ಅಪ್ಪ ವಿಲನ್ ಮಗ ಹೀರೋ!
Team Udayavani, Aug 23, 2021, 3:50 PM IST
“ನನಗೂ ಲವ್ವಾಗಿದೆ’ ಎಂಬ ಹೊಸಬರ ಸಿನಿಮಾದ ಮುಹೂರ್ತ ವರಮಹಾ ಲಕ್ಷ್ಮೀ ಹಬ್ಬದಂದು ನಡೆದಿದೆ. ವಿಜಯ್ ರಾಜಶೇಖರ್ ಈ ಸಿನಿಮಾಕ್ಕೆ ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
“ಶೀರ್ಷಿಕೆ ಕೇಳಿದೊಡನೆ ಇದೊಂದು ಲವ್ ಸ್ಟೋರಿ ಇರಬಹುದೆಂಬ ಭಾವನೆ ಬರುತ್ತದೆ. ಬೆಳಗಾಂ ಹುಡುಗ, ಬೆಂಗಳೂರು ಹುಡುಗಿಯ ಪ್ರೇಮ ಕತೆ ಇರಲಿದೆ. ಆದರೆ ಅದಕ್ಕಿಂತಲೂ ಮೀರಿದ ಕುತೂಹಲಕಾರಿ ಸನ್ನಿವೇಶಗಳನ್ನು ನೋಡಬಹುದೆಂದು ಚಿತ್ರತಂಡದ ಮಾತು.
ಈ ಚಿತ್ರವನ್ನು ಕೆ.ನೀಲಕಂಠನ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಅವರದ್ದೇ ಕಥೆ ಇದೆ. ಜೊತೆಗೆ ಖಳನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಿರ್ಮಾಪಕರ ಪುತ್ರ ಸೋಮವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಡಾಲಿ ಜೊತೆ ‘ಹೆಡ್ ಬುಷ್’ನಲ್ಲಿ ಜೊತೆಯಾಗಲಿದ್ದಾರೆ ಯೋಗಿ
ರೋಶಿನಿ ಈ ಚಿತ್ರದ ನಾಯಕಿ. ಇವರೊಂದಿಗೆ ಶ್ವೇತಾ, ಅಭಿಷ್ ಆಂಟೋನಿ, ಮಮತಾ, ಬಾಬು, ದೊರೆ, ಕಾರ್ತಿಕ್ ಮುಂತಾದವರು ನಟಿಸುತ್ತಿದ್ದಾರೆ.
ಐದು ಹಾಡುಗಳಿಗೆ ಬಿ.ಆರ್.ಹೇಮಂತ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಅನುರಾಧ ಭಟ್, ಶ್ರೀನಿಧಿ, ರಶ್ಮಿ ಮತ್ತು ಪೊಲೀಸ್ ಸುಬ್ರಮಣ್ಯ, ಕಂಬದ ರಂಗಯ್ಯ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಎರಡು ಹಂತಗಳಲ್ಲಿ ಬೆಂಗಳೂರು, ಬೆಳಗಾಂ, ಚಿಕ್ಕಮಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.