ಹ್ಯಾಂಗೋವರ್ನಲ್ಲಿ ನೀತು!
Team Udayavani, Dec 11, 2017, 10:47 AM IST
ಕನ್ನಡದಲ್ಲಿ ನಾಯಕಿಯರು ಸ್ಪೆಷಲ್ ಸಾಂಗು, ಐಟಂ ಸಾಂಗ್ಗಳಿಗೆ ಹೆಜ್ಜೆ ಹಾಕುವುದು ಹೊಸದೇನಲ್ಲ. ಈಗಾಗಲೇ ಅನೇಕ ನಟಿಯರು ಅಂತಹ ಅದೆಷ್ಟೋ ಹಾಡುಗಳಿಗೆ ತಮ್ಮ ಸೊಂಟ ಬಳುಕಿಸಿರುವುದುಂಟು. ಈಗ ನೀತು ಕೂಡ ಚಿತ್ರವೊಂದರ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಹಾಗಂತ ನೀತು ಅವರಿಗೆ ಅದು ಹೊಸದೇನೂ ಅಲ್ಲ ಬಿಡಿ. ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಇತ್ತೀಚೆಗೆ “ಹ್ಯಾಂಗೋವರ್’ ಚಿತ್ರದ ಪಬ್ ಸಾಂಗ್ಗೆ ನೀತು ಕುಣಿದಿದ್ದಾರೆ. ವಿಠಲ್ ಭಟ್ ನಿರ್ದೇಶನದ “ಹ್ಯಾಂಗೋವರ್’ ಚಿತ್ರವನ್ನು ರಾಕೇಶ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಪಬ್ ಸಾಂಗ್ ಇದ್ದುದರಿಂದ ಅದನ್ನು ನೀತು ಅವರಿಂದ ಮಾಡಿಸಬೇಕು ಅಂತ ನಿರ್ಧರಿಸಿದ ಚಿತ್ರತಂಡ, ಮೈಸೂರಿನ ಫನ್ ಫೋರ್ಟ್ನಲ್ಲಿ ಹಾಕಿದ್ದ ವಿಶೇಷ ಪಬ್ಸೆಟ್ನಲ್ಲಿ ನೀತು ಅವರಿಂದ ಹೆಜ್ಜೆ ಹಾಕಿಸಿದೆ.
ವೀರ್ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ “ನಾನೇ ರುಕ್ಕು, ಕೊಡ್ತೀನಿ ಒಂದು ಲುಕ್ಕು, ನಾನಂದ್ರೆ ಫುಲ್ಲು ಕಿಕ್ಕು, ಎಂಜಾಯಿ ಮಾಡಿ, ಯಾರು ಇಲ್ಲಿ ಅಂಜೋದು ಬೇಡ, ಆಸೆ ಅದುಮೋದು ಬೇಡ, ಅಂದ ಅನುಭವಿಸಿ ನೋಡಿ …’ ಎಂಬ ಹಾಡಿಗೆ ಪಡ್ಡೆಗಳಿಗೂ ಕಿಕ್ ಕೊಡುವಂತೆ ನೀತು ಕುಣಿದಿದ್ದಾರೆ. ಕೃಷ್ಣ ಅವರು ಬರೆದ ಈ ಹಾಡನ್ನು ನೃತ್ಯ ನಿರ್ದೇಶಕ ಕಲೈ ಸಂಯೋಜನೆ ಮಾಡಿದ್ದಾರೆ.
ಒಂದಷ್ಟು ನೃತ್ಯ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ನೀತು ಅವರನ್ನು ಯೋಗಿ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಸೆಲೆಬ್ರಿಟಿ ಡಾನ್ಸ್ ಶೋ ಈವೆಂಟ್ನ ಎಂಜಾಯ್ ಮಾಡಲು ಬಂದ ಮೂವರು ಹುಡುಗರು ಮತ್ತು ಮೂವರು ಹುಡುಗಿಯರ “ಹ್ಯಾಂಗೋವರ್’ ಕಥೆಯಿದು. ಈ ಹಾಡಿನ ಮೂಲಕ “ಹ್ಯಾಂಗೋವರ್’ ಚಿತ್ರೀಕರಣ ಪೂರ್ಣಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲ್ಯಾಕ್ಸ್ ಮೂಡ್ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.