ನದಿ ಉಳಿವಿಗೆ ಪುನೀತ್ ಗಾನ
Team Udayavani, Aug 31, 2017, 5:52 PM IST
ನದಿಗಳನ್ನು ಉಳಿಸಲು ಸದ್ಗುರು ಜಗ್ಗಿ ವಾಸುದೇವ್ ಅವರು ರಾಜ್ಯದಲ್ಲಿ ರ್ಯಾಲಿ ಹಮ್ಮಿಕೊಂಡಿರುವುದು ಎಲ್ಲರಿಗೂ ಗೊತ್ತು. ಅವರ ಈ ಕಾರ್ಯಕ್ಕೆ ಈಗಾಗಲೇ ಹಲವು ಕಲಾವಿದರು ಕೈ ಜೋಡಿಸಿದ್ದಾರೆ. ಈಗ ನಟ ಪುನೀತ್ ರಾಜ್‌ಕುಮಾರ್ ಕೂಡ “ನದಿ ಉಳಿಸಿ …’ ಎಂದು ಹಾಡುವ ಮೂಲಕ ಸಾಥ್ ನೀಡಿದ್ದಾರೆ.
ಹೌದು, ಪುನೀತ್ ರಾಜ್‌ಕುಮಾರ್ ಅವರು ನದಿಗಳನ್ನು ರಕ್ಷಿಸಿ ಎಂಬ ರ್ಯಾಲಿಗೆ ಜೈ ಎಂದಿದ್ದು, ಅದಕ್ಕೊಂದು ಹಾಡನ್ನೂ ಹಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಬರೆದಿರುವ ಹಾಡಿಗೆ ಪುನೀತ್ ರಾಜಕುಮಾರ್ ಹಾಡಿದ್ದಾರೆ ಎಂಬುದು ವಿಶೇಷ. ಸುಮಾರು ಎರಡುವರೆ ನಿಮಿಷದ ಈ ಹಾಡು ಈಗ ಎಲ್ಲೆಡೆ ಮೊಳಗಿದೆ.
“ಈ ನೆಲ, ಈ ಜಲ. ನಿರ್ಮಲ, ರಕ್ಷಣೆಯ ಹೊಣೆ ನಮ್ಮದು, ನದಿಗಳು ನಮಗೆ ಜೀವಜಲ. ರಕ್ಷಣೆಯ ಹೊಣೆ ನಮ್ಮದು. ನಮ್ಮ ನಾಳೆ ಸೌಖ್ಯಕ್ಕಾಗಿ, ನಮ್ಮ ಐಕ್ಯತೆ ಮಂತ್ರವಾಗಿ ಈ ದೇಶ ನಮ್ಮದು, ಈ ನಾಡು ನಮ್ಮದು ಕುಡಿಯುವ ಪ್ರತಿ ಹನಿ ಹನಿಯು ನಮ್ಮದು …’ ಎಂದು ಸಾಗುವ ಈ ಅರ್ಥಪೂರ್ಣ ಹಾಡು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಈ ಹಾಡಿನ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಜೋರು ಸುದ್ದಿಯಾಗುತ್ತಿದೆ.
ಈ ಹಾಡಿನ ಕುರಿತು “ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಸಂತೋಷ್ ಆನಂದರಾಮ್, “ಸೆಪ್ಟೆಂಬರ್ 9 ರಂದು ರ್ಯಾಲಿ ನಡೆಯುವ ಹಿನ್ನೆಲೆಯಲ್ಲಿಈಶ ಫೌಂಡೇಷನ್ ಸಂಯೋಜಿಸಿದ್ದ ರಾಗಕ್ಕೆ ಸಾಹಿತ್ಯ ಬರೆದಿದ್ದೇನೆ. ಅದಕ್ಕೆ ಅಪ್ಪು
ಸರ್ ಅವರೇ ಹಾಡಬೇಕು ಅಂತ ಹೇಳಿ, ಅವರಿಂದ ಹಾಡನ್ನು ಹಾಡಿಸಿ, ಆ ಮೂಲಕ ಜನರಿಗೆ ಜಾಗೃತಿ ಮೂಡಿಸುವ
ಪ್ರಯತ್ನ ಮಾಡಲಾಗಿದೆ. ಇಂತಹ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿದ್ದೇವೆ ಎಂಬ ಖುಷಿ ನನಗಿದೆ’ ಎನ್ನುತ್ತಾರೆ ಸಂತೋಷ್ ಆನಂದರಾಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Mangaluru: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.