ಭಿನ್ನ- ವಿಭಿನ್ನ ಸಿನಿಮಾಗಳ ಮೆರವಣಿಗೆ; ಇಂದು 9 ಚಿತ್ರಗಳು ತೆರೆಗೆ


Team Udayavani, Feb 10, 2023, 9:32 AM IST

ಭಿನ್ನ- ವಿಭಿನ್ನ ಸಿನಿಮಾಗಳ ಮೆರವಣಿಗೆ; ಇಂದು 9 ಚಿತ್ರಗಳು ತೆರೆಗೆ

ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ ಎಂಬ ಸೂಚನೆ ಜನವರಿ ಕೊನೆಯ ವಾರದಲ್ಲೇ ಸಿಕ್ಕಿತು. ಅದರಂತೆ ಫೆಬ್ರವರಿ ಮೊದಲ ವಾರದಿಂದಲೇ ಸಿನಿಮಾ ಬಿಡುಗಡೆ ಭರಾಟೆ ಆರಂಭವಾಗಿದೆ. ಆದರೆ, ಈ ವಾರ (ಫೆ.10) ಬರೋಬ್ಬರಿ 09 ಸಿನಿಮಾಗಳು ತೆರೆಕಾಣುತ್ತಿವೆ. ಈ ಮೂಲಕ ಗಾಂಧಿನಗರ ಕಲರ್‌ಫ‌ುಲ್‌ ಆಗಿ ಮಿಂಚಲಿದೆ. ವಿಶೇಷವೆಂದರೆ ಈ ವಾರ ತೆರೆಕಾಣುತ್ತಿರುವ ಒಂಭತ್ತಕ್ಕೆ ಒಂಭತ್ತು ಸಿನಿಮಾಗಳು ಹೊಸಬರ ಸಿನಿಮಾಗಳು. ಹಾಗಾಗಿ, ಹೊಸಬರು ಕನಸು ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ.

ಅಂದಹಾಗೆ, ಈ ವಾರ ತೆರೆಕಾಣುತ್ತಿರುವ 9 ಸಿನಿಮಾಗಳ ಬಗ್ಗೆ ಹೇಳುವುದಾದರೆ “ಹೊಂದಿಸಿ ಬರೆಯಿರಿ’, “ರೂಪಾಯಿ’,” ಡಿಸೆಂಬರ್‌ 24′, “ಲಾಂಗ್‌ ಡ್ರೈವ್‌, “ಬೆಂಗಳೂರು 69, “ಉತ್ತಮರು’, “ರಂಗಿನ ರಾಟೆ’, “ಒಂದಾನೊಂದು ಕಾಲದಲ್ಲಿ’, “18 ಟು 25′ ಚಿತ್ರಗಳು ಇಂದು ತೆರೆಗೆ ಬರುತ್ತಿವೆ.

ಇನ್ನು, ಹೊಸಬರ ಸಿನಿಜಾತ್ರೆ ಮಾರ್ಚ್‌ ಎರಡನೇ ವಾರದವರೆಗೂ ಜೋರಾಗಿಯೇ ನಡೆಯಲಿದೆ. ಅಲ್ಲಿವರೆಗೆ ಯಾವುದೇ ದೊಡ್ಡ ಸ್ಟಾರ್‌ ಸಿನಿಮಾಗಳು ಇಲ್ಲದಿರುವುದರಿಂದ ಅದೃಷ್ಟ ಪರೀಕ್ಷೆ ಸರಾಗವಾಗಿ ನಡೆಯಲಿದೆ. ಆದರೆ, ಮಾರ್ಚ್‌ ಮೂರನೇ ವಾರದ ವೇಳೆಗೆ ಮತ್ತೆ ಸಿನಿಬಿಡುಗಡೆಯಲ್ಲಿ ಕೊಂಚ ಇಳಿಕೆಯಾಗಲಿದೆ. ಅದಕ್ಕೆ ಮತ್ತದೇ ಕಾರಣ, “ಸ್ಟಾರ್‌ ಸಿನಿಮಾ’. ಹೌದು, ಮಾರ್ಚ್‌ 17ಕ್ಕೆ ಬಹು ನಿರೀಕ್ಷಿತ ಉಪೇಂದ್ರ ನಟನೆಯ “ಕಬ್ಜ’ ಚಿತ್ರ ತೆರೆಕಾಣಲಿದೆ.

ಸಹಜವಾಗಿಯೇ ಸ್ಟಾರ್‌ ಸಿನಿಮಾಗಳು ತೆರೆಗೆ ಬರುವಾಗ ಹೊಸಬರು ಸ್ವಲ್ಪ ದೂರವೇ ನಿಲ್ಲುತ್ತಾರೆ. ಹಾಗಾಗಿ, ಸಿನಿಮಾ ಬಿಡುಗಡೆಯೂ ಇಳಿಕೆ ಕಾಣಲಿದೆ. ಇನ್ನು, ಈ ವಾರ ತೆರೆಕಾಣುತ್ತಿರುವ ಸಿನಿಮಾಗಳ ಬಗ್ಗೆ ನೋಡುವುದಾದರೆ….

ಇದು ರೂಪಾಯಿ ವಿಷ್ಯ

ಇಂದಿನ ಜಗತ್ತು ಬಹುತೇಕ ಹಣದ ಮೇಲೆ ನಿಂತಿದೆ. ಹೀಗಾಗಿ ಲಾಭ-ನಷ್ಟದ ಲೆಕ್ಕಚಾರದಲ್ಲಿರುವ ಜನ-ಜೀವನದಲ್ಲಿ, ಪ್ರತಿದಿನ ಎಲ್ಲರೂ “ರೂಪಾಯಿ’ ಬಗ್ಗೆ ಕೇಳುತ್ತಲೇ ಇರುತ್ತೇವೆ. ಈಗ ಇದೇ “ರೂಪಾಯಿ’ ಎಂಬ ಟೈಟಲ್‌ನಲ್ಲಿ ಸಿನಿಮಾವೊಂದು ಇಂದು ತೆರೆಕಾಣುತ್ತಿದೆ. ಅಂದಹಾಗೆ, “ಚಿಲ್ರೆ ವಿಷ್ಯ ಅಲ್ಲಾ ಗುರು’ ಎಂಬ ಟ್ಯಾಗ್‌ಲೈನ್‌ನಲ್ಲಿ ಇರುವ “ರೂಪಾಯಿ’ ಸಿನಿಮಾದಲ್ಲಿ ಹಣದ ಮೌಲ್ಯದ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ಮನರಂಜನಾತ್ಮಕವಾಗಿ ತೆರೆಮೇಲೆ ಹೇಳಲಾಗುತ್ತಿದೆ. ಸಿನಿಮಾದ ಹೆಸರು “ರೂಪಾಯಿ’ ಅಂತಿದ್ದರೂ, ಇದು ಕೇವಲ ಹಣದ ಕುರಿತು ಮಾತ್ರ ಮಾಡಿರುವ ಸಿನಿಮಾವಲ್ಲ. ಹಣದ ಜೊತೆ ಬದುಕು, ಸಂಬಂಧ, ಭಾವನೆಗಳ ಮೌಲ್ಯಗಳನ್ನು ತೋರಿಸುವ ಸಿನಿಮಾ. ಮಧ್ಯಮ ವರ್ಗದ ಐದು ಪಾತ್ರಗಳ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಪ್ರೇಕ್ಷಕರು ಬಯಸುವ ಒಳ್ಳೆಯ ಕಥೆ “ರೂಪಾಯಿ’ಯಲ್ಲಿದೆ’ ಎನ್ನುವುದು ಚಿತ್ರತಂಡದ ಮಾತು. “ವಿವಿಧ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ತಯಾರಾಗಿರುವ ಈ “ರೂಪಾಯಿ’ ಚಿತ್ರಕ್ಕೆ ವಿಜಯ್‌ ಜಗದಾಲ್‌ ನಿರ್ದೇಶನವಿದೆ. ಸಿನಿಮಾದಲ್ಲಿ ವಿಜಯ್‌ ಜಗದಾಲ್‌ ಜತೆಗೆ ಯಶ್ವಿ‌ಕ್‌, ರಾಮ್‌ ಚಂದನ್‌ ನಾಯಕರಾಗಿ ಅಭಿನಯಿಸಿದ್ದು, ಕೃಷಿ ತಾಪಂಡ, ಚಂದನ ರಾಘವೇಂದ್ರ ನಾಯಕಿಯರಾಗಿದ್ದಾರೆ.

ಹೊಂದಿಸಿ ಬರೆಯಿರಿ

ಜೀವನದಲ್ಲಿ ಸಂಬಂಧಗಳು ಬಹಳ ಮುಖ್ಯ. ಆ ಸಂಬಂಧಗಳು ಉಳಿಯಲು ತಾಳ್ಮೆ, ಹೊಂದಾಣಿಕೆ ಅಗತ್ಯ. ನಿಮ್ಮ ಬದುಕಿಗೆ ನೀವೇ ಸೂತ್ರಧಾರರು, ಬದುಕನ್ನು ಬಂದಂತೆ ಸ್ವೀಕರಿಸು ಎಂದು “ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಹೇಳ ಹೊರಟಿದ್ದಾರೆ ನವ ನಿರ್ದೇಶಕ ಜಗನ್ನಾಥ್‌.

“ಹೊಂದಿಸಿ ಬರೆಯಿರಿ’ ಅಂದಾಕ್ಷಣ ನೆನಪಾಗುವುದೇ ಶಾಲಾ ದಿನಗಳು. ಆದರೆ ಇದು ಆ ಹೊಂದಿಸಿ ಬರೆಯಿರಿಯಲ್ಲ ಎಂಬುದು ಚಿತ್ರತಂಡದ ಮಾತು. ಬದಲಾಗಿ ಜೀವನದಲ್ಲಿ ಬರುವ ಪರಿಸ್ಥಿತಿಗಳು, ಸನ್ನಿವೇಶಗಳನ್ನು ಎದುರಿಸಿ, ಅದರ ಜೊತೆ ನಿಮ್ಮ ಬದುಕನ್ನು ನೀವೇ ಹೊಂದಿಸಿಕೊಂಡು ಹೋಗಬೇಕು ಎನ್ನುವುದು ಚಿತ್ರದ ಆಶಯ. ಚಿತ್ರದಲ್ಲಿ 12 ವರ್ಷಗಳ ಸುಂದರ ಜರ್ನಿಯಿದ್ದು, ಐದು ಜನ ಸ್ನೇಹಿತರ ಕಾಲೇಜು ದಿನಗಳು, ನಂತರದ ಸಮಯ ಹಾಗೂ ಮದುವೆಯ ಆರಂಭದ ದಿನಗಳನ್ನು ಒಳಗೊಂಡ ಕಥೆ ಇದಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ 18- 32 ರವರೆಗಿನ ವರ್ಷಗಳು ಜೀವನದ ಪ್ರಮುಖ ಘಟ್ಟ. ಅವರ ಆಲೋಚನೆಗಳು ಬದಲಾಗುವ ಸಮವಿದು. ಸ್ನೇಹಿತರು, ಕೆಲಸದ, ಹುಡುಕಾಟ, ಮದುವೆ, ಸಂಬಂಧಗಳಲ್ಲಿ ನಡೆಯುವ ಚಿಕ್ಕ ಘಟನೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದುದನ್ನು “ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಪ್ರವೀಣ್‌ ತೇಜ್‌, ಭಾವನಾ ರಾವ್‌, ಸಂಯುಕ್ತಾ ಹೊರನಾಡು, ಐಶಾನಿ ಶೆಟ್ಟಿ, ನವೀನ್‌ ಶಂಕರ್‌, ಶ್ರೀ, ಅರ್ಚನಾ ಜೋಯಿಸಾ, ಅನಿರುದ್ಧ ಆಚಾರ್ಯ, ಸುನೀಲ್‌ ಪುರಾಣಿಕ್‌, ಸ್ವಾತಿ ನಟಿಸಿದ್ದಾರೆ.

ಲಾಂಗ್‌ ಡ್ರೈವ್‌

“ಲಾಂಗ್‌ ಡ್ರೈವ್‌’ ಹೆಸರಿನ ಸಿನಿಮಾ ಇಂದು ತೆರೆಕಾಣುತ್ತಿದೆ. ಸಿನಿಮಾದಲ್ಲಿ ಅರ್ಜುನ್‌ ಯೋಗಿ ನಾಯಕನಾಗಿದ್ದು, ಸುಪ್ರಿತಾ ಸತ್ಯನಾರಾಯಣ್‌ ಮತ್ತು ತೇಜಸ್ವಿನಿ ಶೇಖರ್‌ ನಾಯಕಿಯ ರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶಬರಿ ಮಂಜು, ಬಲರಾಜವಾಡಿಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ¨ªಾರೆ. “ಗುಡ್‌ ವೀಲ್‌ ಪೊ›ಡಕ್ಷನ್ಸ್‌’ ಬ್ಯಾನರ್‌ನಲ್ಲಿ ಮಂಜುನಾಥ ಗೌಡ ಬಿ. ಆರ್‌ ನಿರ್ಮಿಸಿರುವ “ಲಾಂಗ್‌ ಡ್ರೈವ್‌’ ಸಿನಿಮಾಕ್ಕೆ ಶ್ರೀರಾಜ್‌ ನಿರ್ದೇಶನವಿದೆ.

ಬೆಂಗಳೂರು 69

“ಬೆಂಗಳೂರು 69′- ಹೀಗೊಂದು ಸಿನಿಮಾ ಇಂದು ತೆರೆಕಾಣುತ್ತಿದೆ. ಜಾಕೀರ್‌ ಹುಸೇನ್‌ ಕರೀಂಸಾಬ್‌ ಈ ಸಿನಿಮಾದ ನಿರ್ಮಾಪಕರು. ನಿರ್ದೇಶಕ ಕ್ರಾಂತಿ ಚೈತನ್ಯ ಅವರಿಗೆ ಇದು ಮೊದಲ ಚಿತ್ರ.”ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸ್ಟೋರಿ. ಜಗತ್ತಲ್ಲಿ ಪ್ರೀತಿ, ನಂಬಿಕೆ, ವ್ಯಾಮೋಹ, ಮೋಸ, ದ್ವೇಷ, ಅಸೂಯೆ, ಅಪರಾಧ ಹೀಗೆ ಎಲ್ಲವೂ ನಡೆಯುತ್ತಿದೆ. ಇದೂ ಕೂಡ ಒಂದು ಕಿಡ್ನಾéಪ್‌ ಕಥೆ. ಯಾಕೆ ಕಿಡ್ನಾಪ್‌ ಆಗುತ್ತೆ, ಕಿಡ್ನಾಪ್‌ ಮಾಡೋರು ಯಾರು, ಆಗೋರು ಯಾರು ಎಂಬುದೇ ಸಸ್ಪೆನ್ಸ್‌. ಇದೊಂದು ಇಂಟರ್‌ನ್ಯಾಷನಲ್‌ ಕಾನ್ಸೆಪ್ಟ್ ಹೊಂದಿದೆ. ಕನ್ನಡಿಗರಿಗೆ ಈ ಚಿತ್ರ ಖಂಡಿತ ರುಚಿಸಲಿದೆ’ ಎಂಬುದು ತಂಡದ ಮಾತು. ಚಿತ್ರದಲ್ಲಿ ಅನಿತಾ ಭಟ್‌, ಪವನ್‌ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇನ್ನು, “ಕಮಲ್‌ ಪ್ರೊಡಕ್ಷನ್’ ಲಾಂಛನದಲ್ಲಿ ಕವಿತಾ ಅರುಣ್‌ ಕುಮಾರ್‌ ನಿರ್ಮಿಸಿರುವ “ರಂಗಿನ ರಾಟೆ ಚಿತ್ರ ಕೂಡಾ ಇಂದು ತೆರೆಕಾಣುತ್ತಿದೆ.ಆರ್ಮುಗಂ ಈ ಚಿತ್ರದ ನಿರ್ದೇಶಕ. ರಾಜೀವ್‌ ರಾಥೋಡ್‌, ದುನಿಯಾ ರಶ್ಮಿ, ಸಂತೋಷ್‌ ಮಳವಳ್ಳಿ, ಭವ್ಯ, ರಾಂಗ್‌ ಕಾಲ್‌ಚಂದ್ರು,ಮುರಳಿ ಮೋಹನ್‌, ಸ್ವಪ್ನ ರಂಗಿನ ರಾಟೆ ಚಿತ್ರ ದಲ್ಲಿ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

Prajwal Devaraj; ಡಿಸೆಂಬರ್‌ ಗೆ ಬರಲಿದೆ ʼರಾಕ್ಷಸʼ

Prajwal Devaraj; ಡಿಸೆಂಬರ್‌ ಗೆ ಬರಲಿದೆ ʼರಾಕ್ಷಸʼ

Mooru Kaasina Kudure movie is in Amazon prime

Mooru Kaasina Kudure: ಅಮೆಜಾನ್‌ ನಲ್ಲಿ ನವ ತಂಡದ ಸಿನಿಮಾ

Shiva Rajkumar’s Bhairathi ranagal sequel will come soon

Shiva Rajkumar: ಬರಲಿದೆ ಭೈರತಿ ರಣಗಲ್‌-2

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.