ಅಭಿಮಾನಿಗಳನ್ನು ರಂಜಿಸುವುದಷ್ಟೇ ನನ್ನ ಕೆಲಸ
Team Udayavani, Oct 27, 2018, 10:42 AM IST
“ದಿ ವಿಲನ್’ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದ ಶಿವರಾಜಕುಮಾರ್ ಇದೀಗ ಮತ್ತೂಂದು ಹೊಸ ಅವತಾರದಲ್ಲಿ ಅಭಿಮಾನಿಗಳನ್ನು ಖುಷಿಪಡಿಸಲು ಸಜ್ಜಾಗಿದ್ದಾರೆ. ಇದುವರೆಗೆ ಶಿವರಾಜಕುಮಾರ್ ಅವರನ್ನು ನೋಡದೇ ಇರುವಂತಹ ಪಾತ್ರದಲ್ಲಿ ಅಭಿಮಾನಿಗಳು ನೋಡಿ ಖುಷಿಯಾಗುವ ಸಮಯ ಹತ್ತಿರವಾಗುತ್ತಿದೆ. ಸ್ವತಃ ಶಿವರಾಜಕುಮಾರ್ ಅವರೇ ತಮ್ಮ ಮುಂದಿನ ಚಿತ್ರ ಮತ್ತು ಪಾತ್ರ ಕುರಿತು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅದು “ಕವಚ’. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ಇಷ್ಟರಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಅಣಿಯಾಗುತ್ತಿದೆ. ಆ ಬಗ್ಗೆ ಹೇಳಿಕೊಳ್ಳುವ ಶಿವರಾಜಕುಮಾರ್, “ನನ್ನ ಅಭಿನಯದ “ಮಫ್ತಿ’, “ಟಗರು’, “ದಿ ವಿಲನ್’ ಚಿತ್ರಗಳ ಪಾತ್ರ ಬಿಟ್ಟು, “ಕವಚ’ ಚಿತ್ರ ನೋಡಬೇಕು. ಯಾಕೆಂದರೆ, ಮೊದಲ ಸಲ ನಾನು ಆ ಚಿತ್ರದಲ್ಲಿ ಅಂಧ ಪಾತ್ರ ನಿರ್ವಹಿಸಿದ್ದೇನೆ. ನನಗೂ ಆ ಚಿತ್ರದ ಮೇಲೆ ಕುತೂಹಲವಿದೆ.
“ಮಫ್ತಿ’ ಚಿತ್ರ ನೋಡಿದವರು, ಶಿವಣ್ಣ, ಬರೀ ಕಣ್ಣಲ್ಲೇ ಮಾತಾಡುತ್ತಾರೆ ಅಂತ ಹೇಳುವ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಆದರೆ, “ಕವಚ’ ಚಿತ್ರದಲ್ಲಿ ಕಣ್ಣಿಲ್ಲದ ಪಾತ್ರ ಮಾಡಿದ್ದೇನೆ. ಕಣ್ಣಿರುವ ನಾನು ಕಣ್ಣು ಕಾಣಿಸದ ವ್ಯಕ್ತಿಯಾಗಿ ನಟಿಸಿರುವುದೇ ವಿಶೇಷ. ಅಂತಹ ಪಾತ್ರ ನಟರಿಗೆ ಚಾಲೆಂಜ್ ಕೂಡ. ಇಷ್ಟರಲ್ಲೇ “ಕವಚ’ ಕೂಡ ಬರುತ್ತದೆ. ವಿಭಿನ್ನ ಕಥೆ, ಪಾತ್ರ ಮೂಲಕ ಕಾಣಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆಯೂ ಇದೆ’ ಎಂಬುದು ಶಿವರಾಜಕುಮಾರ್ ಅವರ ಮಾತು.
ನನಗೆ ನಿರ್ದೇಶಕರ ಕಲ್ಪನೆ ಕೆಡಿಸಲು ಬರಲ್ಲ: ಇನ್ನು, “ದಿ ವಿಲನ್’ ಸಕ್ಸಸ್ ಬಗ್ಗೆ ಖುಷಿ ಹಂಚಿಕೊಳ್ಳುವ ಅವರು, ಎಲ್ಲೆಡೆ ಜನರು ಇಷ್ಟಪಟ್ಟಿದ್ದಾರೆ. ದೊಡ್ಡ ಮಟ್ಟದ ಮೆಚ್ಚುಗೆಯೂ ಸಿಕ್ಕಿದೆ. ಚಿತ್ರರಂಗದ ದಾಖಲೆ ಎನ್ನಲಾಗುತ್ತಿದೆ. ಒಳ್ಳೆಯ ಚಿತ್ರದಲ್ಲಿ ನಾನು ಭಾಗಿಯಾಗಿದ್ದೇನೆಂಬ ಖುಷಿ ಇದೆ. ನನ್ನ ಅಭಿಮಾನಿಗಳಿಗೆ ಬೇಸರವಾಗಿರಬಹುದು.
ಆದರೆ, ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಲೈಫ್ ಇಷ್ಟೇ ಅಲ್ಲ, ಇನ್ನೂ ದೊಡ್ಡದಿದೆ. ನನಗೀಗ ವಯಸ್ಸು 56. ಇನ್ನೂ ಹೊಸಬಗೆಯ ಪಾತ್ರ ಮಾಡುತ್ತಲೇ ಅಭಿಮಾನಿಗಳನ್ನು ರಂಜಿಸುತ್ತೇನೆ. ಅಭಿಮಾನಿಗಳಿಗೆ ನಿರಾಸೆಯಾಗಿರಬಹುದು. ಯಾರೂ ಬೇಸರ ಮಾಡಿಕೊಳ್ಳದೆ, ಎಂಜಾಯ್ ಮಾಡಿಕೊಂಡು ಚಿತ್ರ ನೋಡಿ. ನನ್ನ ಅಭಿಮಾನಿಗಳಿಗೆ ಎಲ್ಲವೂ ಅರ್ಥ ಆಗುತ್ತೆ.
ನನಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ ತೃಪ್ತಿ ಇದೆ. ನಿರ್ದೇಶಕರ ಕಲ್ಪನೆಯನ್ನು ಕೆಡಿಸುವುದಕ್ಕೆ ನನಗೆ ಬರಲ್ಲ. ಯಾವುದು ತಪ್ಪು, ಸರಿ ಎಂಬುದನ್ನು ಅವರಿಗೇ ಬಿಟ್ಟು ಬಿಡ್ತೀನಿ. ಪಾತ್ರದ ತಕ್ಕಂತೆ ಮಾಡುವುದು ನನ್ನ ಜವಾಬ್ದಾರಿ. “ದಿ ವಿಲನ್’ ಗಳಿಕೆಯಲ್ಲಿ ಚೆನ್ನಾಗಿದೆ. ಫ್ಯಾಮಿಲಿ ಆಡಿಯನ್ಸ್ ಕೂಡ ನೋಡುತ್ತಿದ್ದಾರೆಂಬುದೇ ಖುಷಿ’ ಎನ್ನುತ್ತಾರೆ ಶಿವರಾಜಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.