ನೆಗೆಟಿವ್‌ ಕಾಮೆಂಟ್ಸ್‌ಗೆ ತಲೆಕೆಡಿಸಿಕೊಳ್ಳಲ್ಲ: ಪೈಲ್ವಾನ್‌ ಚಿತ್ರತಂಡ

ಯಾರು ಕೆಟ್ಟ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ ಅವರಿಂದ ನಾನು ಖುಷಿಯಾಗಿದ್ದೇನೆ: ಸುದೀಪ್‌

Team Udayavani, Sep 16, 2019, 3:06 AM IST

pailwan

ಸುದೀಪ್‌ ಅಭಿನಯದ “ಪೈಲ್ವಾನ್’ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಸಿನಿಮಾ ಕೂಡ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್‌ ಪ್ರಚಾರ ಮಾಡುತ್ತಿರುವುದು ಚಿತ್ರತಂಡದ ಗಮನಕ್ಕೆ ಬಂದಿತ್ತು. “ಪೈಲ್ವಾನ್‌’ ಕುರಿತು ಕೆಟ್ಟದ್ದಾಗಿ ಪ್ರಚಾರ ಮಾಡುವ ಬಗ್ಗೆ ಸ್ವತಃ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರ ಕಿವಿಗೂ ಬಿದ್ದಿತ್ತು.

ಈ ವಿಚಾರವಾಗಿ, ಟ್ವೀಟ್‌ ಮಾಡಿರುವ ನಿರ್ಮಾಪಕಿ ಸ್ವಪ್ನ ಕೃಷ್ಣ, “ಯಾವುದೇ ನೆಗೆಟಿವ್ಸ್‌ಗೆ ನಮ್ಮ ತಂಡ ತಲೆ ಕೆಡಿಸಿಕೊಳ್ಳುವುದಿಲ್ಲ, ಒಂದಂತೂ ಸತ್ಯ. ನಾವು ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದೇವೆ. ನೀವು ಮೆಚ್ಚಿ ಸಿನಿಮಾ ನೋಡಿ ಚೆನ್ನಾಗಿ ಇದೆ ಎಂದಿದ್ದೀರಿ. ಇದು ಜೀವನ. ಒಳ್ಳೇದು ಬೈಸಿದ್ರು, ಕೆಟ್ಟದ್ದನ್‌ ಬಯಸಿದ್ರು ನಿಮಗೆ 10 ಪಟ್ಟು ಜಾಸ್ತಿ ಸಿಗತ್ತೆ’ ಎಂದು ಟ್ವೀಟ್‌ ಮಾಡಿದ್ದಾರೆ. ಕೆಲವರು “ಪೈಲ್ವಾನ್’ ಸಿನಿಮಾವನ್ನು ನೋಡದೆ, ಚಿತ್ರ ಚೆನ್ನಾಗಿಲ್ಲ ಎಂದು ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.

ಈ ಬಗ್ಗೆ ಸುದೀಪ್‌ ಕೂಡ ಶನಿವಾರ ಮಾಡಿದ ಟ್ವೀಟ್‌ ಹೀಗಿತ್ತು. “ಯಾರು ಕೆಟ್ಟ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ, ಅವರಿಂದ ನಾನು ಖುಷಿಯಾಗಿ ಇದ್ದೇನೆ. ಅವರು ಇನ್ನೊಂದು ಕಡೆ, ಈಗಲೂ “ಪೈಲ್ವಾನ್‌’ ಬಗ್ಗೆ ಮಾತಾನಾಡಲು ಸಮಯ ಮತ್ತು ಶ್ರಮವನ್ನು ಹಾಕುತ್ತಿದ್ದಾರೆ. ನಾನು ಅದನ್ನು ಗಮನಿಸುತ್ತಿದ್ದೇನೆ. ಯಾವಾಗ ಎಲ್ಲರೂ ನಮ್ಮ ಬಗ್ಗೆ ಕೆಟ್ಟದನ್ನು ಹಬ್ಬಿಸಲು ಸಾಧ್ಯ? ನಾವು ಒಳ್ಳೆಯದನ್ನು ಮಾಡುತ್ತಿರುವಾಗ ಅಲ್ಲವೇ. ಅದಕ್ಕೆ ಈ ಕ್ಷಣವನ್ನು ಖುಷಿಪಡಿ’ ಎಂದಿದ್ದರು.

ದರ್ಶನ್‌ ಫ್ಯಾನ್ಸ್‌ ಗರಂ: “ಪೈಲ್ವಾನ್‌’ ಚಿತ್ರದ ನೆಗೆಟಿವ್‌ ಪ್ರಚಾರಕ್ಕೆ ಹಾಗೂ ಚಿತ್ರ ಪೈರಸಿಯಾಗಲು ದರ್ಶನ್‌ ಅಭಿಮಾನಿಗಳು ಕಾರಣ ಎಂಬಂತೆ ಕೆಲವರು ಬಿಂಬಿಸುತ್ತಿದ್ದಾರೆ. ಇದು ದರ್ಶನ್‌ ಅಭಿಮಾನಿಗಳನ್ನು ಕೆರಳಿಸಿದೆ. ಈ ಬಗ್ಗೆ ದರ್ಶನ್‌ ಫ್ಯಾನ್ಸ್‌ ಟ್ವೀಟ್‌ ಮಾಡುತ್ತಿದ್ದಾರೆ. “ಡಿಬಾಸ್‌ ಹುಡುಗರು ಅಫೀಶಿಯಲ್‌’ ಎಂಬ ಟ್ವೀಟರ್‌ ಅಕೌಂಟ್‌ನಲ್ಲಿ ಈ ಬಗ್ಗೆ ಟ್ವೀಟ್‌ ಮಾಡಲಾಗಿದ್ದು, ಆ ಟ್ವೀಟ್‌ ಹೀಗಿದೆ; “ಯಜಮಾನ’, “ಕುರುಕ್ಷೇತ್ರ’ ಪೈರಸಿ ಆದಾಗ ಯಾರು ಮಾತನಾಡಲಿಲ್ಲ.

ಆದರೆ ಈಗ ತಮಿಳ್‌ ರಾಕರ್ಸ್‌ ಪೈರಸಿ ಮಾಡಿದರೆ ಅದನ್ನ ನಮ್‌ ಬಾಸ್‌ ಫ್ಯಾನ್ಸ್‌ ತಲೆಗೆ ಕಟ್ಟಲು ಹೊರಟಿರುವ ಎಲ್ಲಾ ಬಾಸ್‌ ಅವರ ಹಿತಶತ್ರುಗಳಿಗೆ ಶುಭವಾಗಲಿ…’ ,”ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ ಅಂದ ಮಾತ್ರಕ್ಕೆ ಅವರೇ ಮಾಡಿಸಿದ್ದು ಅಂತಲ್ಲ ಅಥವಾ ಅವರಿಗೆ ಸಂಬಂಧ ಪಟ್ಟವರು ಮಾಡಿದ್ದು ಅಂತಲ್ಲ , ನಿಜವಾದ ಕಳ್ಳರನ್ನು ಹಿಡಿಯಿರಿ , ಆಮೇಲೆ ಇನ್ನೊಬರ ಕಡೆ ಬೆರಳು ಮಾಡಿ ತೋರಿಸಿ … ಅಭಿಮಾನ ಅಂತ ಬಂದ್ರೆ ಡಬಲ್‌ಗೆ ತ್ರಿಬಲ್‌ ನಿಯತ್ತಿರೋರು ನಾವು’ ಹೀಗೆ ಟ್ವೀಟ್‌ ಮಾಡಿದ್ದಾರೆ.

ಪೈಲ್ವಾನ್‌ ವೀಕ್ಷಿಸಿದ ಸಲ್ಮಾನ್‌ ಫ್ಯಾಮಿಲಿ: ದೇಶಾದ್ಯಂತ “ಪೈಲ್ವಾನ್‌’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂಬೈನಲ್ಲಿ ಹಿಂದಿ ಭಾಷೆಯಲ್ಲಿ ತೆರೆಕಂಡ “ಪೈಲ್ವಾನ್‌’ ಚಿತ್ರವನ್ನು ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ಖಾನ್‌ ಶುಕ್ರವಾರ ವೀಕ್ಷಿಸಿದ್ದರು. ಆ ಬಳಿಕ “ಪೈಲ್ವಾನ್‌’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟ್ವೀಟ್‌ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದರು. ಇನ್ನು, ಸಲ್ಮಾನ್‌ಖಾನ್‌ ಅವರ ಕುಟುಂಬದವರೂ ಸಹ ಶನಿವಾರ “ಪೈಲ್ವಾನ್‌’ ಚಿತ್ರವನ್ನು ವೀಕ್ಷಿಸಿದ್ದಾರೆ.

ಸಲ್ಮಾನ್‌ಖಾನ್‌ ಅವರ ತಂದೆ ಸಲೀಂ ಖಾನ್‌ ಹಾಗು ಸಹೋದರ ಸೋಹೈಲ್‌ ಖಾನ್‌ “ಪೈಲ್ವಾನ್‌’ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ವಿಶ್‌ ಮಾಡಿದ್ದಾರೆ. ಸದೀಪ್‌ ಅವರೇ ಮುಂಬೈಗೆ ಹೋಗಿ ಸಲ್ಮಾನ್‌ ಕುಟುಂಬಕ್ಕೆ ಸಿನಿಮಾ ತೋರಿಸಿದ್ದಾರೆ. ಅತ್ತ ತೆಲುಗಿನಲ್ಲೂ ತೆರೆಕಂಡಿರುವ “ಪೈಲ್ವಾನ್‌’ ಸಿನಿಮಾವನ್ನು ಮೆಗಾಸ್ವಾರ್‌ ಚಿರಂಜೀವಿ ವೀಕ್ಷಿಸುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.