ಮಿಸಸ್ ನೈನಾ!
Team Udayavani, Jul 5, 2017, 10:45 AM IST
ಶುಕ್ರವಾರ ಬಿಡುಗಡೆಯಾಗುತ್ತಿರುವ “ಕೋಲಾರ’, ಆ ಚಿತ್ರದ ನಾಯಕ ಮತ್ತು ನಾಯಕಿಗೆ ಸಖತ್ ಲಕ್ಕಿಯಂತೆ. ಅದಕ್ಕೆ ಕಾರಣವೇನೆಂದರೆ, ನಾಯಕ ಯೋಗಿ ನವೆಂಬರ್ನಲ್ಲಿ ಮದುವೆಯಾಗುತ್ತಿದ್ದರೆ, ನಾಯಕಿ ನೈನಾ ಈಗಾಗಲೇ ಸದ್ದಿಲ್ಲದೆ ಮದುವೆಯಾಗಿದ್ದಾರೆ. ಸೋಮವಾರ ರಾತ್ರಿ ನಡೆದ “ಕೋಲಾರ’ ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದೆ ನೈನಾ ಈ ವಿಷಯವನ್ನು ಸ್ವತಃ ಸ್ಪಷ್ಟಪಡಿಸಿದ್ದಾರೆ.
ನೈನಾ ಕೈಹಿಡಿದಿರುವುದು ರಾಹುಲ್ ಗೌಡ ಅವರನ್ನು. ಈ ಹಿಂದೆ ರಾಹುಲ್, ಶ್ರೀನಗರ ಕಿಟ್ಟಿ ಅಭಿನಯದ “ಏ ರಾಮ್’ ಎಂಬ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದರು. ಆ ಚಿತ್ರಕ್ಕೆ ನೈನಾ ನಾಯಕಿಯಾಗಿದ್ದರು. ಈಗ ನೈನಾ ಮತ್ತು ರಾಹುಲ್ ಮದುವೆಯಾಗಿದ್ದಾರೆ. ಹಾಗಂತ ಇದು ಲವ್ ಮ್ಯಾರೇಜ್ ಎಂದುಕೊಳ್ಳಬೇಡಿ. ಇದು ಎರಡೂ ಮನೆಯವರು ಒಪ್ಪಿ ಮಾಡಿಸಿದ ಮದುವೆಯಂತೆ.
“ನಾನು ಮದುವೆಯಾಗಬಹುದು ಎಂದು ಕಳೆದ ವರ್ಷವೂ ಅಂದುಕೊಂಡಿರಲಿಲ್ಲ. ಆ ಚಿತ್ರದಲ್ಲಿ ನಟಿಸುವಾಗ ನಮ್ಮ ಮನೆಯವರೇ ಮುಂದೆ ನಿಂತು ಮದುವೆ ಮಾಡಿಸಿದರು. ನಮ್ಮ ತಂದೆ ಜಾತ್ಯಾತೀತ ಮನೋಭಾವದವರು. ನಾನು ಸಿನಿಮಾಗೆ ಬರುವುದಕ್ಕೂ ಅವರೇ ಕಾರಣ, ಹಿಂದೂ ಹುಡುಗನನ್ನು ಮದುವೆಯಾಗೋಕೂ ಅವರೇ ಕಾರಣ. ಮದುವೆ ಹಿಂದು, ಮುಸ್ಲಿಂ ಎರಡೂ ಸಂಪ್ರದಾಯಗಳಲ್ಲಿ ನಡೆಯಿತು. ಈಗ ನಾನು ನೈನಾ ಗೌಡ’ ಎನ್ನುತ್ತಾರೆ ಅವರು.
ಮದುವೆಯಾದ ನಂತರವೂ ಅವಕಾಶ ಸಿಕ್ಕರೆ ನಟನೆಯನ್ನು ಮುಂದುವರೆಸುತ್ತಾರಂತೆ ಅವರು. “ಮನೆಯಲ್ಲಿ ಸಪೋರ್ಟ್ ಇರುವುದರಿಂದ, ಒಳ್ಳೆಯ ಅವಕಾಶ ಬಂದರೆ ನಟಿಸುತ್ತೀನಿ. ಸದ್ಯಕ್ಕೆ ನಮ್ಮ ಯಜಮಾನರ ಪ್ರೈಮರಾ ಡೆವಲಪರ್ಸ್ನಲ್ಲಿ ಎಂ.ಡಿ ಆಗಿಯೂ ಕೆಲಸ ಮಾಡುತ್ತಿದ್ದೀನಿ’ ಎನ್ನುತ್ತಾರೆ ನೈನಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.