೆಸಿಕೊಟ್ಟರೆ, ಅವರ ತಾಯಿ ರುಕ್ಮಿಣಿ ಅವರು “ಕೈ ರುಚಿ’ ಎಂಬ ಹೊಸ ಅಡುಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆಗಸ್ಟ್ 28 ರಿಂದ ಮಧ್ಯಾಹ್ನ 12ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಅಡುಗೆ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕಿಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಅತಿಥಿಗಳ ಕಿರುಪರಿಚಯ ಜೊತೆಗೆ ಆ ಸಾಧಕಿಯ ಆಯ್ಕೆಯ ವಿಶೇಷ ಖಾದ್ಯವನ್ನು ಅವರಿಂದಲೇ ಮಾಡಿಸಲಾಗುವುದು. ರುಕ್ಮಿಣಿ ಅವರು ಹಳ್ಳಿ ಸೊಗಡಿರುವ ಸಾಂಪ್ರದಾಯಿಕ ಶೈಲಿಯಲ್ಲಿ ರುಚಿಕರ ಅಡುಗೆ ಮಾಡುತ್ತಾರೆ. ಈ ಅಜ್ಜಿ ಕೈರುಚಿಯನ್ನು ಸವಿಯಲು ಹಿರಿತೆರೆ ಹಾಗೂ ಕಿರುತೆರೆಯ ಕಲಾವಿದರು ಭಾಗವಹಿಸಲಿದ್ದಾರೆ. ಇನ್ನು, ಕಿರುತೆರೆಯ ನಟಿ ಸ್ವಾತಿ ಅವರು “ಕೈರುಚಿ’ಯ ನಿರೂಪಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.