400 ಚಿತ್ರಮಂದಿರಗಳಲ್ಲಿ “ಮಫ್ತಿ’ ಹವಾ
Team Udayavani, Nov 30, 2017, 2:35 PM IST
ಶಿವರಾಜಕುಮಾರ್ ಮತ್ತು ಮುರಳಿ ಅಭಿನಯದ “ಮಫ್ತಿ’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಶಿವರಾಜಕುಮಾರ್ ಮತ್ತು ಮುರಳಿ ಅವರ ವೃತ್ತಿಜೀವನದಲ್ಲೇ ಈ ಚಿತ್ರ ಒಂದು ಹೊಸ ಮೈಲಿಗಲ್ಲಾಗಲಿದ್ದು, ದೇಶಾದ್ಯಂತ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಹೌದು, “ಮಫ್ತಿ ಚಿತ್ರವು ದೇಶಾದ್ಯಂತ ಒಟ್ಟು 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕವೊಂದರಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದಂತೆ. ಇನ್ನು ಚೆನ್ನೈ, ಮುಂಬೈ ಮುಂತಾದ ನಗರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಪಕ್ಕಾ ಪರಭಾಷಾ ಚಿತ್ರಮಂದಿರಗಳೆಂದೇ ಗುರುತಿಸಿಕೊಂಡಿರುವ ಬೆಂಗಳೂರಿನ ರೆಕ್ಸ್ ಹಾಗೂ ಊರ್ವಶಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಪೈಕಿ ರೆಕ್ಸ್‌ನಲ್ಲಿ ರಾತ್ರಿ ಪ್ರದರ್ಶನ ಕಂಡರೆ, ಊರ್ವಶಿಯಲ್ಲಿ ದಿನವಹಿ ನಾಲ್ಕು ಪ್ರದರ್ಶನ ಕಾಣಲಿದೆ. ಚಿತ್ರವು ನಾಳೆ ಬೆಳಗ್ಗಿನ ಜಾವದಿಂದಲೇ ಶುರುವಾಗಲಿದ್ದು, ಮುಂಜಾನೆ ಐದಕ್ಕೇ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ.
“ಮಫ್ತಿ’ ಚಿತ್ರದಲ್ಲಿ ಶಿವರಾಜಕುಮಾರ್ ಮತ್ತು ಮುರಳಿ ಅವರ ಜೊತೆಗೆ ಸಾನ್ವಿ ಶ್ರೀವಾತ್ಸವ್, ವಸಿಷ್ಠ ಸಿಂಹ, ಮಧು ಗುರುಸ್ವಾಮಿ, ಬಾಬು ಹಿರಣ್ಣಯ್ಯ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವುದು ನರ್ತನ್. ಇನ್ನು ನವೀನ್ ಕುಮಾರ್ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.