ಹೊಸಬರ ಪ್ರೀತಿಯ ಶೋಕಿ

ಸದ್ದಿಲ್ಲದೇ ಮುಗಿದಿದೆ ಚಿತ್ರೀಕರಣ

Team Udayavani, Apr 10, 2019, 3:00 AM IST

Shoki

ಕನ್ನಡದಲ್ಲೀಗ ಅನೇಕ ಹೊಸಬರ ಚಿತ್ರಗಳು ಸದ್ದಿಲ್ಲದೆಯೇ ಶುರುವಾಗಿ, ಮಾತಿನ ಭಾಗದ ಚಿತ್ರೀಕರಣವನ್ನೂ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿವೆ. ಆ ಸಾಲಿಗೆ ಈಗ “ಶೋಕಿ’ ಎಂಬ ಚಿತ್ರವೂ ಸೇರಿದೆ. ಈ ಹಿಂದೆ ಹೊಸ ಪ್ರತಿಭೆ ಶರಣ್ಯಗೌಡ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು.

ಆಗ ಆ ಚಿತ್ರಕ್ಕೆ ಹೆಸರು ಇಟ್ಟಿರಲಿಲ್ಲ. ಅದಕ್ಕೆ “ಶೋಕಿ’ ಎಂದು ನಾಮಕರಣ ಮಾಡಿರುವ ನಿರ್ದೇಶಕ ಎಸ್‌.ವಿಷ್ಣುಪ್ರಿಯನ್‌, ಮಾತಿನ ಭಾಗದ ಚಿತ್ರೀಕರಣ ಮುಗಿಸಿ, ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿರ್ದೇಶಕರೇ ವಹಿಸಿಕೊಂಡಿದ್ದಾರೆ. ಸರೋಜಿನಿ ಸಿನಿಮಾಸ್‌ ಬ್ಯಾನರ್‌ನಡಿ ಎಸ್‌.ಕೆಂಪೇಗೌಡ ದೊಡ್ಡಬಳ್ಳಾಪುರ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಸುನೀಲ್‌ ದರ್ಶನ್‌ ನಾಯಕರಾಗಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾ. ನಾಯಕಿಯರಾಗಿ ಶರಣ್ಯಗೌಡ ಹಾಗು ಕೀರ್ತಿ ಕೃಷ್ಣ ನಟಿಸಿದರೆ, ವಿಶೇಷ ಪಾತ್ರದಲ್ಲಿ ದೀಪಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರಶಾಂತ್‌, ಶ್ರುತಿ, ಅಂಜಲಿ, ಶಾರದ, ಸುಮಾ, ಮುಂತಾದವರು ಅಭಿನಯಿಸುತ್ತಿದ್ದಾರೆ.

ಚಿತ್ರವನ್ನು ಚಿಕ್ಕಮಗಳೂರು, ಮಾಣಿಕ್ಯದಾರ, ಸಕಲೇಶಪುರ, ಶ್ರೀನಿವಾಸ ಸಾಗರ, ನಂದಿಬೆಟ್ಟ ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೊಂದು ಯುವಕರ ಪ್ರೀತಿ, ಪ್ರೇಮದ ಸುತ್ತ ನಡೆಯುವ ಕಥೆ. ಅವರ ಬದುಕಿನ ಸಾಧಕ-ಬಾಧಕಗಳ ಕುರಿತಾದ ಚಿತ್ರಣ ಇಲ್ಲಿದೆ.

ಇನ್ನು, “ಶೋಕಿ’ ಶೀರ್ಷಿಕೆಗೆ “ಮಾಡೋಕೆ ಆಧಾರ್‌ ಕಾರ್ಡ್‌ ಬೇಕಿಲ್ಲ’ ಎಂಬ ಅಡಿಬರಹವಿದೆ. ಹುಡುಗಿಯೊಬ್ಬಳ ಬದುಕಲ್ಲಿ ಶೋಕಿದಾರನೊಬ್ಬನ ಎಂಟ್ರಿಯಾಗಿ, ಅವಳ ಲೈಫ‌ಲ್ಲಿ ಹೇಗೆಲ್ಲಾ ಆಟ ಆಡ್ತಾನೆ, ಆಮೇಲೆ ಏನೆಲ್ಲಾ ಆಗುತ್ತದೆ ಎಂಬುದು ಒನ್‌ಲೈನ್‌ ಸ್ಟೋರಿ ಎಂಬುದು ನಿರ್ದೇಶಕ ವಿಷ್ಣು ಪ್ರಿಯನ್‌ ಮಾತು.

ಚಿತ್ರಕ್ಕೆ ವಾಸನ್‌ ಛಾಯಾಗ್ರಹಣ ಮಾಡಿದ್ದಾರೆ. ಹರ್ಷ ಅವರು ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಚಿತ್ರದ ಹಾಡುಗಳು ಬಾಕಿ ಉಳಿದಿವೆ. ಮಳೆಗಾಲದಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಯೋಚನೆ ಚಿತ್ರಕ್ಕಿದೆ. ಸದ್ಯ ಚಿತ್ರಕ್ಕೆ ಸಂಕಲನ ಹಾಗು ಡಬ್ಬಿಂಗ್‌ ನಡೆಯುತ್ತಿದೆ. ರಾಜೇಂದ್ರ ಹೆಗಡೆ ಸಹನಿರ್ದೇಶನವಿರುವ ಚಿತ್ರವನ್ನು ಗೌರಿ ಗಣೇಶ ಹಬ್ಬದಂದು ತೆರೆಗೆ ತರಲು ನಿರ್ಮಾಪಕರು ತಯಾರಿ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.