ಚಿತ್ರ ವಿಮರ್ಶೆ: ಡೊಳ್ಳಿನ ಸದ್ದಿನಲ್ಲಿ ಮೂಡಿಬಂದ ಪಾರಂಪರಿಕ ಕಲೆ
Team Udayavani, Aug 27, 2022, 2:40 PM IST
ಇಂದಿನ ತಾಂತ್ರಿಕ ಬದುಕಿನಲ್ಲಿ ಉದ್ಯೋಗದ ಕನಸೇರಿ, ಹಣಗಳಿಸುವ ಆಸೆಯನ್ನು ಹೊತ್ತು, ಮಹಾನಗರಗಳ ಬಣ್ಣದ ಬದುಕಿಗೆ ಮರುಳಾಗಿ, ತನ್ನ ನೆಲ-ಜನರನ್ನು ಬಿಟ್ಟು ಮತ್ತೆಲ್ಲೋ ಹೋಗುವುದು ಸಾಮಾನ್ಯ.
ಆದರೆ, ಮೂಲ ದಲ್ಲಿರುವ ವೈಶಿಷ್ಟ್ಯತೆ, ಮಹತ್ವನ್ನು ಮರೆತು ಬಿಟ್ಟು ಮುನ್ನೆಡೆದರೆ ಅದರ ಉಳಿಯುವಿಕೆ ಬಹಳ ಕಷ್ಟ. ಅದೆಷ್ಟೋ ಜಾನಪದ ಕಲೆಗಳು, ನೃತ್ಯಗಳು, ಕೈಗಾರಿಕೆಗಳನ್ನು ಯುವ ಪೀಳಿಗೆ ಬಿಟ್ಟು ಮುಂದೆ ಬಂದಿದ್ದು, ಕ್ರಮೇಣ ಮರೆಯಾಗುತ್ತಿವೆ.
ಅಂಥದ್ದೇ ಒಂದು ಶ್ರೇಷ್ಠ ಜಾನಪದ ಕಲೆ ಕುರಿತು ನಿರ್ಮಾಣವಾಗಿರುವ ಚಿತ್ರವೇ “ಡೊಳ್ಳು’. ಹಚ್ಚ ಹಸಿರಿನಿಂದ ಕೂಡಿದ ಆ ಊರಿಗೆ ಜಾನಪದವಾಗಿ, ಹಿರಿಯರಿಂದ ಸಾಗಿ ಬಂದ ಕಲೆ ಡೊಳ್ಳು ಕುಣಿತ. ಅಜ್ಜಿಯ ಬಾಯಲ್ಲಿ ಡೊಳ್ಳಿನ ಕುರಿತಾದ ಜಾನಪದ ಕತೆಯೊಂದಿಗೆ ಪ್ರಾರಂಭವಾಗುವ ಚಿತ್ರವು ಡೊಳ್ಳಿನ ಉಗಮದ ಬಗ್ಗೆ ಹೇಳುತ್ತದೆ. ಪಾರಂಪರಿಕವಾಗಿ ಅಪ್ಪನಿಂದ ಬಂದಿರುವ ಡೊಳ್ಳು ಕುಣಿತವನ್ನು ಮುನ್ನೆಡೆಸುವ ಹಂಬಲ ನಾಯಕ ಭದ್ರನದ್ದು. ಆದರೆ ಪ್ರಸ್ತುತ ಸಮಾಜದಲ್ಲಿ ಇರುವ ಮೋಹದ ಬದುಕು, ವೃತ್ತಿ, ದುಡಿಮೆ, ಇವುಗಳನ್ನು ಬಯಸುವ ಹಳ್ಳಿಯ ಯುವಕರು ನಗರಗಳ ಪಾಲಾಗುತ್ತಾರೆ. ಸಂಪ್ರದಾಯದ ಹೆಸರಿನಲ್ಲಿ ಇದ್ದ ಅಡೆತಡೆಗಳನ್ನು ಮೀರಿ ಡೊಳ್ಳು ನೃತ್ಯದ ಪರಂಪರೆಯನ್ನು ಉಳಿಸುವಲ್ಲಿ ನಾಯಕನ ದಾರಿ ಸಾಗುತ್ತದೆ. ಇಲ್ಲಿ ಉಂಟಾಗುವ ಸಮಸ್ಯೆಗಳು, ನಾಯಕ ಅವುಗಳನ್ನು ಸರಿಪಡಿಸುವಲ್ಲಿ ನಡೆಸುವ ಹರಸಾಹಸದ ಕಥೆಯನ್ನು ಡೊಳ್ಳು ಹೇಳುತ್ತದೆ.
ಇದನ್ನೂ ಓದಿ: “ಶಿವ 143” ಚಿತ್ರ ವಿಮರ್ಶೆ: ಪಾಗಲ್ ಪ್ರೇಮಿಯೊಬ್ಬನ ಬದುಕು-ಬವಣೆ
ಡೊಳ್ಳು ಸಾಗರ್ ಪುರಾಣಿಕ್ ಅವರ ನಿರ್ದೇಶ ನದ ಚೊಚ್ಚಲ ಚಿತ್ರವಾಗಿದ್ದು, ಡೊಳ್ಳು ಕುಣಿತ, ಕಲೆಯ ಇಂದಿನ ಸ್ಥಿತಿಗತಿಯನ್ನು ಅಚ್ಚು ಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ. ತಾಂತ್ರಿಕವಾಗಿ ಚಿತ್ರ ಸಾಕಷ್ಟು ಮುಂದಿದೆ. ಛಾಯಾಗ್ರಾಹಕ ಅಭಿಲಾಷ್ ಅವರ ಕ್ಯಾಮರಾ ಕಣ್ಣಿನಿಂದ ಮಲೆನಾಡಿನ ಪರಿಸರವನ್ನು ಸುಂದರವಾಗಿ ಸೆರೆಹಿಡಿದಿದ್ದಾರೆ. ಚಿತ್ರದ ಪ್ಲಸ್ ಪಾಯಿಂಟ್ ಆಗಿರುವ ಸೌಂಡಿಂಗ್ಸ್ ಅದ್ಭುತವಾಗಿ ಮೂಡಿಬಂದಿದ್ದು, ಡೊಳ್ಳು ಕುಣಿತ, ಹಳ್ಳಿಯ ಸೊಗಡು, ನಗರ ಜೀವನದ ಅಂಶಗಳನ್ನು ಶಬ್ಧದ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ.
ಚಿತ್ರ ಗಂಭೀರ ವಿಷಯಗಳನ್ನು ಒಳಗೊಂಡ ಸಂದೇಶ ಸಾರುವ ಚಿತ್ರವಾದ್ದರಿಂದ ಕಮರ್ಷಿಯಲ್ ಅನ್ನುವ ಮನರಂಜನೆಗಳು ಕೊಂಚ ಕಡಿಮೆ ಇದ್ದರೂ. ಚಿತ್ರದ ಹಾಡುಗಳು, ಡೊಳ್ಳಿನ ಕುಣಿತದ ಸನ್ನಿವೇಶಗಳು ಪ್ರೇಕ್ಷಕರನ್ನು ಸೆಳೆಯುತ್ತದೆ. ನಟ ಕಾರ್ತಿಕ್ ತಮ್ಮ ಮೊದಲ ಚಿತ್ರದಲ್ಲಿ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಪ್ರತಿಭೆ ನಿಧಿ ಹೆಗಡೆ, ಶರಣ್ಯಾ ಸುರೇಶ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬಾಬು ಹಿರಣಯ್ನಾ, ಚಂದ್ರ ಮಯೂರ್ ಪಾತ್ರವೂ ಕಥೆಗೆ ಜೀವತುಂಬಿದೆ.
–ವಾಣಿ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.