“ನನ್ನ ಮಗ ರಾಜಕೀಯಕ್ಕೊಂದು ಬರೋದು ಬೇಡ …’
Team Udayavani, Nov 25, 2018, 11:40 AM IST
ಅಂಬರೀಶ್ ಹೀಗೆ ಹೇಳಿ ನಕ್ಕರು. ಅವರ ಮಾತಲ್ಲಿ ರಾಜಕೀಯ ತನಗೇ ಸಾಕು, ಮಗನಿಗೆ ಬೇಡ ಎಂಬ ಅರ್ಥವಿತ್ತು. ರಾಜಕೀಯ ಬಿಟ್ಟು ಮಗ ಏನು ಬೇಕಾದರೂ ಮಾಡಲಿ ಎಂಬ ನಿರ್ಧಾರಕ್ಕೆ ಅವರು ಬಂದಂತಿತ್ತು. ಆದರೆ, ಅಂಬರೀಶ್ ಪುತ್ರ ಅಭಿಷೇಕ್ ಈಗ ಸಿನಿಮಾಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಪೂರ್ವಭಾವಿಯಾಗಿ ವಿದೇಶದಲ್ಲಿ ಫೈಟಿಂಗ್ ಸೇರಿದಂತೆ ಇತರ ತರಬೇತಿಯಲ್ಲಿ ಅಭಿಷೇಕ್ ತೊಡಗಿದ್ದಾರೆ.
“ಈಗ ಅವನಿಗೆ ಸಿನಿಮಾ ಆಸಕ್ತಿ ಬಂದಿದೆ. ಸಿನಿಮಾ ಮಾಡಲು ರೆಡಿಯಾಗುತ್ತಿದ್ದಾನೆ. ಇದು ಅವನ ಸ್ವಂತ ನಿರ್ಧಾರ. ಸಿನಿಮಾಕ್ಕೆ ಬೇಕಾದ ತಯಾರಿ ಕೂಡಾ ಅವನೇ ಮಾಡಿಕೊಳ್ಳುತ್ತಿದ್ದಾನೆ. ನಾವ್ಯಾವುದು ಹೇಳಿಲ್ಲ. ಎಲ್ಲವೂ ಆತನ ಸ್ವಂತಃ ಆಸಕ್ತಿಯಿಂದ ಮಾಡಿಕೊಳ್ಳುತ್ತಿದ್ದಾನೆ’ ಎಂದು ಮಗನ ಸಿನಿಮಾ ಬಗ್ಗೆ ಹೇಳುತ್ತಾರೆ ಅಂಬರೀಶ್. ಹಾಗಾದರೆ, ಮಗನ ಸಿನಿಮಾ ವಿಚಾರದಲ್ಲಿ ಅವರು ಇನ್ವಾಲ್ವ್ ಆಗಲ್ವಾ ಎಂದರೆ, “ಯಾಕಿಲ್ಲ’ ಎನ್ನುತ್ತಾರೆ. “ಮೊದಲು ಕಥೆ ಆಯ್ಕೆಯಾಗಬೇಕು. ಸಿನಿಮಾದಲ್ಲಿ ನಟಿಸೋದು ಅವನು. ಮೊದಲು ಕಥೆ ಅವನಿಗೆ ಇಷ್ಟವಾಗಬೇಕು.
ಆತ ಇಷ್ಟಪಟ್ಟ ನಂತರ ನಾನು ಅಂತಿಮವಾಗಿ ನಾನು ಕೇಳುತ್ತೇನೆ. ಆತನ ಸಿನಿಮಾದ ಅಂತಿಮ ನಿರ್ಧಾರ ನಂದೇ’ ಎನ್ನುವ ಮೂಲಕ ಮಗನ ಸಿನಿಕೆರಿಯರ್‌ಗೆ ಬೆಂಬಲವಾಗಿರುವ ಬಗ್ಗೆ ಹೇಳುತ್ತಾರೆ. ಕನ್ನಡ ಚಿತ್ರರಂಗದ ಒಂದಷ್ಟು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅಭಿಷೇಕ್ ಸಿನಿಮಾ ನಿರ್ಮಿಸಲು ಮುಂದೆ ಬಂದಿವೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿ ಸಿನಿಮಾ ಮಾಡುವುದಾಗಿ ಹೇಳುತ್ತಾರೆ ಅಂಬರೀಶ್. ಇದು ಅಂಬರೀಶ್ ಅವರ ಮಗನ ಸಿನಿಮಾ ವಿಷಯವಾದರೆ, ಅಂಬರೀಶ್ ಅವರ ಸಿನಿಮಾವೊಂದು ಸೆಟ್ಟೇರಲು ಸಿದ್ಧತೆಗಳು ನಡೆಯುತ್ತಿವೆ. ಅದು “ಅಂಬಿ ನಿಂಗೆ ವಯಸ್ಸಾಯ್ತೋ’.
ಮಗನಿಗೆ ಅಂಬಿ ಕಿವಿ ಮಾತು: ಅಂಬರೀಶ್ ಇಷ್ಟು ವರ್ಷ ಚಿತ್ರರಂಗದಲ್ಲಿ ಬೆಳೆಯಲು ಕಾರಣ ಅವರ ಸಿನಿಮಾ ಪ್ರೀತಿ. ನಿರ್ಮಾಪಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಅವರು ಸಾಕಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ತಮ್ಮ ಮಗ ಅಭಿಷೇಕ್‌ಗೂ ಅದನ್ನೇ ಹೇಳಿದ್ದರು. ತಮ್ಮ ಮಗನ ಮೊದಲ ಚಿತ್ರ “ಅಮರ್’ ಮುಹೂರ್ತ ದಿನ ತಮ್ಮ ಮಗನಿಗೆ ಅಂಬಿ ಒಂದು ಕಿವಿ ಮಾತು ಹೇಳಿದ್ದರು.
ಅದು ಇಲ್ಲಿದೆ. “ಸೆಟ್‌ಗೆ ಹೋದರೆ ನೀನೊಬ್ಬ ನಟ ಮಾತ್ರ. ಹೋಗಿ ಶ್ರದ್ಧೆಯಿಂದ ನಿನ್ನ ಕೆಲಸವನ್ನು ಮಾಡಿಕೊಂಡು ಬಾ ಅಂತ ಹೇಳುತ್ತೇನೆ. ನಾನು ಅಂಬರೀಶ್ ಅವರ ಮಗ, ನಿರ್ಮಾಪಕ ಸಂದೇಶ್ ನನ್ನ ಫ್ರೆಂಡ್ ಅಂತೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೆ, ಒಬ್ಬ ನಟನಾಗಿ ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ಮಾಡು ಅಂತ ಹೇಳಿದ್ದೇನೆ’ ಎಂದು ಅಂಬರೀಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.