ಮುಂಬೈ ಟು ಬೆಂಗಳೂರು
Team Udayavani, Mar 1, 2017, 11:35 AM IST
“ಸ’ ಚಿತ್ರದಲ್ಲಿ ಅವರಿಬ್ಬರೂ ನಟಿಸಿದ್ದರು. ಆ ನಂತರ ಜೆಕೆ ಮತ್ತು ವಿಜಯ್ ಸೂರ್ಯ ಇಬ್ಬರೂ ಕಾರಣಾಂತರಗಳಿಂದ ಚಿತ್ರರಂಗದಿಂದ ದೂರವಾಗಿ, ತಮ್ಮದೇ ಕೆಲಸಗಳಲ್ಲಿ ಮತ್ತು ಪಾತ್ರಗಳಲ್ಲಿ ಬಿಝಿಯಾಗಿದ್ದರು. ಈಗ ಇಬ್ಬರೂ ಚಿತ್ರರಂಗಕ್ಕೆ ವಾಪಸ್ಸು ಬರುತ್ತಿದ್ದಾರೆ. ಇಬ್ಬರದ್ದೂ ಒಂದೊಂದು ಚಿತ್ರ ಪ್ರಾರಂಭವಾಗುತ್ತಿದ್ದು, ಎರಡೂ ಚಿತ್ರಗಳಿಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಜೆಕೆ ಮತ್ತು ವಿಜಯ್ ಸೂರ್ಯ ಯಾವ್ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲವಿದ್ದರೆ ಓದಿ ನೋಡಿ …
ಕಳೆದೊಂದು ವರ್ಷದಲ್ಲಿ ಮುಂಬೈನಲ್ಲಿ “ಸಿಯಾ ಕೆ ರಾಮ್’ ಎಂಬ ಹಿಂದಿ ಧಾರಾವಾಹಿಯಲ್ಲಿ ತೊಡಗಿಸಿಕೊಂಡಿದ್ದ ಜೆಕೆ, ಹೀರೋ ಆಗಿ ಮತ್ತೆ ಹಿರಿತೆರೆಗೆ ಬಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ್ದ “ಜೆಕೆ’, “ಜಸ್ಟ್ ಲವ್’ ಸಿನಿಮಾ ಮೂಲಕ ಸೋಲೋ ಹೀರೋ ಆಗಿದ್ದು, ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದು ನಿಮಗೆ ಗೊತ್ತೇ ಇದೆ. ಆದರೆ, ಯಾಕೋ ಹೀರೋ ಆಗಿ ಜೆಕೆಗೆ ಅದೃಷ್ಟ ಕೈ ಹಿಡಿಯಲಿಲ್ಲ.
ಹಾಗಂತ ಜೆಕೆ ಬೇಸರ ಮಾಡಿಕೊಳ್ಳದೇ, ಮತ್ತೆ ಕಿರುತೆರೆಗೆ ವಾಪಾಸಾದರು. ಜೆಕೆಗೆ ಒಳ್ಳೆಯ ಹೆಸರು ಕೊಟ್ಟಿದ್ದು ಕೂಡಾ ಕಿರುತೆರೆ. “ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಸೂಪರ್‌ಸ್ಟಾರ್ ಪಾತ್ರದಲ್ಲಿ ಮಿಂಚಿದ ಜೆಕೆ, ಆ ನಂತರ ಹಿಂದಿಯ “ಸೀಯಾ ಕೆ ರಾಮ್’ ಧಾರಾವಾಹಿಯಲ್ಲೂ ಬಿಝಿಯಾದರು. ಇಂತಿಪ್ಪ ಜೆಕೆ ಈಗ ಮತ್ತೆ ಸಿನಿಮಾದತ್ತ ಬಂದಿದ್ದಾರೆ. ಅದು ನಾಗೇಂದ್ರ ಅರಸ್ ಸಿನಿಮಾದಲ್ಲಿ.
ನಾಗೇಂದ್ರ ಅರಸ್ ಈಗ ಹೊಸ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದು, ಇತ್ತೀಚೆಗೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿ ಮುದ್ರಣ ಕಾರ್ಯ ಕೂಡಾ ಆರಂಭವಾಗಿದೆ. ಈ ಚಿತ್ರದಲ್ಲಿ ಜೆಕೆ ನಾಯಕರಾಗಿ ನಟಿಸುತ್ತಿದ್ದಾರೆ. ಈ ಹಿಂದೆ “ಜಸ್ಟ್ ಲವ್’ ಮೂಲಕ ಜೆಕೆಗೆ ಸೋಲೋ ಹೀರೋ ಪಟ್ಟ ಕೊಟ್ಟ ನಾಗೇಂದ್ರ ಅರಸ್ ಈಗ ಮತ್ತೂಮ್ಮೆ ಜೆಕೆ ಜೊತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಸದ್ಯ ನಾಗೇಂದ್ರ ಅರಸ್ ನಿರ್ದೇಶನದ “ವರ್ಧನ’ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಅದರ ಬೆನ್ನಲ್ಲೇ ಹೊಸ ಸಿನಿಮಾ ಆರಂಭಿಸಿದ್ದಾರೆ. ವಿ.ಮನೋಹರ್ ಸಂಗೀತ ಮತ್ತು ಅವರದ್ದೇ ಸಾಹಿತ್ಯವಿರುವ “ಆಸೆ ಅಂಗುಲಂಗುಲ, ಬೇಕು ನಿನ್ನ ಬೆಂಬಲ, ಮನಸಿಲ್ಲವಾ ಕನಸಿಲ್ಲವಾ…’ ಎಂಬ ಹಾಡಿಗೆ ಧ್ವನಿ ಮುದ್ರಣ ಮಾಡಲಾಯಿತು. ಏಂಜಲ್ ಪೊ›ಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಮುಖ್ಯ ನಿರ್ಮಾಪಕಿಯಾಗಿರುವ ಮನಿಷಾ ಅವರೇ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಚಿತ್ರದ ಕಥೆಯೂ ಮನಿಷಾ ಅವರದ್ದೇ. ತಾಂಡವ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿ¨ªಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಒಟ್ಟು ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದ್ದು, ಹತ್ತು ದಿನಗಳ ಕಾಲ ಬ್ಯಾಂಕಾಕ್‌ನಲ್ಲಿ ನಡೆಯಲಿದೆ. ಯುಸಿನ್ ಡಿಸೋಜಾ ಛಾಯಾಗ್ರಹಣ, ಕಂಬಿರಾಜ್ ನƒತ್ಯ ನಿರ್ದೇಶನವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.