ಗುರು ಕೋವಿಡ್ -19 ಗಾನ!
Team Udayavani, Apr 13, 2020, 9:55 AM IST
ಸದ್ಯ ಎಲ್ಲಿ ನೋಡಿದ್ರೂ ಕೋವಿಡ್ -19 ಬಗ್ಗೆಯೇ ಮಾತು. ಇನ್ನು ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಚಿತ್ರರಂಗದ ಅನೇಕ ಕಲಾವಿದರು ತಂತ್ರಜ್ಞರು ಕೂಡ ಕೊರೊನಾ ವಿರುದ್ದ ಜನ ಜಾಗೃತಿ ಕೆಲಸಕ್ಕೆ ಮುಂದಾಗುತ್ತಿದ್ದಾ.
ಈಗಾಗಲೆ ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್, ರಜನಿಕಾಂತ್ ಮೊದಲಾದ ಸ್ಟಾರ್ಸ್ ಸೇರಿಕೊಂಡು ಮಾಡಿದ್ದ ಫ್ಯಾಮಿಲಿ’ ಕಿರುಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ರೆಸ್ಪಾನ್ಸ್ ಸಿಕ್ಕಿತ್ತು. ಅದಾದ ನಂತರ ಅದೇ ಕಿರುಚಿತ್ರದಿಂದ ಪ್ರೇರಣೆಗೊಂಡು ಪವನ್ ಒಡೆಯರ್ ಕೂಡ ಒಂದು ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಇದರ ನಡುವೆ ಎಸ್ ಪಿ.ಬಿ, ಚಂದನ್ ಶೆಟ್ಟಿ ಮೊದಲಾದವರು ತಮ್ಮ ಹಾಡುಗಳ ಮೂಲಕ ಕೋವಿಡ್ -19 ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.
ಈಗ ಕನ್ನಡದ ಮತ್ತೂಬ್ಬ ಸಂಗೀತ ನಿರ್ದೇಶಕ ಕಂ ಗಾಯಕ ಗುರುಕಿರಣ್ ಅಂಥದ್ದೇ ಮತ್ತೂಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಗುರುಕಿರಣ್ ಕೋವಿಡ್ -19 ಬಗ್ಗೆ ವಿಶೇಷವಾದ ಹಾಡೊಂದಕ್ಕೆ ಸ್ವರ ಸಂಯೋ ಜಿಸಿದ್ದು, ಆ ಹಾಡಿಗೆ ತಾವೇ ಸಾಹಿತ್ಯ ಬರೆ ದು ಧ್ವನಿ ಕೂಡ ನೀಡಿದ್ದಾರೆ. ಕೋವಿಡ್ -19 ಲಾಕ್ ಡೌನ್ ವೇಳೆಯಲ್ಲಿ ಗುರುಕಿರಣ್ ಈ ಹಾಡನ್ನು ಸಂಯೋಜಿಸಿದ್ದು, ಸೋಮವಾರ ಈ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗುತ್ತಿದೆ.ಕೋವಿಡ್ -19 ವಿರುದ್ದ ನಡೆಯುತ್ತಿರುವ ಈ ಹೋರಾಟದಲ್ಲಿ ನಾವೆಲ್ಲ ಗೆದ್ದೇ ಗೆಲ್ಲುತ್ತೇವೆ. ಕೊರೊನಾವನ್ನೇ ಕೊಲ್ಲುತ್ತೇವೆ ಎಂಬ ಭರವಸೆಯ ಈ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿಬಂದಿದೆ. ಅನಿರೀಕ್ಷಿತವಾಗಿ ಇಂದು ಎಲ್ಲರನ್ನೂ ಕೋವಿಡ್ -19 ಭಾದಿಸುತ್ತಿದೆ. ಇದೆಲ್ಲದರಿಂದ ಎಲ್ಲರೂ ಹೊರಬರಬೇಕಾಗಿದೆ. ಆದಷ್ಟು ಬೇಗ ಎಲ್ಲರೂ ಕೊರೊನಾ ಸಂಕಟದಿಂದ ಹೊರಬರೋಣ ಎನ್ನುವ ಆಶಯದಿಂದ ಈ ಗೀತೆ ಮಾಡಿದ್ದೇನೆ ಎಂದು ವಿವರಣೆ ಕೊಡುತ್ತಾರೆ ಗುರುಕಿರಣ….
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.