‘ನಾನು ಮತ್ತು ಗುಂಡ-2′; ಮತ್ತೆ ಬರುತ್ತಿದೆ ಗುಂಡನ ಕಥೆ
Team Udayavani, Jul 6, 2023, 1:28 PM IST
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ “ನಾನು ಮತ್ತು ಗುಂಡ’ ಸಿನಿಮಾಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುಮೂಡಿತ್ತು. ನಾಯಕ ಹಾಗೂ ನಾಯಿಯೊಂದರ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ಆ ಚಿತ್ರದಲ್ಲಿ ನಟ ಶಿವರಾಜ್ ಕೆ.ಆರ್. ಪೇಟೆ ಮತ್ತು ನಾಯಿಯೊಂದು ನಟಿಕಸಿತ್ತು. ಆ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಘು ಹಾಸನ್ ಈಗ ಅದರ ಮುಂದುವರೆದ ಭಾಗವಾಗಿ “ನಾನು ಮತ್ತು ಗುಂಡ-2′ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ ಮೊದಲ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ನಾಯಕ ಶಿವರಾಜ್ ಕೆ.ಆರ್.ಪೇಟೆ ಅವರ ಪಾತ್ರ ಮರಣ ಹೊಂದುತ್ತದೆ. ಎರಡನೇ ಭಾಗದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡ ನಾಯಿ ಸಮಾಜದಲ್ಲಿ ಹೇಗೆ ಜೀವನ ನಡೆಸುತ್ತದೆ ಎಂಬುದನ್ನು ಭಾವನಾತ್ಮಕ ಕಥೆಯೊಂದಿಗೆ ಮನರಂಜನಾತ್ಮಕವಾಗಿ ಹೇಳಲಾಗುತ್ತಿದೆ.
ಈಗಾಗಲೇ ಮೈಸೂರು ನಗರದ ಸುತ್ತಮುತ್ತ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಶೇ.50 ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ.
ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ಕೆ.ಎಂ. ಪ್ರಕಾಶ್ ಅವರ ಸಂಕಲನ, ತನ್ವಿಕ್ ಜಿ. ಅವರ ಛಾಯಾಗ್ರಹಣ, ರೋಹಿತ್ ರಾಮನ್ ಅವರ ಸಂಭಾಷಣೆ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
Darshan; ಭರ್ಜರಿ ಓಪನಿಂಗ್ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್ ಚಿತ್ರದಲ್ಲಿ ದರ್ಶನ್ ಹವಾ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು
MUST WATCH
ಹೊಸ ಸೇರ್ಪಡೆ
Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.