ಹೊಸಬರ ಟ್ರೇಲರ್ಗಳಿಗೆ ಸುದೀಪ್ ಮೆಚ್ಚುಗೆ
Team Udayavani, Mar 12, 2017, 11:25 AM IST
“ಈಗಂತೂ ನಾವು ತುಂಬಾನೇ ಹುಷಾರಾಗಿರಬೇಕು…’ ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟ ಸುದೀಪ್. ಅಷ್ಟಕ್ಕೂ ಸುದೀಪ್ ಯಾಕೆ ಈ ಮಾತು ಹೇಳಿದ್ದು, ಹೊಸಬರ ಭರಾಟೆಗೆ ತಲೆಕೆಡಿಸಿಕೊಂಡಿದ್ದು ಯಾಕೆ ಗೊತ್ತಾ? ಅದಕ್ಕೆ ಕಾರಣ, ಹೊಸಬರ ಹೊಸ ಶೈಲಿಯ ಸಿನಿಮಾಗಳು ಮತ್ತು ಹೊಸ ಬಗೆಯಲ್ಲಿ ಬರುತ್ತಿರುವ ಟ್ರೇಲರ್ಗಳು. ಹೌದು. ಈ ಮಾತನ್ನು ಸ್ವತಃ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
ಅದಕ್ಕೆ ಸಾಕ್ಷಿಯಾಗಿದ್ದು, “ಸಿಲಿಕಾನ್ ಸಿಟಿ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ. ಅಂದಿನ ಹೈಲೆಟ್ ಸುದೀಪ್. ಆ ಚಿತ್ರದ ಆಡಿಯೋ ಸಿಡಿ ರಿಲೀಸ್ ಮಾಡಿದ್ದೂ ಅವರೇ. ಅವರಿಗೆ “ಸಿಲಿಕಾನ್ ಸಿಟಿ’ ಟ್ರೇಲರ್ ನೋಡಿ ಖುಷಿಯಾಯ್ತಂತೆ. ಆ ಮಾತು ಹೇಳುತ್ತಲೇ ಅವರು, ಹೊಸಬರ ಚಿತ್ರಗಳ ಬಗ್ಗೆ ಮಾತನಾಡಿದರು. ಹೊಸ ರೀತಿಯಲ್ಲಿ ಟ್ರೇಲರ್ ಕಟ್ ಮಾಡುವುದನ್ನು ಮನಸಾರೆ ಒಪ್ಪಿಕೊಂಡರು.
“ಈಗಂತೂ ಹೊಸಬರ ಸಿನಿಮಾಗಳ ಟ್ರೇಲರ್ಗಳು ಸಖತ್ ಸೌಂಡ್ ಮಾಡುತ್ತಿವೆ. ಹಾಗಾಗಿ ನಮಗೂ ಒಂದು ರೀತಿಯ ಭಯ ಕಾಡೋಕೆ ಶುರುವಾಗಿದೆ. ಅದೇ ಕಾರಣಕ್ಕೆ ನಾವು “ಹೆಬ್ಬುಲಿ’ ಚಿತ್ರದ ಟ್ರೇಲರ್ ಕೂಡ ರಿಲೀಸ್ ಮಾಡಲಿಲ್ಲ. ಅದೂ ಕೂಡ ಇದೇ ಕಾರಣಕ್ಕೆ. ನಾವು ಸಾಕಷ್ಟು ಸಲ “ಹೆಬ್ಬುಲಿ’ ಚಿತ್ರದ ಟ್ರೇಲರ್ ಕಟ್ ಮಾಡಿದ್ದುಂಟು. ಆದರೆ, ನಮ್ಮ ಅಕ್ಕಪಕ್ಕ ಚಿತ್ರಗಳ ಟ್ರೇಲರ್ ನೋಡುತ್ತಿದ್ದಂತೆಯೇ, ಒಂದು ರೀತಿ ಭಯ ಕಾಡುತ್ತಿತ್ತು.
ಯಾಕೆಂದರೆ, ಎಲ್ಲರೂ ಸಖತ್ ಟ್ರೇಲರ್ ಕಟ್ ಮಾಡಿ ಬಿಡುವಾಗ, ನಮ್ಮದು ಹೇಗಿರುತ್ತೋ ಏನೋ ಎಂಬ ಭಯವಿತ್ತು. “ಹೆಬ್ಬುಲಿ’ ಟ್ರೇಲರ್ಗಾಗಿ ಹುಲಿಯನ್ನು ಹಾಕಿ ಟ್ರೇಲರ್ ಕಟ್ ಮಾಡಿದ್ವಿ, ನನ್ನ ಬಗ್ಗೆಯೂ ಟ್ರೇಲರ್ ಕಟ್ ಮಾಡಲಾಯಿತು. ಆದರೆ, ಬಿಡಲಿಲ್ಲ. ಎಲ್ಲರೂ “ಹೆಬ್ಬುಲಿ’ ಟ್ರೇಲರ್ ರಿಲೀಸ್ ಮಾಡೋದು ಯಾವಾಗ ಅಂತಾನೇ ಹೇಳ್ತಾ ಇದ್ದರು. ಬೇರೆಯವರ ಟ್ರೇಲರ್ ನೋಡಿದರೆ, ಖುಷಿಯಾಗುತ್ತೆ. ಟ್ರೇಲರ್ ಕಟ್ ಮಾಡೋದು ಕೂಡ ಒಂದು ಟಾಲೆಂಟ್. ಅದು ಎಲ್ಲರಿಗೂ ಬರೋದಿಲ್ಲ’ ಎಂದರು ಸುದೀಪ್.
ನಾರ್ಮಲ್ ಹೇರ್ಸ್ಟೈಲ್ಗೆ : ಸುದೀಪ್ ಮತ್ತೆ ತಮ್ಮ ಒರಿಜಿನಲ್ ಹೇರ್ಸ್ಟೈಲ್ಗೆ ಮರಳಿದ್ದಾರೆ. ಈಗ ನೀವು ಸುದೀಪ್ ಅವರ ಈ ಹಿಂದಿನ ಹೇರ್ಸ್ಟೈಲ್ ಅನ್ನೇ ನೋಡಬಹುದು. ಸುಮಾರು ಒಂದೂವರೆ ವರ್ಷದಿಂದ ಸುದೀಪ್ ಅವರ ಹೇರ್ಸ್ಟೈಲ್ ಭಿನ್ನವಾಗಿತ್ತು. ಯಾವತ್ತು “ಹೆಬ್ಬುಲಿ’ ಚಿತ್ರಕ್ಕಾಗಿ ಹೇರ್ಸ್ಟೈಲ್ ಬದಲಿಸಿದರೂ ಅಂದಿನಿಂದ ಸಿನಿಮಾ ಬಿಡುಗಡೆಯಾಗುವವರೆಗೂ ಅದನ್ನೇ ಮೆಂಟೇನ್ ಮಾಡಿಕೊಂಡು ಬಂದಿದ್ದರು.
“ಹೆಬ್ಬುಲಿ’ ಬೆನ್ನಲ್ಲೇ ನಿರ್ದೇಶಕ ಪ್ರೇಮ್ “ದಿ ವಿಲನ್’ ಚಿತ್ರಕ್ಕಾಗಿ ಮತ್ತೆ ಸುದೀಪ್ ಅವರ ಹೇರ್ಸ್ಟೈಲ್ ಬದಲಿಸಿ ಟೀಸರ್ ಶೂಟ್ ಮಾಡಿದ್ದರು. ಹಾಗಾಗಿ, ಕೆಲವು ದಿನಗಳ ಕಾಲ ತಲೆಗೆ ಸ್ಕಾರ್ಪ್ ಕಟ್ಟಿಕೊಂಡಿದ್ದ ಸುದೀಪ್ ಈಗ ಅದರಿಂದ ಮುಕ್ತರಾಗಿದ್ದಾರೆ. ಈಗ ಅವರ ಒರಿಜಿನಲ್ ಹೇರ್ಸ್ಟೈಲ್ನಲ್ಲೇ ಮಿಂಚುತ್ತಿದ್ದಾರೆ ಸುದೀಪ್. ಸಿನಿಮಾಕ್ಕಾಗಿ ಸುದೀಪ್ ಅವರ ಹೇರ್ಸ್ಟೈಲ್ ಏನೋ ಬದಲಾಯಿತು ನಿಜ.
ಆದರೆ, “ಬಿಗ್ಬಾಸ್ ಸೀಸನ್-4’ನಲ್ಲಿ ಮಾತ್ರ ಅವರ ಅಭಿಮಾನಿಗಳು ಸುದೀಪ್ ಆಗಾಗ ಕೂದಲು ಹಿಂದೆ ಸರಿಸುತ್ತಿದ್ದುದ್ದನ್ನು ಮಿಸ್ ಮಾಡಿಕೊಂಡಿದ್ದಂತೂ ಸುಳ್ಳಲ್ಲ. ಅ ಏಕೆಂದರೆ “ಬಿಗ್ಬಾಸ್ -4′ ಆರಂಭದಿಂದ ಮುಗಿಯುವವರೆಗೂ ಸುದೀಪ್ ಅವರ “ಹೆಬ್ಬುಲಿ’ ಹೇರ್ಸ್ಟೈಲ್ನಲ್ಲೇ ಇದ್ದರು. ಹಾಗಾಗಿ, ಸುದೀಪ್ ಅವರಿಗೆ ಸ್ಟೈಲಿಶ್ ಆಗಿ ಕೂದಲು ಹಿಂದೆ ಸರಿಸುವ ಪ್ರಮೇಯ ಬರಲೇ ಇಲ್ಲ. ಅಂದಹಾಗೆ, ಸುದೀಪ್ ಅವರ “ಹೇರ್ಸ್ಟೈಲ್’ ಅವರ ಮಗಳಿಗೆ ತುಂಬಾ ಇಷ್ಟವಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
T20 series: ಪಾಕಿಸ್ಥಾನಕ್ಕೆ ವೈಟ್ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.