ಇಂಗ್ಲೆಂಡ್‌ನಿಂದ ಅಮೇರಿಕಾಗೆ ಹೊರಟ ನಾಗತಿಹಳ್ಳಿ
Team Udayavani, Sep 2, 2018, 10:00 PM IST
ವಸಿಷ್ಠ ಸಿಂಹ ಮತ್ತು ಮಾನ್ವಿತಾ ಹರೀಶ್ ಅಭಿನಯದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಕಳೆದ ತಿಂಗಳು ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಿತ್ತು. ಆ ನಂತರ ಸತತ ಚಿತ್ರೀಕರಣ ಮಾಡಿ ಮುಗಿಸಿರುವ ನಾಗತಿಹಳ್ಳಿ ಚಂದ್ರಶೇಖರ್, ಮೊದಲ ಹಂತದ ಚಿತ್ರೀಕರಣ ಮುಗಿಸಿ, ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ ಅಮೇರಿಕಾಗೆ ತೆರಳಿದ್ದಾರೆ.
ತೇಮ್ಸ್ ನದಿಯ ತೀರದಲ್ಲಿರುವ ಬಸವೇಶ್ವರರ ಪ್ರತಿಮೆಯೆದುರು, ಆಗಸ್ಟ್ ನಾಲ್ಕರಂದು ನಾಗತಿಹಳ್ಳಿ ಅವರ ಹೆಸರಿಡದ ಹೊಸ ಚಿತ್ರದ ಮುಹೂರ್ತವಾಗಿತ್ತು. ಆ ನಂತರ ಲಂಡನ್‌ನ ವಿವಿದೆಡೆಗಳಲ್ಲಿ ಹಲವು ಮಹತ್ವದ ದೃಶ್ಯಗಳು ಮತ್ತು ಹಾಡಿನ ಚಿತ್ರೀಕರಣವನ್ನು ನಾಗತಿಹಳ್ಳಿ ಚಂದ್ರಶೇಖರ್ ಮಾಡಿ ಮುಗಿಸಿದ್ದಾರೆ. ಈ ಭಾಗದ ಚಿತ್ರೀಕರಣದಲ್ಲಿ ವಸಿಷ್ಠ, ಮಾನ್ವಿತಾ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಅದರಲ್ಲೂ ವಸಿಷ್ಠ ಅಭಿನಯದ ಬಗ್ಗೆ ಖುಷಿಯಾಗಿರುವ ನಾಗತಿಹಳ್ಳಿ, “ನನಗೆ ಅಪಾರ ಭರವವಸೆ ಇದೆ. ಈತ ಕನ್ನಡಕ್ಕೆ ಮಾತ್ರವಲ್ಲ, ಭವಿಷ್ಯದಲ್ಲಿ ಬಹುಭಾಷೆಗಳಲ್ಲಿ ನಾಯಕನಾಗಿ ಪ್ರಕಟಗೊಳ್ಳಲಿರುವ ಪ್ರತಿಭೆ. ಈತನ ಶರೀರವೂ, ಶಾರೀರವೂ ಅನನ್ಯ. ಕಾದು ನೋಡಿ ಈತನ ಘರ್ಜನೆಯನ್ನು. ಇನ್ನು ಇವ ಖಳನಲ್ಲ…’ ಎಂದು ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಹುಟ್ಟಿದ ಕನ್ನಡಿಗ ಮತ್ತು ಬೆಂಗಳೂರು ಮೂಲದ ಕನ್ನಡತಿಯ ನಡುವಿನ ನಡೆಯುವ ಪ್ರೇಮಕಥೆ ಇರುವ ಈ ಚಿತ್ರದಲ್ಲಿ ವಸಿಷ್ಠ ಮತ್ತು ಮಾನ್ವಿತಾ ಜೊತೆಗೆ ಪ್ರಕಾಶ್ ಬೆಳವಾಡಿ, ಸುಮಲತಾ ಮುಂತಾದವರು ನಟಿಸುತ್ತಿದ್ದಾರೆ. ಇನ್ನು ಬ್ರಿಟಿಷ್ ಛಾಯಾಗ್ರಾಹಕ ವಿಲ್ ಪ್ರೈಸ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಶಂಕರೇಗೌಡ ಮತ್ತು ಮಿತ್ರರು ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.