ಖಾಸಗಿ ಎಫ್ಎಂ, ವಾಹಿನಿಗಳಲ್ಲಿ ಹಾಡು ಪ್ರಸಾರಕ್ಕೆ ವಿ. ನಾಗೇಂದ್ರ ಪ್ರಸಾದ್ ಅಸಮಾಧಾನ
V.Nagendra Prasad
Team Udayavani, Aug 14, 2024, 11:22 AM IST
ಖಾಸಗಿ ಎಫ್ಎಂ ಹಾಗೂ ವಾಹಿನಿಗಳಲ್ಲಿ ಹಾಡು ಪ್ರಸಾರದ ವಿಷಯವಾಗಿ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್(V.Nagendra Prasad) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಹಾಡು ಪ್ರಸಾರದ ವೇಳೆ ಕೇವಲ ಹಾಡುಗಾರರ ಹೆಸರನ್ನು ಮಾತ್ರ ಹೇಳಲಾಗುತ್ತದೆ, ಆದರೆ ಅದಕ್ಕೆ ಸಂಗೀತ ಸಂಯೋಜಿಸಿದ ಹಾಗೂ ಸಾಹಿತ್ಯ ಬರೆದವರ ಹೆಸರನ್ನು ಹೇಳದೆ ಕಡೆಗಣಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ “ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಚಿತ್ರದ ಪ್ರಚಾರದ ವೇಳೆ ಈ ಬಗ್ಗೆ ಮಾತನಾಡಿದ ಅವರು, “ಇತ್ತೀಚೆಗೆ ದ್ವಾಪರಾ ಹಾಡು ಬಹಳ ಜನಪ್ರಿಯವಾಗಿದೆ. ಎಲ್ಲ ಖಾಸಗಿ ಎಫ್ಎಂ, ವಾಹಿನಿಗಳಲ್ಲಿ ಹಾಡನ್ನು ಪ್ರಸಾರ ಮಾಡಲಾಗುತ್ತಿದೆ. ಪ್ರಸಾರದ ವೇಳೆ ಗಣೇಶ್ ನಟನೆಯ ಚಿತ್ರ ಎಂದಷ್ಟೆ ಉಲ್ಲೇಖೀಸುತ್ತಿದ್ದಾರೆ. ಇದು ಸರಿಯಲ್ಲ. ಕಳೆದ 2 ದಶಕಗಳಲ್ಲಿ ನಾನು ಮೂರು ಸಾವಿರ ಹಾಡು ಬರೆದು, ಈ ಮಾತನ್ನು ಹೇಳುತ್ತಿದ್ದೇನೆ. ಯಾವುದೇ ಹಾಡು, ಎಲ್ಲೆ ಪ್ರಸಾರ ಮಾಡಿದರೂ, ಅದನ್ನು ಹಾಡಿದ ಗಾಯಕರ ಹೆಸರಿನ ಜತೆಗೆ ಹಾಡನ್ನು ಬರೆದ ಸಾಹಿತಿ ಹಾಗೂ ಸಂಗೀತ ಸಂಯೋಜಿಸಿದ ನಿರ್ದೇಶಕರ ಹೆಸರನ್ನು ಹೇಳಲೆಬೇಕು. ಇದು ನನ್ನ ವಿನಂತಿಯಲ್ಲ, ಆಗ್ರಹ. ಒಂದು ವೇಳೆ ಖಾಸಗಿ ವಾಹಿನಿಗಳು ಹೆಸರು ಹೇಳದಿದ್ದರೆ, ನಾವು ಕೇಸ್ ಹಾಕುತ್ತೇವೆ. ಆ ಹಕ್ಕು ಸರ್ಕಾರ ನಮಗೆ ಕೊಟ್ಟಿದೆ. ಇದು ಕಾನೂನಿನಲ್ಲೂ ಇದೆ. ಇದನ್ನು ಗಂಭೀರವಾಗಿ ಪರಿಗಣಿಸ ಬೇಕು ಹಾಡು ಪ್ರಸಾರವಾ ದಾಗ ಗಾಯಕರ ಹೆಸರು ಸಹಜವಾಗಿ ಗೊತ್ತಾಗುತ್ತದೆ. ಆದರೆ, ಹಾಡು ಬರೆದವರ ಹಾಗೂ ಸಂಗೀತ ಸಂಯೋ ಜಿಸಿದವರ ಹೆಸರು ತಿಳಿಯುವುದೇ ಇಲ್ಲ. ಹಾಗಾಗಿ ಅವರ ಹೆಸರನ್ನು ಉಲ್ಲೇಖೀಸಬೇಕು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.