ಡಿಸಿ ರೆಕಾರ್ಡ್ಸ್‌ನಿಂದ “ನಿನ್ನ ಗುಂಗಲಿ ..’ ಆಲ್ಬಂ
Team Udayavani, Feb 18, 2019, 5:26 AM IST
ಕನ್ನಡದಲ್ಲಿ ಇತ್ತೀಚೆಗೆ ವಿಡಿಯೋ ಆಲ್ಬಂ ಟ್ರೆಂಡ್ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಹಿಂದೆ ಚಂದನ್ ಶೆಟ್ಟಿ ಅವರ “ಹಾಳಾಗೋದೆ…’ ಮ್ಯೂಸಿಕ್ ಆಲ್ಬಂ ನಿರ್ಮಿಸಲು ಸಾಥ್ ನೀಡಿದ್ದ ದಿನಿ ಸಿನಿ ಕ್ರಿಯೇಷನ್ಸ್‌ನ ದಿನೇಶ್, ಈಗ “ಡಿ.ಸಿ ರಿಕಾರ್ಡ್ಸ್’ ಎಂಬ ನೂತನ ಸಂಸ್ಥೆ ಸಂಸ್ಥೆಯ ಮೂಲಕ, ಮ್ಯೂಸಿಕ್ ಆಲ್ಬಂ ನಿರ್ಮಿಸಲು ಆಸಕ್ತರಾಗಿರುವ ಮತ್ತಷ್ಟು ನೂತನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಇತ್ತೀಚೆಗೆ “ಡಿ.ಸಿ ರಿಕಾರ್ಡ್ಸ್’ ಸಂಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಮೈಸೂರಿನ ನವ ಪ್ರತಿಭೆ ಅದ್ವಿಕ್ ಅವರ “ನಿನ್ನ ಗುಂಗಲಿ…’ ವಿಡಿಯೋ ಆಲ್ಬಂ ಅನ್ನು ಹೊರತರುವ ಮೂಲಕ “ಡಿ.ಸಿ ರಿಕಾರ್ಡ್ಸ್’ ಸಂಸ್ಥೆಯ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ಮಾತನಾಡಿದ ಚಂದನ್ ಶೆಟ್ಟಿ, “ಆರಂಭದ ದಿನಗಳಲ್ಲಿ ನನ್ನ ಹಾಡುಗಳಿಗೆ “ದಿನಿಸಿನಿ ಕ್ರಿಯೇಶನ್ಸ್’ನ ದಿನೇಶ್ ತುಂಬ ಸಹಕಾರ ನೀಡಿದ್ದಾರೆ. ಅದರಿಂದಾಗಿಯೇ ಬಿಗ್‌ಬಾಸ್ ಶೋಗೆ ಎಂಟ್ರಿಯಾಗಲು ಸಾಧ್ಯವಾಯಿತು. ಕನ್ನಡದಲ್ಲಿ ಇತ್ತೀಚೆಗೆ ಮ್ಯೂಸಿಕ್ ಆಲ್ಬಂಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಆಡಿಯೋ ಕಂಪೆನಿಗಳಿಗೂ ಉತ್ತಮ ವ್ಯಾಪಾರವಾಗುತ್ತಿದೆ. ಲಹರಿ ರೆಕಾರ್ಡಿಂಗ್ ಸಂಸ್ಥೆಯಿಂದ ನಮಗೂ ನಾಲ್ಕು ಮ್ಯೂಸಿಕ್ ಆಲ್ಬಂಗಳನ್ನು ಮಾಡಿಕೊಡಲು ಆಫರ್ ಬಂದಿದೆ.
ಕನ್ನಡ ಆಲ್ಬಂಗಳಿಗೆ ಬೇಡಿಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು. ಕಾರ್ಯಕ್ರಮದಲ್ಲಿ “ಡಿ.ಸಿ ರಿಕಾರ್ಡ್ಸ್’ ರೂವಾರಿ ದಿನೇಶ್, ಭವಿಷ್ಯದಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಡೈರಿ ಡೇ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್, ಕಿರಿಕ್ ಕೀರ್ತಿ, ವಿಜೇತ್ ಕೃಷ್ಣ ಮುಂತಾದವರು ಹಾಜರಿದ್ದು, “ಡಿ.ಸಿ ರಿಕಾರ್ಡ್ಸ್’ ಸಂಸ್ಥೆಗೆ ಮತ್ತು “ನಿನ್ನ ಗುಂಗಲಿ…’ ವಿಡಿಯೋ ಆಲ್ಬಂಗೆ ಶುಭ ಕೋರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.