ಮೈಸೂರ್‌ ಡೈರೀಸ್‌ ಲಿರಿಕಲ್‌ ಸಾಂಗ್‌ ಬಂತು

ಮುಂಜಾನೆಯಿಂದ ಕಾದೆ ನಾನು, ಸಂಜೆಯಾಯ್ತು ಸಿಗೊಲ್ವೇನೋ, ಘಾಟಿ ಮಾಡು ಗಂಡು ಗಿಡುಗ

Team Udayavani, Feb 10, 2020, 10:58 AM IST

Mysore-Diares

ಧನಂಜಯ್‌ ರಂಜನ್‌ ನಿರ್ದೇಶನದ “ಮೈಸೂರು ಡೈರೀಸ್‌’ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. “ದೂರದಿಂದ ಸುರಸುಂದರಾಂಗ ಬಂದ ಜಾಣಮರೀನ್‌ ವೆಲ್‌ ಕಮ್‌ ಮಾಡೋಣ..’ ಎಂಬ ಹಾಡಿಗೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಗೊತ್ತೇ ಇದೆ. ಈಗ ಮತ್ತೊಂದು ಲಿರಿಕಲ್‌ ವಿಡಿಯೋ ಸಾಂಗ್‌ ಕೂಡ ಕೇಳುಗರ ಮನಗೆದ್ದಿದೆ.

ಹೌದು, ಇತ್ತೀಚೆಗೆ ಬಿಡುಗಡೆಯಾದ “ಮುಂಜಾನೆಯಿಂದ ಕಾದೆ ನಾನು, ಸಂಜೆಯಾಯ್ತು ಸಿಗೊಲ್ವೇನೋ, ಘಾಟಿ ಮಾಡು ಗಂಡು ಗಿಡುಗ..’ ಎಂಬ ಹಾಡಿಗೆ ಎಲ್ಲೆಡೆಯಿಂದಲೂ
ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚರಣ್‌ರಾಜ್‌ ಸಂಗೀತ ನೀಡಿರುವ ಈ ಹಾಡಿಗೆ ನಿರ್ದೇಶಕ ಧನಂಜಯ ರಂಜನ್‌ ಅವರ ಸಾಹಿತ್ಯವಿದೆ.

ಸಿದ್ಧಾರ್ಥ್ ಮತ್ತು ಮೇಘನಾ ಭಟ್‌ ಈ ಹಾಡಿಗೆ ಧ್ವನಿಯಾಗಿದ್ದು, ಪಾವನಾ ಗೌಡ ಹಾಗು ಪ್ರಭು ಮಂಡ್ಕರ್‌ ಕಾಣಿಸಿಕೊಂಡಿದ್ದಾರೆ. ಸುನಂದ ಕೃಷ್ಣಪ್ಪ ನಿರ್ಮಾಣದ ಈ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್‌ ಆಗಲು ತಯಾರಿ ನಡೆಯುತ್ತಿದೆ. ಈ ಹಿಂದೆ ಬಿಡುಗಡೆಯಾದ ಮೊದಲ ಹಾಡು “ದೂರದಿಂದ…’ ಹಾಡಿಗೆ ಸುಚಿತ್‌ ಹಾಗೂ ಧನ್ಯಶ್‌ ಧ್ವನಿಯಾಗಿದ್ದರು.

ಅದು ಚಿತ್ರದ ಇಂಟ್ರಡಕ್ಷನ್‌ ಹಾಡಾಗಿದ್ದು, “ಮೈಸೂರು ಡೈರೀಸ್‌’ ಶೀರ್ಷಿಕೆಗೆ ತಕ್ಕಂತೆ ಮೊದಲ ಹಾಡಲ್ಲಿ ಇಡೀ ಮೈಸೂರನ್ನು ವಿಶಿಷ್ಟವಾಗಿ ತೋರಿಸುವ ಪ್ರಯತ್ನ ಮಾಡಲಾಗಿತ್ತು. ವಿದೇಶದಲ್ಲಿರುವ ಬಾಲ್ಯದ ಗೆಳೆಯನೊಬ್ಬ ಮೈಸೂರಿಗೆ ಬಂದಾಗ, ಉಳಿದ ಮೂವರು ಗೆಳೆಯರು ಆ ಬಾಲ್ಯದ ಸವಿ ನೆನಪನ್ನು ಮೆಲುಕು ಹಾಕುವಂತಹ ಸನ್ನಿವೇಶ ಈ ಇಂಟ್ರಡಕ್ಷನ್‌ ಹಾಡಲ್ಲಿದೆ ಎಂಬುದು ಚಿತ್ರತಂಡದ ಮಾತು.

“ಮೈಸೂರು ಡೈರೀಸ್‌’ ಬಗ್ಗೆ ಹೇಳುವ ನಿರ್ದೇಶಕರು, “ಇದು ಮೈಸೂರಿನ ಭಾಗದಲ್ಲಿ ನಡೆಯೋ ಕಥೆ. ಮೈಸೂರು ಇಲ್ಲೊಂದು ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ನೆನಪಿನ ಡೈರಿ ಇರುತ್ತೆ. ಹಳೆಯ ಮಧುರ ನೆನಪುಗಳ ಗುಚ್ಚದೊಂದಿಗೆ ಈ ಚಿತ್ರ ಮಾಡಿದ್ದು, ಗೆಳೆತನದ ಜೊತೆಗೆ ಭಾವನೆಗಳ ಮಿಶ್ರಣ ಚಿತ್ರದ ಹೂರಣ’ ಎಂಬುದು ಅವರ ಹೇಳಿಕೆ. ಅನೂಪ್‌ ಸೀಳಿನ್‌ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಕ್ತಿ ಶೇಖರ್‌ ಛಾಯಾಗ್ರಹಣ ಮಾಡಿದ್ದಾರೆ. ಸಿ.ಕೆ.ಸಿನಿ ಕ್ರಿಯೇಷನ್ಸ್‌ ಮತ್ತು ಸಮರ್ಥ್ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ಸುನಂದಾ ಕೃಷ್ಣಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.