ಏಪ್ರಿಲ್ 14ರಿಂದ ಚಕ್ರವರ್ತಿ ದರ್ಬಾರ್; 3 ಶೇಡ್ ನಲ್ಲಿ ದರ್ಶನ್ ಖದರ್
Team Udayavani, Mar 20, 2017, 4:12 PM IST
ದರ್ಶನ್ “ಚಕ್ರವರ್ತಿ’ ಸಿನಿಮಾ ಮುಗಿಸಿ ಈಗ “ತಾರಕ್’ನಲ್ಲಿ ಬಿಝಿಯಾಗಿರೋದು ನಿಮಗೆ ಗೊತ್ತೇ ಇದೆ. “ಮಿಲನ’ ಪ್ರಕಾಶ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. “ಚಕ್ರವರ್ತಿ’ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ಆದರೆ, ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಮಾತ್ರ ಅಭಿಮಾನಿಗಳಲ್ಲಿ ಇದೆ.
ಯುಗಾದಿಗೆ “ಚಕ್ರವರ್ತಿ’ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ತಣಿಸಲು ಚಿತ್ರತಂಡ ಹೊರಟಿದೆ. ಆದರೂ, ಸಿನಿಮಾ ಯಾವಾಗ ತೆರೆಕಾಣುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದ್ದೇ ಇದೆ. ಆ ಪ್ರಶ್ನೆಗೆ ಉತ್ತರ ಏಪ್ರಿಲ್ 14. ಹೌದು, ಏಪ್ರಿಲ್ 14 ರಂದು “ಚಕ್ರವರ್ತಿ’ ಚಿತ್ರ ತೆರೆಗೆ ಬರುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮುಗಿದಿದ್ದು, ಏಪ್ರಿಲ್ 14 ರಂದು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಾಗಿದೆಯಂತೆ. “ಚಕ್ರವರ್ತಿ’ಯ ವಿಭಿನ್ನ ಗೆಟಪ್ ಗಳು ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದು, ದರ್ಶನ್ ಇಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕಾಗಿ ದರ್ಶನ್ ತಮ್ಮ ಹೇರ್‌ಸ್ಟೈಲ್ ಕೂಡಾ ಬದಲಿಸಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೀಪಾ ಸನ್ನಿಧಿ ನಾಯಕಿಯಾಗಿ ನಟಿಸಿದ್ದಾರೆ. “ಸಾರಥಿ’ ಚಿತ್ರದ ಮೂಲಕ ಜೊತೆಯಾಗಿ ನಟಿಸಿದ ಈ ಜೋಡಿ ಆ ನಂತರ ಯಾವುದೇ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರಲಿಲ್ಲ. ಈಗ “ಚಕ್ರವರ್ತಿ’ಯಲ್ಲಿ ಮತ್ತೆ ನಟಿಸಿದ್ದಾರೆ. “ಚಕ್ರವರ್ತಿ’ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎಂದು ಅಭಿಮಾನಿಗಳ ಜೊತೆ ಹೊಸಬರ ಸಿನಿಮಾಗಳು ಕೂಡಾ ಎದುರು ನೋಡುತ್ತಿದ್ದವು.
ಏಕೆಂದರೆ ದೊಡ್ಡ ಸಿನಿಮಾದ ಹಿಂದೆ-ಮುಂದೆ ಬರುವ ರಿಸ್ಕ್ ಬೇಡ ಎಂಬ ಕಾರಣಕ್ಕೆ ಅನೇಕ ಸಿನಿಮಾಗಳು ತಮ್ಮ ಬಿಡುಗಡೆಯನ್ನೂ ಮುಂದಕ್ಕೆ ಹಾಕಿವೆ. ಈಗ ಏಪ್ರಿಲ್‌ನಲ್ಲಿ 14 ರಂದು “ಚಕ್ರವರ್ತಿ’ ದರ್ಶನ ನೀಡೋದು ಬಹುತೇಕ ಖಚಿತ. ಮಲೇಷ್ಯಾದಲ್ಲಿ ಸ್ಟಾರ್ ಕ್ರೂಸ್ ಪಡೆದು, ಅಲ್ಲಿ ಕೆಲವು ದಿನಗಳ ಕಾಲ ಚಿತ್ರೀಕರಣವನ್ನು ಕೂಡಾ “ಚಕ್ರವರ್ತಿ’ ತಂಡ ಮಾಡಿದೆ. ಚಿತ್ರದಲ್ಲಿ ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಆದಿತ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.