ಶಿವಾಜಿ ಸುರತ್ಕಲ್-2ಗೆ ನಾಜರ್ ಎಂಟ್ರಿ
Team Udayavani, Jan 3, 2022, 4:34 PM IST
ರಮೇಶ್ ಅರವಿಂದ್ ನಟನೆಯ “ಶಿವಾಜಿ ಸುರತ್ಕಲ್-2′ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಈಗ ಚಿತ್ರತಂಡಕ್ಕೆ ನಟರೊಬ್ಬರ ಎಂಟ್ರಿಯಾಗಿದೆ. ಅದು ನಾಜರ್.
ವಿಭಿನ್ನ ಪಾತ್ರಗಳ ಮೂಲಕ ಬಹುಭಾಷೆಯಲ್ಲಿ ಜನಪ್ರಿಯತೆ ಪಡೆದಿರುವ ನಾಜರ್ ಈಗ “ಶಿವಾಜಿ ಸುರತ್ಕಲ್-2’ನಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಲ್ಲಿ ಅವರು ಶಿವಾಜಿ ಸುರತ್ಕಲ್ ತಂದೆ ವಿಜೇಂದ್ರ ಸುರತ್ಕಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ತಂದೆ-ಮಗನ ನಡುವಿನ ಸಾಕಷ್ಟು ಆಸಕ್ತಿಕರ ಅಂಶಗಳು ತೆರೆದುಕೊಳ್ಳಲಿದೆಯಂತೆ.
ಆಕಾಶ್ ಶ್ರೀವತ್ಸ ಈ ಚಿತ್ರದ ನಿರ್ದೇಶಕರು. ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಶಿವಾಜಿ ಸುರತ್ಕಲ್ 2 ರೆಗ್ಯುಲರ್ ಸ್ಕ್ರಿಪ್ಟ್ ಅಲ್ಲ. ಇಲ್ಲಿ ಮನುಷ್ಯನ ಮನಸ್ಸಿನೊಳಗೆ ಏನಾಗುತ್ತದೆ, ಆತನ ಆಲೋಚನೆಗಳು … ಹೀಗೆ ಹಲವು ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಾವು ಮೊದಲ ಭಾಗ ಬಿಡುಗಡೆಯಾದಾಗ ಥಿಯೇಟರ್ ಮಾಡಿದ್ದೆವು. ಆಗ ಅನೇಕರು, ಚಿತ್ರದ ಕೊನೆಯಲ್ಲಿ ರಮೇಶ್ ಹಾಗೂ ರಾಧಿಕಾ ಅವರ ಫೋಟೋ ತೋರಿಸಿದ್ದು ಯಾಕೆ ಹಾಗೂ ಸುರತ್ಕಲ್‌ಗೂ ಚಿತ್ರಕ್ಕೂ ಸಂಬಂಧವೇನು ಎಂದು ಕೇಳಿದ್ದರು. ಅವೆಲ್ಲದಕ್ಕೂ ಉತ್ತರ ಈ ಚಿತ್ರದಲ್ಲಿದೆ. ಇಲ್ಲಿ ಪತ್ತೆದಾರಿಯಾಗಿ ಕಥೆ ಮುಂದೆ ಸಾಗುವುದಿಲ್ಲ. ಶಿವಾಜಿಯ ಎಮೋಶನಲ್ ಜರ್ನಿ ಕೂಡಾ ಇಲ್ಲಿ ಸಾಗಿಬರಲಿದೆ’ ಎನ್ನುತ್ತಾರೆ.
ಚಿತ್ರದ ತಾರಾಗಣದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ರಘು ರಾಮಣಕೊಪ್ಪ, ವಿದ್ಯಾ ಮೂರ್ತಿ ಪಾತ್ರಗಳು ರಿಪೀಟ್ ಆಗಲಿದೆ. ಇದರ ಜೊತೆಗೆ ಮೇಘನಾ ಗಾಂವ್ಕರ್, ರಾಕೇಶ್ ಮಯ್ಯ, ವಿನಾಯಕ ಜೋಷಿ ಸೇರ್ಪಡೆಯಾಗಿದೆ. ಈಗಷ್ಟೇ ತರಬೇತಿ ಮುಗಿಸಿ ಕೆಲಸಕ್ಕೆ ಸೇರಿರುವ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ರಾಕೇಶ್ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.