Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
Team Udayavani, Nov 29, 2024, 8:09 AM IST
“ನಾ ನಿನ್ನ ಬಿಡಲಾರೆ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಅಂಬಾಲಿ ಭಾರತಿ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಭಾರತಿ ಬಾಲಿ ನಿರ್ಮಾಣದ, ನವೀನ್ ಜಿ ಎಸ್ ನಿರ್ದೇಶನದ ಚಿತ್ರವಿದು. ಈ ಚಿತ್ರದ ಮೇಲೆ ಭಾರತಿ ಅವರು ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಅವರು, “ಇದು ರೆಗ್ಯುಲರ್ ಕಥೆಯಲ್ಲ. ಇಂತಹ ಸಬ್ಜೆಕ್ಟ್ ಅನ್ನು ಯಾರೂ ಟಚ್ ಮಾಡಿಲ್ಲ. ಚಿತ್ರದಲ್ಲಿ ದೇವರು, ದೈವತ್ವ, ಮತ್ತು ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳು ತುಂಬಾ ಇವೆ. ರಾಘವೇಂದ್ರ ಸ್ವಾಮಿ ಅವರ ಕುರಿತಾದ ಹಾಡು ಹಿಟ್ ಆಗಿದೆ. ಅದಕ್ಕಾಗಿ ಒಂದೊಳ್ಳೆಯ ಸೆಟ್ ಹಾಕಿದ್ದೇವೆ. ಒಂದು ಹೊಸ ಪ್ರಯೋಗದ ಚಿತ್ರವಾಗಿ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡು ಬರಬಹುದು. ಅವರ ನಿರೀಕ್ಷೆಗೆ ನಾವು ಜವಾಬ್ದಾರರು’ ಎನ್ನುತ್ತಾರೆ.
ಇನ್ನು, ಬಿಡುಗಡೆಯಾದ ಟ್ರೇಲರ್ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ತಂಡ ಖುಷಿಯಾಗಿದೆ. ಅಂಬಾಲಿ ಭಾರತಿ, ಪಂಚಿ, ಕೆ ಎಸ್ ಶ್ರೀಧರ್, ಶ್ರೀನಿವಾಸ್ ಪ್ರಭು, ಮದನ್ ಹರಿಣಿ, ಮಹಾಂತೇಶ್ ಸೇರಿ ಸಾಕಷ್ಟು ಪ್ರತಿಭಾವಂತ ಕಲಾವಿದರ ದಂಡು ಇದರಲ್ಲಿ ಇದೆ.
“ಇದು ಸೈಕಲಾಜಿಕಲ್, ಹಾರರ್, ಥ್ರಿಲ್ಲರ್, ಸಸೆನ್ಸ್ ಹಾಗೂ ಮೆಡಿಕಲ್ ವಿಚಾರದ ಸಿನಿಮಾ. ನಾನು ಮೂಲತಃ ಗುಲ್ಬರ್ಗ ಹುಡುಗಿ. ನನಗೂ ರಂಗಭೂಮಿ ನಂಟು ಇದೆ. ಒಂದಿಷ್ಟು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದೇನೆ. ಈ ಒಂದು ಚಿತ್ರಕ್ಕಾಗಿ ನಾನು ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ಈ ಸಿನಿಮಾ ಮಾಡಿದ್ದೇನೆ. ನಮ್ಮ ನಿರ್ದೇಶಕ ನವೀನ್ ಹಾಗೂ ನಾನು ಐದು ವರ್ಷದ ಗೆಳೆಯರು. ಅವರು ಈ ಕಥೆ ಹೇಳಿದರು. ನಾನು ಈ ತಂಡದ ಜೊತೆ ಸೇರಿ ನಿರ್ಮಾಪಕರನ್ನು ಹುಡುಕಿದೆವು. ನಂತರ ಅಮ್ಮನಿಗೆ ನಿರ್ದೇಶಕರಿಂದ ಕಥೆ ಹೇಳಿಸಿದೆ. ಅಮ್ಮ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ಅಮ್ಮ, ಚಿಕ್ಕಮ್ಮ ಮತ್ತು ಅಜ್ಜಿ ಅವರ ಹೆಸರುಗಳನ್ನು ಇಟ್ಟುಕೊಂಡು ಕೆ.ಯು.ಬಿ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿದೆ. ಈ ಚಿತ್ರದ ಎಲ್ಲಾ ವಿಭಾಗಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಮೊದಲ ಚಿತ್ರದಲ್ಲೇ ಒಳ್ಳೆಯ ಅನುಭವ ಸಿಕ್ಕಿದೆ’ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.