ಹೊಸ ವರ್ಷಕ್ಕೆ ಹೊಸ ರಶ್ಮಿ
Team Udayavani, Dec 2, 2019, 10:50 AM IST
“ದುನಿಯಾ‘ ರಶ್ಮಿ ಮೊಗದಲ್ಲೀಗ ಮಂದಹಾಸಮೂಡಿದೆ. ಅದಕ್ಕೆ ಕಾರಣ, “ಬಿಗ್ಬಾಸ್‘.ಹೀಗಂತ ಸ್ವತಃ ರಶ್ಮಿ ಅವರೇ ಹೇಳಿಕೊಳ್ಳುತ್ತಾರೆ. ಅಷ್ಟಕ್ಕೂ ರಶ್ಮಿ ಅಷ್ಟೊಂದು ಖುಷಿಗೆ ಕಾರಣ, ಅವರೀಗ ಸದ್ಯಕ್ಕೆ ಎರಡು ಕಥೆಗಳನ್ನು ಕೇಳಿ ಇಷ್ಟಪಟ್ಟಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಹೊಸ ವರ್ಷಕ್ಕೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.
ಅಂದಹಾಗೆ, ಅವರು “ಬಿಗ್ಬಾಸ್‘ ಮನೆಯಿಂದ ಹೊರಬಂದ ತಕ್ಷಣ ಸಾಕಷ್ಟು ಕಥೆಗಳನ್ನು ಕೇಳಿದ್ದಾರೆ.ಅವರು ಕೇಳಿದ ಆರೇಳು ಕಥೆಗಳಲ್ಲಿ ಎರಡು ಕಥೆಗಳನ್ನು ಇಷ್ಟಪಟ್ಟಿದ್ದಾರೆ.ಈ ಕುರಿತು ಹೇಳಿಕೊಳ್ಳುವ “ದುನಿಯಾ‘ ರಶ್ಮಿ, “ಸದ್ಯಕ್ಕೆ ನಾನು “ಬಿಗ್ಬಾಸ್‘ ಮನೆಯಿಂದ ಬಂದಾಗ, ಒಂದಷ್ಟು ಕಥೆಗಳನ್ನು ಕೇಳಿದ್ದೇನೆ.
ಅದರಲ್ಲಿ ಎರಡು ಕಥೆಗಳು ತುಂಬಾ ಚೆನ್ನಾಗಿವೆ. ಒಂದು ನಾವೆಲ್ ಬೇಸ್ಡ್ ಸ್ಟೋರಿ. ಇನ್ನೊಂದು ಲವ್ ಸ್ಟೋರಿ. ಅದರಲ್ಲೂ ಒಂದು ಕಥೆಯಲ್ಲಿ ಲೇಡಿ ಪೊಲೀಸ್ ಪಾತ್ರವೂ ಇದೆ. ಆದರೆ, ನನಗೆ ಅದು ಸೂಟ್ ಆಗುತ್ತಾ ಇಲ್ಲವೋ ಗೊತ್ತಿಲ್ಲ. ಆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಎರಡು ಕಥೆಗೆ ಗ್ರೀನ್ಸಿಗ್ನಲ್ ಕೊಟ್ಟಿದ್ದೇನೆ. ಜನವರಿಯಲ್ಲಿ ಶುರುವಾಗಬಹುದು. ಆ ಬಳಿಕ ಚಿತ್ರದ ಶೀರ್ಷಿಕೆ, ನಿರ್ದೇಶಕರು, ಬ್ಯಾನರ್ಇತ್ಯಾದಿ ವಿಷಯಗಳನ್ನು ಹೇಳಬಹುದು. ಅಲ್ಲಿಯವರೆಗೆ ಸಸ್ಪೆನ್ಸ್‘ ಎನ್ನುತ್ತಾರೆ ರಶ್ಮಿ. ಅವರೀಗ ಸದ್ಯ, ಹೊಸ ಬಗೆಯ ಕಥೆಗಳತ್ತ ಗಮನಹರಿಸುತ್ತಿದ್ದಾರೆ.
ಅದರಲ್ಲೂ ಅವರಿಗೆ ಮಹಿಳಾ ಪ್ರಧಾನ ಚಿತ್ರಗಳ ಮೇಲೆ ಒಲವು. ಜನವರಿ ಬಳಿಕ ಮೆಲ್ಲನೆ ಬಿಝಿಯಾಗುವ ಸೂಚನೆ ಕೊಡುವ ರಶ್ಮಿ, “ಬಂದ ಕಥೆಗಳನ್ನುಒಪ್ಪುವುದಿಲ್ಲ. ಕೇವಲ ಹಣಕ್ಕಾಗಿ ಬಂದ ಅವಕಾಶ ಒಪ್ಪಿದರೆ, ಸಮಸ್ಯೆ ಎದುರಾಗುತ್ತೆ. ನಮಗೆ ಸರಿಹೊಂದುವ ಕಥೆ ಎನಿಸಿದರೆ ಮಾತ್ರ ಆಯ್ಕೆ ಮಾಡಿಕೊಳ್ಳಬಹುದು‘ ಎಂಬುದು ರಶ್ಮಿ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.