ಲಂಡನ್‌ನಲ್ಲಿ ಲಂಭೋದರನಿಗೆ ಮುಹೂರ್ತ
Team Udayavani, Mar 20, 2018, 11:25 AM IST
ಈ ಬಾರಿಯ “ಬಿಗ್‌ಬಾಸ್’ ಮನೆಯಿಂದ ಹೊರ ಬಂದವರಿಗೆ ಅಂಥದ್ದೇನೂ ಅದೃಷ್ಟ ಇಲ್ಲವಾದರೂ, ಕೆಲವರಿಗೆ ಮಾತ್ರ ಸಿನಿಮಾ ಕೈ ಹಿಡಿದಿದೆ. ಇತ್ತೀಚೆಗೆ ಜೆಕೆ ಮತ್ತು ಅನುಪಮಾ ಅವರೂ “ಕರಾಳ ರಾತ್ರಿ’ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ಬಿಗ್‌ಬಾಸ್ ಮನೆಯಲ್ಲಿದ್ದು ಶ್ರುತಿ ಪ್ರಕಾಶ್ ಕೂಡ ಹೊಸ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಆ ಚಿತ್ರಕ್ಕೆ “ಲಂಡನ್‌ನಲ್ಲಿ ಲಂಭೋದರ’ ಎಂದು ನಾಮಕರಣ ಮಾಡಲಾಗಿದೆ.
ಮೈ ಮಾಸ್ಟರ್ ಮೂವೀಸ್ ಬ್ಯಾನರ್‌ನಡಿ ಸುದರ್ಶನ್ ಬಿ ನಿರ್ಮಿಸುತ್ತಿದ್ದಾರೆ. ಇದು ಇವರ ಮೊದಲ ನಿರ್ಮಾಣದ ಸಿನಿಮಾ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ಲಂಡನ್‌ನಲ್ಲಿ ನೆಲೆಸಿರುವ ಕನ್ನಡಿಗರ ಲಂಡನ್ ಸ್ಕ್ರೀನ್ಸ್ ತಂಡ ಸಾಥ್ ನೀಡಿದೆ. ಚಿತ್ರಕ್ಕೆ ರಾಜ್ ಸೂರ್ಯ ನಿರ್ದೇಶಕರು. ಬೆಂಗಳೂರಿನ ಯುವಕನೊಬ್ಬ ಹಲವು ನಂಬಿಕೆಗಳನ್ನು ಹೊತ್ತು, ಲಂಡನ್‌ಗೆ ಹಾರುತ್ತಾನೆ.
ಅಲ್ಲಿ ಹೋದವನಿಗೆ ಎದುರಾಗುವ ಕಷ್ಟಗಳು ಮತ್ತು ಒಂದಷ್ಟು ಸಮಸ್ಯೆಗಳು ಹೇಗೆ ಹಾಸ್ಯರೂಪ ಪಡೆಯುತ್ತವೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಲಂಡನ್‌ನಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣ ನೆರವೇರಲಿದೆ. ಚಿತ್ರಕ್ಕೆ ಲಂಡನ್ ಕನ್ನಡಿಗ ಸಂತು ಹೀರೋ ಆಗಿದ್ದಾರೆ. ಉಳಿದಂತೆ ಸಾಧು ಕೋಕಿಲ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸಂಪತ್‌ರಾಜ್, ಅರುಣ ಬಾಲರಾಜ್, ಕುರಿ ಪ್ರತಾಪ್, ಗಿರಿ ಇತರರು ನಟಿಸುತ್ತಿದ್ದಾರೆ.
ಪಣಿಧರ್ ರೇವನೂರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಪ್ರಣವ್ ಸಂಗೀತ ನಿರ್ದೇಶನವಿದೆ. ರಂಜಿತ್ ರಾ. ಸ., ಹೈದರಾಬಾದ್ ಗಣೇಶ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ ಸಾಹಿತ್ಯವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭಕ್ಕೆ ಸಾಧು ಕೋಕಿಲ, ಮಮತಾ ಗೌಡ, ಸತೀಶ್ ಶಾಸ್ತ್ರಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನಿರ್ದೇಶಕ ಸಿಂಪಲ್ ಸುನಿ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ
KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್ ನಗು
ಇನ್ಮುಂದೆ ಶಿವಣ್ಣನಿಗೆ ಡಬಲ್ ಪವರ್ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್ ಹೀರೋ ಮಾತು
ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.