ಸೈನಿಕನ ದೇಶಪ್ರೇಮ ಗೀತೆ ‘ನೀನೇ ನನ್ನ ಪ್ರೇಮ’
Team Udayavani, Dec 28, 2022, 5:22 PM IST
ನಟ ನಿಶ್ಚಿತ್ ಕೊರೋಡಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ “ನೀನೆ ನನ್ನ ಪ್ರೇಮ’ ಮ್ಯೂಸಿಕ್ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಗಿದೆ. ದೇಶ ಕಾಯುವ ಸೈನಿಕನ ಕಥೆಯಾಧರಿಸಿದ “ನೀನೇ ನನ್ನ ಪ್ರೇಮ’ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಸೈನಿಕನ ಮನಸ್ಸಿನ ತಲ್ಲಣ ಮತ್ತು ಭಾವನೆಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ನೀನೆ ನನ್ನ ಪ್ರೇಮ’ ಗೀತೆಯಲ್ಲಿ ನಟ ನಿಶ್ಚಿತ್ ಕೊರೋಡಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಶ್ವಿಕಾ ಭಾರದ್ವಾಜ್ ನಾಯಕಿಯಾಗಿದ್ದಾರೆ. ಉಳಿದಂತೆ ಸಂದೀಪ್ ಮಲಾನಿ, ಪಾರ್ಥ ನಂದೀಶ್, ಕಲಾಜ್ಯೋತಿ, ನಾಗಮಣಿ ನಾಗಭೂಷಣ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಯುವ ಪ್ರತಿಭೆ ನಾಗೇಂದ್ರ ಬಿಜೂರ್ ಹಾಗೂ ಚಂದ್ರ ಲವ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಗೀತೆಗೆ ಬಾಲಿವುಡ್ನ ಖ್ಯಾತ ಹಿನ್ನಲೆ ಗಾಯಕ ಅರ್ಮನ್ ಮಲ್ಲಿಕ್ ಹಾಗೂ ಶಶಿಕಲಾ ಸುನಿಲ್ ಧ್ವನಿಯಾಗಿದ್ದಾರೆ. ಶಶಿಕುಮಾರ್ ಶಾಂತರಾಜು ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ವಿವಿಯನ್ ಅಂಬ್ರೋಸ್ ಕ್ಯಾಮರಾ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ.
ಇನ್ನು ಈ ಗೀತೆಯನ್ನು ತಂಡ ದೇಶದ ಸೈನಿಕರಿಗೆ ಸಮರ್ಪಣೆ ಮಾಡಿದೆ. ಗೀತೆಯಲ್ಲಿ ಸೈನಿಕನ ದೇಶಭಕ್ತಿ ಮತ್ತು ಅವರ ಕುಟುಂಬದವರ ಭಾವನೆಗಳನ್ನು ಸಹಜವಾಗಿ ಚಿತ್ರಿಸಲಾಗಿದೆ. “ಪ್ರತಿಯೊಬ್ಬರಿಗೂ ಸೈನಿಕರ ಕಾರ್ಯ ಮತ್ತು ಅವರ ಸೇವೆಯ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಸಲುವಾಗಿ ಇದೊಂದು ಚಿಕ್ಕ ಪ್ರಯತ್ನ. ನಮ್ಮ ಪ್ರಯತ್ನಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮ್ಮ ಪ್ರಯತ್ನ ಸಾರ್ಥಕವಾಗಿದೆ’ ಎನ್ನುತ್ತಾರೆ. “ನೀನೆ ನನ್ನ ಪ್ರೇಮ’ ಗೀತೆಯ ಹಿಂದಿನ ರೂವಾರಿ ನಾಗೇಂದ್ರ ಬಿಜೂರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.