Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್ ಸಂಚಾರ
Team Udayavani, Feb 24, 2024, 6:22 PM IST
ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳಲ್ಲಿ ಪ್ರೇಕ್ಷಕರು ಮುಖ್ಯವಾಗಿ ಬಯಸೋದು ಕುತೂಹಲ. ಕಥೆ, ತನಿಖೆ ಮುಂದೆ ಹೇಗೆ ಸಾಗುತ್ತದೆ, ಟ್ವಿಸ್ಟ್‌ಗಳು ಯಾವ ರೀತಿ ಎದುರಾಗುತ್ತವೆ ಎಂಬ ಅಂಶವನ್ನು ನೀಟಾಗಿ ಕಟ್ಟಿಕೊಟ್ಟರೆ ಆ ಪ್ರಯತ್ನವನ್ನು ಪ್ರೇಕ್ಷಕ ಮೆಚ್ಚುತ್ತಾನೆ.
ಈ ವಾರ ತೆರೆಗೆ ಬಂದಿರುವ ʼನಟ್ವರ್‌ಲಾಲ್ʼ ಕೂಡಾ ಇದೇ ಹಾದಿಯಲ್ಲಿ ಸಾಗುವ ಸಿನಿಮಾ. ತನಿಖಾ ಹಾದಿ ಯಲ್ಲಿ ಸಾಗುವ ಈ ಚಿತ್ರ ಕ್ಷಣಕ್ಕೊಂದು ತಿರುವು ಪಡೆದುಕೊಂಡು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತದೆ. ಒಬ್ಬ ಸಾದಾಸೀದಾ ಹುಡುಗನ ಜೀವನದಲ್ಲಿ ನಡೆಯುವ ಘಟನೆ ಹೇಗೆ ಆತನನ್ನು ದೊಡ್ಡ ಕ್ರಿಮಿನಲ್ ಆಗಿ ಮಾಡುತ್ತದೆ, ಆತನ ಬಳಸುವ ಟೆಕ್ನಿಕ್ ಏನು, ಆತನ ಹಿಡಿಯಲು ಪೊಲೀಸ್ ಇಲಾಖೆ ಪರದಾಡುವ ರೀತಿಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಆರಂಭದಲ್ಲಿ ಫ್ಯಾಮಿಲಿ ಡ್ರಾಮಾ, ಲವ್, ಜಿಮ್ ಎಲ್ಲವೂ ಬಂದು ಹೋಗುತ್ತದೆ. ಆದರೆ, ದ್ವಿತೀಯಾರ್ಧದ ನಂತರ ಸಿನಿಮಾ ತನಿಖಾ ಹಾದಿಯತ್ತ ಮುಖ ಮಾಡುವ ಮೂಲಕ ಮಗ್ಗುಲು ಬದಲಿಸಿ ಪ್ರೇಕ್ಷಕರಿಗೂ ಹೊಸ ಅನುಭವ ನೀಡುತ್ತದೆ. ನಾಯಕ ಏಕಾಏಕಿ ಕ್ರಿಮಿನಲ್ ಹಾದಿ ಹಿಡಿಯಲು ಕಾರಣವೇನು ಎಂಬ ಕುತೂಹಲವಿದ್ದರೆ ನೀವು “ಮಿಸ್ಟರ್ ನಟ್ವರ್‌ಲಾಲ್’ ನೋಡಬಹುದು. ಇಲ್ಲಿ ಸೈಬರ್ ಕ್ರೈಮ್, ಹ್ಯಾಕರ್ಸ್ ಕೈ ಚಳಕ… ಹೀಗೆ ಅನೇಕ ಅಂಶಗಳು ಬರುತ್ತವೆ.
ನಾಯಕ ತನುಶ್ ಶಿವಣ್ಣ ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ಸೋನಾಲ್, ರಾಜೇಶ್, ನಾಗಭೂಷಣ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.