ನಾರಾಯಣ್‌ಗೇ ಆಡಿಷನ್ ಮಾಡಿದ ಪಂಟ ನಾಯಕಿ
Team Udayavani, Feb 14, 2017, 11:11 AM IST
ನಿರ್ದೇಶಕ ಎಸ್.ನಾರಾಯಣ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ. ಈ 25 ವರ್ಷಗಳಲ್ಲಿ ಅವರು ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ಅದರಲ್ಲಿ ನಾಯಕ-ನಾಯಕಿ, ಪೋಷಕ ನಟರು ಎಲ್ಲರೂ ಸೇರಿದ್ದಾರೆಂದರೆ ತಪ್ಪಲ್ಲ. ಸಾಮಾನ್ಯವಾಗಿ ಹೊಸಬರಿಗೆ ಅವಕಾಶ ಕೊಡುವಾಗ ಆಡಿಷನ್ ಮಾಡೋದು ಸಹಜ. ಇಲ್ಲಿವರೆಗೆ ನಾರಾಯಣ್ ಅನೇಕರನ್ನು ಆಡಿಷನ್ ಮಾಡಿದ್ದಾರೆ.
ಆದರೆ, ನಾರಾಯಣ್ ಅವರನ್ನು ಆಡಿಷನ್ ಮಾಡಿದವರು ಯಾರೂ ಇದ್ದಂತಿಲ್ಲ. ಆದರೆ ಇತ್ತೀಚೆಗೆ ನಾರಾಯಣ್ ಅವರನ್ನೂ ಒಬ್ಬರು ಆಡಿಷನ್ ಮಾಡಿದ್ದಾರೆ. ಅದು ಬೇರಾರು ಅಲ್ಲ, “ಪಂಟ’ ಚಿತ್ರದ ನಾಯಕಿ ರಿತೀಕ್ಷಾ. ಹೀಗೆಂದರೆ ನಿಮಗೆ ಆಶ್ವರ್ಯವಾಗಬಹುದು. ಆದರೂ ಸತ್ಯ. ಸ್ವತಃ ನಾರಾಯಣ್ ಅವರೇ ರಿತೀಕ್ಷಾ ಆಡಿಷನ್ ಮಾಡಿದ್ದನ್ನು ಒಪ್ಪಿಕೊಳ್ಳುತ್ತಾರೆ. ಈ ತರಹದ ಒಂದು ಸ್ವಾರಸ್ಯಕರ ಪ್ರಸಂಗ ನಡೆದಿದ್ದು “ಪಂಟ’ ಚಿತ್ರದ ನಾಯಕಿಯ ಆಡಿಷನ್ ಸಮಯದಲ್ಲಿ.
ಈ ವಾರ ತೆರೆಕಾಣುತ್ತಿರುವ “ಪಂಟ’ ಚಿತ್ರದ ಆರಂಭದ ಸಮಯದಲ್ಲಿ ನಾರಾಯಣ್, ನಾಯಕಿ ಪಾತ್ರಕ್ಕಾಗಿ ಅನೇಕರನ್ನು ಆಡಿಷನ್ ಮಾಡಿದ್ದಾರೆ. ಅದರಲ್ಲಿ ರಿತೀಕ್ಷಾ ಕೂಡಾ ಒಬ್ಬರು. ರಿತೀಕ್ಷಾ ಆಡಿಷನ್ ನಾರಾಯಣ್‌ಗೆ ಹೊಸ ಅನುಭವ ಕೊಟ್ಟಿದೆ. ನಾರಾಯಣ್, ರಿತೀಕ್ಷಾ ಆಡಿಷನ್ ಮಾಡಿ ಮುಗಿಸುತ್ತಿದ್ದಂತೆ ರಿತೀಕ್ಷಾ ನಾರಾಯಣ್ ಅವರ ಆಡಿಷನ್ ಶುರುವಿಟ್ಟುಕೊಂಡಿದ್ದಾರೆ.
ರಿತೀಕ್ಷಾ: ನಿಮ್ಮ ಹೆಸರೇನು?
ಎಸ್.ನಾರಾಯಣ್: ನನ್ನ ಹೆಸರು ಎಸ್. ನಾರಾಯಣ್ ಎಂದು.
ರಿತೀಕ್ಷಾ: ನೀವಿಲ್ಲಿ ಏನು ಮಾಡ್ಕೊಂಡಿದ್ದೀರಿ?
ನಾರಾಯಣ್: ನಾನು ಈ ಸಿನಿಮಾದ ನಿರ್ದೇಶಕ.
ರಿತೀಕ್ಷಾ: ನೀವು ಹಿಂದೆ ಯಾವ ಸಿನಿಮಾ ಮಾಡಿದ್ದೀರಿ?
ಹೀಗೆ ರಿತೀಕ್ಷಾ ಕೇಳುತ್ತಿದ್ದಂತೆ ನಾರಾಯಣ್ ಕಕ್ಕಾಬಿಕ್ಕಿಯಾಗಿದ್ದಾರೆ. ಏಕೆಂದರೆ ಕನ್ನಡ ಹುಡುಗಿಯಾಗಿ ತನ್ನ ಬಗ್ಗೆ ಗೊತ್ತಿಲ್ಲವಲ್ಲ ಎಂದು ಬೇಸರಿಸಿಕೊಂಡ ನಾರಾಯಣ್ ನಿರ್ಮಾಪಕರನ್ನು ಕರೆದು “ಯಾರ್ರೀ, ಆ ಹುಡುಗಿ. ಕನ್ನಡದ ಹುಡುಗಿಗೆ ಅವಕಾಶ ಕೊಡೋಣ ಎಂದರೆ ಆ ಹುಡುಗಿಗೆ ಕನ್ನಡ ಸಿನಿಮಾಗಳ, ನಿರ್ದೇಶಕರ ಬಗ್ಗೆಯೇ ಗೊತ್ತಿಲ್ಲವಲ್ಲ’ ಎಂದು ಹೇಳುತ್ತಾರೆ.
ಆಗ ನಿರ್ಮಾಪಕರು ರಿತೀಕ್ಷಾಳನ್ನು ಕರೆದು “ನೀವು ಗೂಗಲ್‌ನಲ್ಲಾದರೂ ನಾರಾಯಣ್ ಬಗ್ಗೆ ಹುಡುಕಿ, ಮಾತನಾಡಿ’ ಎನ್ನುತ್ತಾರೆ. ಆಗ ರಿತೀಕ್ಷಾ ಗೂಗಲ್‌ಗೆ ಹೋಗಿ “ಎಸ್.ನಾರಾಯಣ್’ ಎಂದು ಸರ್ಚ್ ಕೊಡುತ್ತಾರೆ. ಆಗ ತಾನೇ ಎಸ್.ನಾರಾಯಣ್ ತಮಿಳಿನ “ಪುಲಿ’ ಚಿತ್ರದ ಕರ್ನಾಟಕದ ವಿತರಣಾ ಹಕ್ಕು ಪಡೆದಿರುತ್ತಾರೆ. ಇತ್ತ ಕಡೆ ರಿತೀಕ್ಷಾ ಗೂಗಲ್‌ನಲ್ಲಿ “ಎಸ್. ನಾರಾಯಣ್’ ಎಂದು ಸರ್ಚ್ ಕೊಡುತ್ತಿದ್ದಂತೆ “ತಮಿಳು “ಪುಲಿ’ ವಿತರಣಾ ಹಕ್ಕು ಪಡೆದ ನಾರಾಯಣ್’ ಎಂಬ ಸುದ್ದಿ ದೊಡ್ಡದಾಗಿ ಕಾಣಿಸುತ್ತದೆ.
ಕಟ್ ಮಾಡಿದರೆ ರಿತೀಕ್ಷಾ ನಾರಾಯಣ್ ಮುಂದೆ ಕುಳಿತು “ಸರ್ ನೀವು “ಪುಲಿ’ ಸಿನಿಮಾ ಡಿಸ್ಟ್ರಿಬ್ಯೂಟರ್ ಅಲ್ವಾ? ಎನ್ನುತ್ತಾರೆ. ನಾರಾಯಣ್‌ಗೆ ನಗಬೇಕೋ ಅಳಬೇಕೋ ಎಂಬ ಸಂದರ್ಭ. ರಿತೀಕ್ಷಾ ಕೋಲಾರ ಮೂಲದವರು. ಅಲ್ಲಿ ತೆಲುಗು, ತಮಿಳು ಸಿನಿಮಾಗಳ ಪ್ರಾಬಲ್ಯ ಜಾಸ್ತಿ ಇರುವುದರಿಂದ ರಿತೀಕ್ಷಾಗೂ ಕನ್ನಡ ಸಿನಿಮಾಗಳ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ಹುಡುಗಿಯನ್ನು ಕ್ಷಮಿಸಿದ ನಾರಾಯಣ್ “ಪಂಟ’ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ.
“ರಿತೀಕ್ಷಾ ಒಳ್ಳೆಯ ನಟಿ. ಚಿತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ನಿರ್ದೇಶಕರ ಕಲ್ಪನೆಯನ್ನು ಅರ್ಥಮಾಡಿಕೊಂಡು ನಟಿಸುವ ಸಾಮರ್ಥಯ ರಿತೀಕ್ಷಾ’ಗಿದೆ ಎಂಬ ಕಾಂಪ್ಲಿಮೆಂಟ್ ಕೂಡಾ ನಾರಾಯಣ್‌ರಿಂದ ಬರುತ್ತದೆ. ಅಂದಹಾಗೆ, ನಾರಾಯಣ್ ಇಷ್ಟೆಲ್ಲಾ ಹೇಳುವಾಗ ಪಕ್ಕದಲ್ಲಿ ಕುಳಿತ್ತಿದ್ದ ರಿತೀಕ್ಷಾ ನಾಚಿ ನೀರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.