ಹೊಸತನದ ಚಿತ್ರದತ್ತ ನಭಾ ಚಿತ್ತ
Team Udayavani, Jul 23, 2018, 11:24 AM IST
“ತೂ ಕತು ಗಡಬಡ ಚಲು ಚಲೋ ಲಡಿಕಿ, ತೂ ಕತು ಗಡಬಡ ಬಾಯ್ ಬಾಯ್ ಬಡುಕಿ…’ ಬಹುಶಃ ಈ ಹಾಡು ಕೇಳದವರೇ ಇಲ್ಲ. “ವಜ್ರಕಾಯ’ ಚಿತ್ರದ ಈ ಹಾಡಲ್ಲಿ ಸಖತ್ ಜೋರು ಹುಡುಗಿಯಾಗಿ ಶಿವರಾಜಕುಮಾರ್ ಜೊತೆ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದ ನಭಾ ನಟೇಶ್, ಈಗ ತೆಲುಗು ಚಿತ್ರರಂಗದಲ್ಲಿ ಫುಲ್ ಬಿಜಿಯಾಗಿದ್ದಾರೆ.
ಹೌದು, ಅವರ ಕೈಯಲ್ಲೀಗ ಎರಡು ಚಿತ್ರಗಳಿವೆ. ಆ ಪೈಕಿ ಸೆಪ್ಟೆಂಬರ್‌ನಲ್ಲಿ ಒಂದು ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಇನ್ನೊಂದು ಚಿತ್ರೀಕರಣದಲ್ಲಿದೆ. ಅತ್ತ, ತೆಲುಗಿನ ದೊಡ್ಡ ಬ್ಯಾನರ್‌ಗಳಿಂದಲೂ ಒಂದರ ಮೇಲೊಂದು ಅವಕಾಶಗಳು ಹುಡುಕಿ ಬರುತ್ತಲೇ ಇವೆ. ಯಾವುದು ಒಪ್ಪಬೇಕು, ಬಿಡಬೇಕು ಎಂಬ ಗೊಂದಲದಲ್ಲಿರುವ ನಭಾನಟೇಶ್, ಈಗ ತೆಲುಗು ಮಂದಿಯ ಹಾಟ್‌ಫೇವರೆಟ್ ಅನ್ನೋದು ನಿಜ.
ಮಹೇಶ್ ಬಾಬು ಅವರ ಸಂಬಂಧಿ ಸುಧೀರ್ ಬಾಬು ಅಭಿನಯದ “ನನ್ನು ದೋಚುಕುಂಡುವಟೆ’ ಚಿತ್ರದಲ್ಲಿ ನಾಯಕಿಯಾಗಿರುವ ನಭಾ ನಟೇಶ್‌ಗೆ ಆ ಚಿತ್ರದ ಮೇಲೆ ಇನ್ನಿಲ್ಲದ ವಿಶ್ವಾಸವಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಆ ಚಿತ್ರದ ಎರಡು ಹಾಡಿನ ಚಿತ್ರೀಕರಣ ಮುಗಿದರೆ, ಚಿತ್ರ ಸೆಪ್ಟೆಂಬರ್‌ನಲ್ಲಿ ಪ್ರೇಕ್ಷಕರ ಎದುರು ಬರಲಿದೆ.
ಇನ್ನು ಈ ಪಾತ್ರದಲ್ಲಿ ನಭಾ ನಟೇಶ್ ಅವರಿಗೆ ತುಂಬಾ ಗ್ಲಾಮರಸ್ ಆಗಿರುವ ಮತ್ತು ಬೋಲ್ಡ್ ಹುಡುಗಿ ಪಾತ್ರ ಸಿಕ್ಕಿದೆ. ಹೊಸ ತರಹದ ಪಾತ್ರವಾಗಿರುವುದರಿಂದ ಸಹಜವಾಗಿಯೇ ನಭಾ ನಟೇಶ್‌ಗೆ ಆ ಪಾತ್ರ ಚಾಲೆಂಜಿಂಗ್ ಎನಿಸಿದೆ. ರವಿಬಾಬು ನಿರ್ದೇಶನದ “ಅದುಗೋ’ ಎಂಬ ಹೊಸ ಚಿತ್ರದಲ್ಲೂ ನಭಾ ನಟೇಶ್ ನಾಯಕಿಯಾಗಿದ್ದಾರೆ.
ಸುರೇಶ್ ಪ್ರೊಡಕ್ಷನ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರ ಕೂಡ ದೊಡ್ಡ ಬಜೆಟ್‌ನ ಚಿತ್ರವಾಗಿದ್ದು, ತೆಲುಗಿನ ಎರಡು ಚಿತ್ರಗಳೂ ಒಟ್ಟೊಟ್ಟಿಗೇ ಶುರುವಾಗಿವೆ. ಹಾಗಾಗಿ, ಕನ್ನಡದಲ್ಲಿ ಅವಕಾಶ ಬಂದರೂ, ಡೇಟ್ಸ್ ಸಮಸ್ಯೆಯಿಂದಾಗಿ ನಟಿಸಲು ಸಾಧ್ಯವಾಗಿಲ್ಲ ಎಂಬುದು ನಭಾ ನಟೇಶ್ ಮಾತು. ಕನ್ನಡದಲ್ಲಿ ಈ ವರ್ಷ ಪಕ್ಕಾ ಒಂದು ಸಿನಿಮಾದಲ್ಲಿ ನಟಿಸುವುದಾಗಿ ಭರವಸೆಯಿಂದ ಹೇಳುತ್ತಾರೆ.
ಈಗಾಗಲೇ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ ಎನ್ನುವ ನಭಾ, ತೆಲುಗಿನಲ್ಲಿ ಈಗಾಗಲೇ ದೊಡ್ಡ ಬ್ಯಾನರ್‌ನಲ್ಲಿ ಎರಡು ಚಿತ್ರಗಳಲ್ಲಿ ನಟಿಸಿರುವುದರಿಂದ ತೆಲುಗಿನಿಂದ ಒಂದಷ್ಟು ಚಿತ್ರಗಳು ಹುಡುಕಿ ಬರುತ್ತಿವೆ. ಈಗ ಮಾಡಿರುವ ಎರಡು ಚಿತ್ರಗಳಲ್ಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ತೆಲುಗಿನಲ್ಲಿ ಕಥೆಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಲ್ಲ. ನಟಿಸಿರುವ ಈ ಎರಡು ಚಿತ್ರಗಳು ರಿಲೀಸ್ ಬಳಿಕ ನಿರ್ಧರಿಸುವ ಯೋಚನೆ ಅವರದು.
“ಆರಂಭದಲ್ಲಿ ಹೊಸತನದ ಪಾತ್ರ ಆಯ್ಕೆ ಮಾಡಿಕೊಂಡರೆ ಮಾತ್ರ, ಮುಂದಿನ ಸಿನಿಮಾ ಭವಿಷ್ಯಕ್ಕೊಂದು ಸಹಾಯವಾಗುತ್ತೆ, ಅಲ್ಲದೆ, ಮುಂದೆ ಬರುವ ಚಿತ್ರಗಳಲ್ಲೂ ವಿಶೇಷತೆ ಇರುತ್ತೆ. ಹಾಗಾಗಿ, ಮಾಡಿದ ಪಾತ್ರಗಳೇ ಮತ್ತೆ ಮತ್ತೆ ಹುಡುಕಿ ಬಂದರೆ, ಅವುಗಳನ್ನು ಬದಿಗಿರಿಸಿ, ಹೊಸತನದ ಪಾತ್ರಗಳತ್ತ ಗಮನಹರಿಸಿದ್ದೇನೆ’ ಎನ್ನುತ್ತಾರೆ ನಭಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.