ಮುರುಳಿ ಹೊಸ ಸಿನಿಮಾ ರಭಸ?
Team Udayavani, Jun 20, 2018, 11:02 AM IST
“ಮಫ್ತಿ’ ಸಿನಿಮಾ ನಂತರ ಶ್ರೀಮುರುಳಿ ಯಾವ ಸಿನಿಮಾ ಮಾಡುತ್ತಾರೆ, ಯಾವ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಾರೆಂಬ ಕುತೂಹಲ ಅನೇಕರಲ್ಲಿತ್ತು. ಅಂತಿಮವಾಗಿ ಚೇತನ್ ಕುಮಾರ್‌ಗೆ ಮುರುಳಿ ಕಾಲ್‌ಶೀಟ್ ನೀಡಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಎಲ್ಲಾ ಓಕೆ, ಮುರುಳಿ ಹೊಸ ಸಿನಿಮಾದ ಶೀರ್ಷಿಕೆ ಏನು ಎಂಬ ಕುತೂಹಲ ಅನೇಕರಲ್ಲಿದೆ.
ಏಕೆಂದರೆ, “ಉಗ್ರಂ’, “ರಥಾವರ’, “ಮಫ್ತಿ’ ತರಹದ ಸಖತ್ ಮಾಸ್ ಟೈಟಲ್‌ನಡಿ ಸಿನಿಮಾ ಮಾಡಿಕೊಂಡು ಬಂದಿರುವ ಮುರುಳಿಯ ಹೊಸ ಸಿನಿಮಾದ ಟೈಟಲ್ ಏನಿರಬಹುದೆಂಬ ಕುತೂಹಲವಿದೆ. ಅದಕ್ಕೆ ಸರಿಯಾಗಿ ನಿರ್ದೇಶಕ ಚೇತನ್ ಕೂಡಾ “ಬಹದ್ದೂರ್’, “ಭರ್ಜರಿ’ ತರಹದ ಆ್ಯಕ್ಷನ್ ಸಿನಿಮಾ ಮಾಡಿದ್ದಾರೆ. ಈಗ ಈ ಇಬ್ಬರು ಜೊತೆಯಾಗಿರುವಾಗ ಸಿನಿಮಾ ಟೈಟಲ್ ಕೂಡಾ ಸ್ಟ್ರಾಂಗ್ ಆಗಿರುತ್ತದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ.
ಮೂಲಗಳ ಪ್ರಕಾರ, ಮುರುಳಿ ಚಿತ್ರಕ್ಕೆ “ರಭಸ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಮೂಲಕ ಮತ್ತೂಂದು ಆ್ಯಕ್ಷನ್ ಸಿನಿಮಾಕ್ಕೆ ಅವರು ಸಿದ್ಧರಾಗಿದ್ದಾರೆ. ಈ ಹಿಂದೆ ಮುರುಳಿ ಸಿನಿಮಾದ ಟೈಟಲ್ ಬಗ್ಗೆ ಮಾತನಾಡುತ್ತಾ, “ಜೋರು’ ಸಿನಿಮಾಕ್ಕೆ ಪರ್ಯಾಯವಾ ಪದವೊಂದು ನನ್ನ ಸಿನಿಮಾ ಟೈಟಲ್ ಆಗಲಿದೆ ಎಂದಿದ್ದರು. ಈಗ ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿಯ ಪ್ರಕಾರ ಮುರುಳಿ ಮುಂದಿನ ಚಿತ್ರ “ರಭಸ’.
ಇನ್ನು, ಚಿತ್ರಕ್ಕೆ ನಾಯಕಿಯ ಆಯ್ಕೆ ಕೂಡಾ ಆಗಿದೆ. ಶ್ರೀಲೀಲಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಾವ ಶ್ರೀಲೀಲಾ ಎಂದು ನೀವು ಕೇಳಿದರೆ “ಕಿಸ್’ ಸಿನಿಮಾ ಬಗ್ಗೆ ಹೇಳಬೇಕಾಗುತ್ತದೆ. ಎ.ಪಿ.ಅರ್ಜುನ್ ನಿರ್ದೇಶನದ “ಕಿಸ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಶ್ರೀಮುರುಳಿಗೆ ಆ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಮುರುಳಿ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.
ಈ ಮೂಲಕ ಮತ್ತೂಂದು ಬಹುತಾರಾಗಣದ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದಂತಾಗುತ್ತದೆ. ಮುರುಳಿ ಹೊಸ ಸಿನಿಮಾದ ಚಿತ್ರೀಕರಣ ಮುಂದಿನ ತಿಂಗಳು 25 ರಿಂದ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣವಾಗಲಿದೆ. ಅಂದಹಾಗೆ, ಮುರುಳಿಯ ಹೊಸ ಸಿನಿಮಾ ಕೂಡಾ ಔಟ್ ಅಂಡ್ ಆ್ಯಕ್ಷನ್ ಆಗಿದ್ದು, ಅಭಿಮಾನಿಗಳು ಇಷ್ಟಪಡುವ ಅಂಶಗಳಿಗೆ ಹೆಚ್ಚಿನ ಒತ್ತುಕೊಡಲಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.