ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಡಿ.6ರಂದು ಮುಹೂರ್ತ
Team Udayavani, Dec 2, 2019, 10:15 AM IST
ದರ್ಶನ್ ಅಭಿನಯದ ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರ “ಗಂಡುಗಲಿ ಮದಕರಿ ನಾಯಕ‘ ಚಿತ್ರದ ಚಾಲನೆಗೆ ಇದೀಗ ದಿನಗಣೆ ಶುರುವಾಗಿದೆ.
ಹೌದು, ಸಾಹಿತಿ ಬಿ.ಎಲ್.ವೇಣು ಅವರ ಐತಿಹಾಸಿಕ ಕಾದಂಬರಿ ಆಧಾರಿತ “ಗಂಡುಗಲಿ ಮದಕರಿ ನಾಯಕ‘ ಚಿತ್ರದ ಸಂಭಾಷಣೆ ಕೆಲಸ ಮುಗಿದಿದ್ದು, ನ.29 ರಂದು ಬಿ.ಎಲ್.ವೇಣು ಅವರು ತಾವು ಬರೆದ ಸಂಭಾಷಣೆಯನ್ನು ಚಿತ್ರತಂಡಕ್ಕೆ ಒಪ್ಪಿಸಿದ್ದಾರೆ. ಇತ್ತೀಚೆಗೆ ನಟ ದರ್ಶನ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಡೈಲಾಗ್ ರೀಡಿಂಗ್ ನೀಡಿದ ವೇಣು ಅವರು, ಅಂತಿಮವಾಗಿ ಸಂಭಾಷಣೆಯನ್ನು ಒಪ್ಪಿಸಿದ್ದಾರೆ. ಡಿಸೆಂಬರ್ 6 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.
ಮೇಕೆದಾಟು ಬಳಿಯಲ್ಲಿ ಅದ್ಧೂರಿ ಸೆಟ್ ಹಾಕುವ ಮೂಲಕ ಅಲ್ಲಿ ಕೆಲ ದೃಶ್ಯಗಳನ್ನು ಚಿತ್ರೀಕರಿಸಲು ಚಿತ್ರತಂಡ ತಯಾರು ಮಾಡಿಕೊಂಡಿದೆ. ಹಾಗಾಗಿ, ಮೇಕೆದಾಟು ಬಳಿ ಮುಹೂರ್ತ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಮೇಕದಾಟು ಬಳಿ ಗುರುಕುಲ ಸೆಟ್ ವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಯಾಕೆಂದರೆ, ಚಿತ್ರದಲ್ಲಿ ಹೀರೋ ಶಸ್ತ್ರಾಸ್ತ್ರ ವಿದ್ಯೆಯನ್ನು ಆ ಗುರುಕುಲದಲ್ಲಿ ಕಲಿಯುವ ಸನ್ನಿವೇಶಗಳಿವೆ.
ಸುಮಾರು ಮೂರ್‍ನಾಲ್ಕು ದಿನಗಳ ಕಾಲ ಅಲ್ಲಿ ಚಿತ್ರೀಕರಿಸಿದ ಬಳಿಕ ಬೇರೆಡೆ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ. ಇನ್ನು, ಡಿ.2 ರಂದು (ಇಂದು) “ಗಂಡುಗಲಿ ಮದಕರಿ ನಾಯಕ‘ ಚಿತ್ರದ ನಾಯಕ ದರ್ಶನ್ ಸೇರಿದಂತೆ ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ, ಶ್ರೀನಿವಾಸಮೂರ್ತಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿ, ಚಿತ್ರದುರ್ಗದಲ್ಲಿರುವ ಏಕನಾಥೇಶ್ವರಿ, ಹುಚ್ಚೆಂಗಮ್ಮ, ಬರಗೇರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಚಿತ್ರತಂಡ ಮದಕರಿ ನಾಯಕ ಪ್ರತಿಮೆಗೂ ಮಾಲಾರ್ಪಣೆ ಮಾಡಲಿದೆ. ಈ ಸಂದರ್ಭದಲ್ಲಿ ಚಿತ್ರ ಸಂಭಾಷಣೆಗಾರ ಬಿ.ಎಲ್.ವೇಣು
ಕೂಡ ಚಿತ್ರತಂಡದ ಜೊತೆಗೂಡಲಿದ್ದಾರೆ. ಹಲವು ಬಾರಿ ಸ್ಕ್ರಿಪ್ಟ್ ತಿದ್ದುಪಡಿ ಮಾಡಿದ ಬಳಿಕ ಅಂತಿಮವಾಗಿ ಸಂಭಾಷಣೆ ಪಕ್ಕಾ ಆಗಿದೆ. ಅಂದಹಾಗೆ, ಬಿ.ಎಲ್.ವೇಣು ಅವರು ಈ ಹಿಂದೆ ವಿಷ್ಣುವರ್ಧನ್‌ಅವರಿಗೆ ರೀಡಿಂಗ್ ಕೊಡುತ್ತಿದ್ದರು. ಅದರ ಹೊರತಾಗಿ ಯಾವ ಹೀರೋಗೂ ರೀಡಿಂಗ್ ಕೊಟ್ಟಿರಲಿಲ್ಲ. ಈಗ ದರ್ಶನ್ ಅವರಿಗೆ “ಗಂಡುಗಲಿ ಮದಕರಿ ನಾಯಕ‘ ಚಿತ್ರದ ಸಂಭಾಷಣೆ ರೀಡಿಂಗ್ ಕೊಟ್ಟಿದ್ದು, ದರ್ಶನ್ ಕೂಡ ತಾಳ್ಮೆಯಿಂದಲೇ, ಶ್ರದ್ಧೆಯಿಂದ ಎರಡು ಸಲ ರೀಡಿಂಗ್ ಪಡೆದು ಖುಷಿಯಾಗಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಚಿತ್ರತಂಡ ಸಂತಸದಲ್ಲಿದೆ. ಇದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ತುಂಬಾನೇ ಎಚ್ಚರವಹಿಸಿ, ಏನೆಲ್ಲಾ ಚಿತ್ರಕ್ಕೆ ಬೇಕು, ಎಷ್ಟೆಲ್ಲಾ ಅವಧಿ ಇರಬೇಕು. ಯಾವುದು ಬೇಕು, ಬೇಡ ಎಂಬ ಬಗ್ಗೆ ಯೋಚಿಸಿ, ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.
ದರ್ಶನ್ ಈಗಾಗಲೇ “ಸಂಗೊಳ್ಳಿ ರಾಯಣ್ಣ‘, “ಕುರುಕ್ಷೇತ್ರ‘ ಚಿತ್ರಗಳ ಮೂಲಕ ಜನಮನಗೆದ್ದಿದ್ದರು. ಈಗ ಮಹತ್ವಾಕಾಂಕ್ಷೆಯ “ಗಂಡುಗಲಿ ಮದಕರಿ ನಾಯಕ‘ ಚಿತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಪಡೆದುಕೊಂಡಿದ್ದಾರೆ. ಇಲ್ಲಿ ಮದಕರಿನಾಯಕನ ಖಡಕ್‌ಡೈಲಾಗ್, ಆ ಮೀಸೆ ಮತ್ತು ಎದುರಾಳಿಗಳ ವಿರುದ್ಧಹೋರಾಡುವ ಧೈರ್ಯ ಹೈಲೈಟ್ ಆಗಿದೆ. ಅದೇನೆ ಇರಲಿ, ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ಬಹು ನಿರೀಕ್ಷೆಯ ಚಿತ್ರವಿದು. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಈ ಚಿತ್ರ ದೊಡ್ಡ ಚಾಲೆಂಜ್. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಈಗಾಗಲೇ ಚಿತ್ರಕ್ಕೆ ಎಲ್ಲಾ ತಯಾರಿಮಾಡಿಕೊಂಡಿದ್ದು, ಡಿ.6 ರಂದು ಮುಹೂರ್ತ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ಕೊಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.