ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ : ಪ್ರೇಕ್ಷಕರನ್ನು ಸೆಳೆಯಲು ಮುಂದುವರೆದ ಕಸರತ್ತು
ಸ್ಯಾಂಡಲ್‌ವುಡ್ ತಾರೆಯರ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ
Team Udayavani, Nov 18, 2020, 12:29 PM IST
ಸಿನಿಪ್ರಿಯರನ್ನು ಮತ್ತೆ ಥಿಯೇಟರ್‌ಗಳು- ಮಲ್ಟಿಪ್ಲೆಕ್ಸ್‌ಗಳತ್ತಕರೆತರಲು ಸ್ವತಃ ಕನ್ನಡ ಚಿತ್ರರಂಗದ ತಾರೆಯರೇ ಅಖಾಡಕ್ಕೆ ಇಳಿದಿದ್ದಾರೆ. ಇದರ ಭಾಗವಾಗಿ “ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ’ ಎನ್ನುವ ಹೆಸರಿನಲ್ಲಿ ಕಲಾವಿದರು ಒಂದು ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪುನಃ ಸಿನಿಮಾಗಳ ಪ್ರದರ್ಶನಕ್ಕೆ ಸರ್ಕಾರ ಶರತ್ತುಬದ್ಧ ಅನುಮತಿ ನೀಡಿದೆ. ಇದೇ ಖುಷಿಯಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಕೂಡ ಭರ್ಜರಿಯಾಗಿಯೇ ಪುನಾರಂಭಗೊಂಡು ಪ್ರೇಕ್ಷಕರ ಸ್ವಾಗತಕ್ಕೆ ನಿಂತಿವೆ. ಅದರ ಭಾಗವಾಗಿ ಈಗಾಗಲೇ ಸೂಪರ್ ಹಿಟ್ ಆದ ಒಂದಷ್ಟು ಸ್ಟಾರ್ ನಟರ ಸಿನಿಮಾಗಳು ರೀ-ರಿಲೀಸ್ ಆಗಿದ್ದವು. ಆದರೆ ಥಿಯೇಟರ್‌ಗಳು – ಮಲ್ಟಿಪ್ಲೆಕ್ಸ್‌ಗಳು ತೆರೆದು ಒಂದು ತಿಂಗಳಾಗುತ್ತ ಬಂದರೂ, ಅಂದುಕೊಂಡಂತೆ ಪ್ರೇಕ್ಷಕ ಪ್ರಭುಗಳು ನಿರೀಕ್ಷಿತ ಸಂಖ್ಯೆಯಲ್ಲಿ ಥಿಯೇಟರ್‌ಗಳಕಡೆಗೆ ಮುಖ ಮಾಡುತ್ತಿಲ್ಲ. ಇದು ಸಹಜವಾಗಿಯೇ ಚಿತ್ರರಂಗದ ಮಂದಿಯ ಆತಂಕ, ಬೇಸರ ಎರಡಕ್ಕೂ ಕಾರಣವಾಗಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಚಿತ್ರೋದ್ಯಮದ ಮಂದಿ ಪ್ರೇಕ್ಷಕರನ್ನು ಥಿಯೇಟರ್‌ಗಳು – ಮಲ್ಟಿಪ್ಲೆಕ್ಸ್ ಗಳತ್ತಕರೆತರುವಕರಸತ್ತು ಮುಂದುವರೆಸಿದ್ದಾರೆ.
ಹೌದು, ಕೋವಿಡ್ ಆತಂಕದಿಂದ ಬೆಚ್ಚಿ, ಮನೆಯಲ್ಲೇ ಬೆಚ್ಚಗೇಕುಳಿತ ಸಿನಿಪ್ರಿಯರನ್ನು ಮತ್ತೆ ಥಿಯೇಟರ್‌ಗಳು – ಮಲ್ಟಿಪ್ಲೆಕ್ಸ್‌ಗಳತ್ತ ಕರೆತರಲು ಸ್ವತಃಕನ್ನಡ ಚಿತ್ರರಂಗದ ತಾರೆಯರೇ ಅಖಾಡಕ್ಕೆ ಇಳಿದಿದ್ದಾರೆ. ಅದರ ಭಾಗವಾಗಿ ಈಗ ಸೋಶಿಯಲ್ ಮೀಡಿಯಾಗಳನ್ನು ವೇದಿಕೆಗಳನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, “ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ’ ಎನ್ನುವ ಹೆಸರಿನಲ್ಲಿಕನ್ನಡದಕಲಾವಿದರು ಒಂದು ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ವಿತರಕ ಕಾರ್ತಿಕ್ ಗೌಡ ನೇತೃತ್ವದಲ್ಲಿ ಚಿತ್ರಮಂದಿರಗಳ ಬಗ್ಗೆ ಮತ್ತೆ ಜನರನ್ನು ವಾಪಸ್ ಚಿತ್ರಮಂದಿರಕ್ಕೆಕರೆತರುವ ಬಗ್ಗೆ ಒಂದು ಭಾವನಾತ್ಮಕ ವಿಡಿಯೋವನ್ನು ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. “ಕೆಆರ್‌ಜಿ ಸ್ಟುಡಿಯೋಸ್’ ಈ ವಿಡಿಯೋವನ್ನು ನಿರ್ಮಿಸಿದ್ದು, ನಟರಾದ ಶಿವರಾಜ್‌ಕುಮಾರ್, ಪುನೀತ್ ರಾಜಕುಮಾರ್, ಗಣೇಶ್, ಶ್ರೀಮುರಳಿ, ದುನಿಯಾ ವಿಜಯ್, ಧನಂಜಜ್ ಮೊದಲಾದ ಸ್ಟಾರ್ ಪ್ರೇಕ್ಷಕರನ್ನು ಥಿಯೇಟರ್‌ಗೆ ಬರುವಂತೆ ಆಹ್ವಾನಿಸಿದ್ದಾರೆ.
ಇನ್ನು ಈ ವಿಡಿಯೋಗೆ ಸಾಮಾಜಿಕ ತಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ನೋಡಿ ಅನೇಕರು ಭಾವುಕರಾಗುತ್ತಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, “ಈ ವಿಡಿಯೋ ನೋಡಿ ಕಣ್ಣೀರು ಬಂತು. ಮೊದಲಿನ ದಿನಗಳು ಮತ್ತೆ ಬರಬೇಕು. ಶಿಳ್ಳೆಯ ಶಬ್ದ ಮತ್ತೆಕೇಳಿಸಬೇಕು, ಸಿನಿಮಾ ಪೋಸ್ಟರ್‌ಗಳು ರಾರಾಜಿಸಬೇಕು, ಶರ್ಟ್ ಹರಿದು ಹೋಗುವ ರೀತಿ ಪ್ರೇಕ್ಷಕರು ಸಂಭ್ರಮಿಸುವುದನ್ನ ನೋಡಬೇಕು. ಚಿತ್ರ ಮಂದಿರಗಳು, ನಮ್ಮ ತಾಯಿ’ ಎಂದು ಭಾವುಕರಾಗಿ ಬರೆದುಕೊಂಡಿದ್ದು,ಕನ್ನಡ ಸಿನಿಮಂದಿಯ ಇಂಥದ್ದೊಂದು ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ವಿಡಿಯೋದಲ್ಲಿ ಅಂತದ್ದೇನಿದೆ? : ಕೋವಿಡ್ ಲಾಕ್‌ಡೌನ್‌ನಿಂದಾಗಿ ಸುಮಾರು ಏಳು ತಿಂಗಳ ಬಳಿಕ ಚಿತ್ರಮಂದಿರಗಳು ಓಪನ್ ಆಗಿವೆ. ಈಗಲಾದರೂ ಪ್ರೇಕ್ಷಕರು ಚಿತ್ರಮಂದಿರಗಳಕಡೆಗೆ ಬರುವಂತಾಗಲಿ ಎಂದು ಚಿತ್ರರಂಗದ ಮಂದಿ ಕಾಯುತ್ತಿದ್ದಾರೆ. ಅಭಿಮಾನಿಗಳು ಮತ್ತು ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆ, ಕೂಗು,ಕುಣಿತ, ಪಟಾಕಿ ಸೌಂಡ್ ಇಂಥ ಸಂಭ್ರಮವನ್ನೆಲ್ಲ ಮತ್ತೆ ನೋಡಬಹುದಾ? ಥಿಯೇಟರ್‌ಗಳಲ್ಲಿ ಮತ್ತೆ ಹಳೆಯ ದಿನಗಳು ಮರುಕಳಿಸುತ್ತಾ? ಎನ್ನುವ ಸಂಗತಿಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.