ಮನೋರಂಜನ್ ಚಿತ್ರಕ್ಕೆ ಮುಹೂರ್ತ
Team Udayavani, May 20, 2018, 11:17 AM IST
ಮನೋರಂಜನ್ ಅಭಿನಯದ “ಚಿಲಮ್’ ಚಿತ್ರದ ಬಗ್ಗೆ ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ನಾನಾ ಪಾಟೇಕರ್, ರಾಘವೇಂದ್ರ ರಾಜಕುಮಾರ್ ಕೂಡ ನಟಿಸುತ್ತಿದ್ದಾರೆಂಬುದನ್ನೂ ಹೇಳಲಾಗಿತ್ತು. ಈಗ ಹೊಸ ಸುದ್ದಿಯೆಂದರೆ, ಶುಕ್ರವಾರ ದೇವಸ್ಥಾನವೊಂದರಲ್ಲಿ “ಚಿಲಮ್’ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ನಿರ್ದೇಶಕಿ ಚಂದ್ರಕಲಾ ಅವರು ತಮ್ಮ ಚಿತ್ರತಂಡದ ಜೊತೆಗೆ ಪೂಜೆ ನೆರವೇರಿಸಿ, ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.
ಚಿತ್ರದ ನಾಯಕ ಮನೋರಂಜನ್ ಹೊರತುಪಡಿಸಿ, ಚಿತ್ರತಂಡ ಪೂಜೆಯಲ್ಲಿ ಭಾಗಿಯಾಗಿತ್ತು. ಮನೋರಂಜನ್ ಬಾರದ ಕಾರಣವಿಷ್ಟೇ, ಅವರು ಚಿತ್ರಕ್ಕಾಗಿ ಸಾಕಷ್ಟು ವಕೌಟ್ ಮಾಡುತ್ತಿದ್ದಾರೆ. ಪಾತ್ರಕ್ಕೆ ಗಡ್ಡ, ಕೂದಲು ಬಿಟ್ಟಿರುವುದರಿಂದ ಆ ಲುಕ್ ಈಗಲೇ ಗೊತ್ತಾಗಬಾರದು ಎಂಬುದು ಚಿತ್ರತಂಡದ ಮಾತು. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಪ್ರಿಯಾಂಕ ತಿಮ್ಮೇಶ್, “ಬಿಗ್ ಬಾಸ್’ ದಿವಾಕರ್, ರಾಘವ್ ನಾಗ್, ಭರತ್ (ನಿರ್ದೇಶಕಿ ಚಂದ್ರಕಲಾ ಅವರ ಮಗ) ಮತ್ತು ಸಂದೀಪ್ ಅವರು ಪೂಜೆಯಲ್ಲಿ ಭಾಗವಹಿಸಿದ್ದರು.
ಈ ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮಾಡಿದರೆ, ನೊಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ಬೆಂಗಳೂರು ಅಲ್ಲದೆ ಗೋವಾ, ಕೊಲ್ಕತ್ತಾ, ಬಿಜಾಪುರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಗೋಪಾಲ್ ಅವರ ನಿರ್ಮಾಣವಿದೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಸರಿತಾ ಆವರು ಮನೋರಂಜನ್ ತಾಯಿಯಾಗಿ ನಟಿಸುತ್ತಿದ್ದಾರೆ.
“ಚಿಲಮ್’ನಲ್ಲಿ ಮನೋರಂಜನ್ ಮೊದಲ ಬಾರಿಗೆ ಡ್ರಗ್ ಡೀಲರ್ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮನು ಅವರದ್ದು ಗಾಂಜ ಡೀಲರ್ ಪಾತ್ರ. ಹಣಕ್ಕಾಗಿ ಕೆಟ್ಟ ದಾರಿ ಹಿಡಿಯುವ ಆ ಪಾತ್ರಕ್ಕೆ, ಒಂದು ಹಂತದಲ್ಲಿ ತನ್ನ ತಪ್ಪಿನ ಅರಿವಾಗುತ್ತದೆ. ಆ ನಂತರ ಏನಾಗುತ್ತದೆ ಎಂಬುದೇ “ಚಿಲಮ್’ ಕಥೆ. ಇನ್ನು, ಮನೋರಂಜನ್ ಅವರ ಫಸ್ಟ್ ಲುಕ್ ರವಿಚಂದ್ರನ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಅದಕ್ಕಾಗಿ ಚಿತ್ರತಂಡ ಎಲ್ಲವನ್ನೂ ತಯಾರಿ ಮಾಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.