ಚಿತ್ರರಂಗ ಎಂಟ್ರಿಗೆ ಪ್ರೇಮ್ ಪುತ್ರಿ ಸಿದ್ಧತೆ
ಅಮೃತಾ ಕಲರ್‌ಫುಲ್ ಫೋಟೋಶೂಟ್
Team Udayavani, Oct 14, 2020, 12:26 PM IST
ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಾಯಕ ನಟ – ನಟಿಯರ ಮಕ್ಕಳು ಕೂಡ ಚಿತ್ರರಂಗದ ಕಡೆಗೆ ಮುಖ ಮಾಡುವುದು ಹೊಸದೇನಲ್ಲ.ಕನ್ನಡ ಚಿತ್ರರಂಗದಲ್ಲೂ ಈಗಾಗಲೇ ಸಾಕಷ್ಟು ನಾಯಕ ನಟ – ನಟಿಯರ ಮಕ್ಕಳು ಕಲಾವಿದರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಅದರಲ್ಲಿ ಕೆಲವರು ಭದ್ರ ನೆಲೆಯನ್ನೂ ಕಂಡು ಕೊಂಡಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ರೊಮ್ಯಾಂಟಿಕ್ ಹೀರೋ “ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್‌ಕೂಡ ಇದೇ ಸಾಲಿನಲ್ಲಿ ಚಿತ್ರರಂಗ ಪ್ರವೇಶ ಪಡೆಯುವ ತಯಾರಿಯಲ್ಲಿದ್ದಾರೆ.
ಹೌದು, ಇತ್ತೀಚೆಗಷ್ಟೇ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್, ಸಾಂಪ್ರದಾಯಿಕ ಉಡುಪಿನಲ್ಲಿ ಸ್ಪೆಷಲ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿದ್ದು, ಪ್ರೇಮ್ ಪುತ್ರಿ ಚಿತ್ರರಂಗಕ್ಕೆಕಾಲಿಡಲು ತೆರೆಮರೆಯಲ್ಲಿ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಸದ್ಯ ದ್ವಿತೀಯ ವರ್ಷದ ಎಂಜಿನಿಯರಿಂಗ್ ಶಿಕ್ಷಣ ಅಧ್ಯಯನ ಮಾಡುತ್ತಿರುವ ಅಮೃತಾ, ಓದಿನಲ್ಲೂ ಸಾಕಷ್ಟು ಮುಂದಿರುವ ಹುಡುಗಿ. ಬಾಲ್ಯದಿಂದಲೂ ನೃತ್ಯ ಮತ್ತುಕಲೆಯ ಕಡೆಗೆ ಆಸಕ್ತಿ ಬೆಳೆಸಿಕೊಂಡಿರುವ ಅಮೃತಾ, ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಡಬ್‌ಸ್ಮ್ಯಾಶ್ ಮತ್ತು ಟಿಕ್‌ಟಾಕ್ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಪ್ರೇಮ್ ತಮ್ಮ ಪುತ್ರಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, “ಮಗಳೆಂದರೆ ತಂದೆಗೆ ದೇವತೆಯಂತೆ.ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲ ತಂದೆಯರಿಗೂ ಸಿಗುವುದಿಲ್ಲ. ಅಭಿನಂದನೆಗಳು ನನ್ನ ಅದೃಷ್ಟದ ದೇವತೆಗೆ’ ಎಂದು ಬರೆದುಕೊಂಡಿದ್ದಾರೆ.
ತಮ್ಮ ಪುತ್ರಿಯ ಚಿತ್ರರಂಗ ಎಂಟ್ರಿ ಬಗ್ಗೆ ಮಾತನಾಡುವ ಪ್ರೇಮ್, “ಅವಳಿನ್ನು ಚಿಕ್ಕವಳು, ಓದುತ್ತಿದ್ದಾಳೆ. ಅವಳನ್ನು ಚಿತ್ರರಂಗಕ್ಕೆ ತರುವ ಆಸೆ ಇದೆ. ಅವಳಿಗೂ ಸಿನಿಮಾರಂಗದ ಮೇಲೆ ಆಸಕ್ತಿ ಇದೆ. ತುಂಬಾ ದಿನಗಳಿಂದ ಒಂದು ಒಳ್ಳೆಯ ಫೋಟೋಶೂಟ್ ಮಾಡಿಸಬೇಕೆಂದು ಅಂದುಕೊಂಡಿದ್ದೆವು. ಈಗ ಅದು ನಡೆದಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.