ಸುದೀಪ್ ಹುಟ್ಟುಹಬ್ಬಕ್ಕೆ ‘ಚಿನ್ನದ ಹುಡುಗನ’ ವಿಶ್
Team Udayavani, Sep 1, 2021, 2:21 PM IST
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸೆಪ್ಟೆಂಬರ್ 2 ತುಂಬಾ ವಿಶೇಷವಾದ ದಿನ. ಕಾರಣ ಅಂದು ಕನ್ನಡದ ‘ರನ್ನ’ನ ಹುಟ್ಟುಹಬ್ಬ. ಒಂದು ದಿನದ ಮುಂಚಿತವಾಗಿಯೇ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ. ಈ ಬಾರಿ ಜನ್ಮದಿನಕ್ಕೆ ಸುದೀಪ್ ಅವರಿಗೆ ವಿಶೇಷವಾದ ‘ವಿಶ್’ ಬಂದಿದೆ. ಅದು ಯಾರದು ಅಂತೀರಾ ? ಹಾಗಾದರೆ ಈ ಸ್ಟೋರಿ ಓದಿ..
ಟೋಕಿಯೋ ಒಲಿಂಪಿಕ್ಸ್ -2020ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿರುವ ನೀರಜ್ ಚೋಪ್ರಾ ಅವರು ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
Man with the golden arm @Neeraj_chopra1 sends his wishes to Baadshah Kichcha Sudeepa. ✨ #VikrantRona @KicchaSudeep @anupsbhandari @JackManjunath @Asli_Jacqueline @nirupbhandari @shaliniartss @The_BigLittle @TSeries @LahariMusic #WorldGetsANewHero pic.twitter.com/oMMuP1Fv8L
— Kichcha Creatiions (@Kichchacreatiin) September 1, 2021
ನಾಳೆ (ಸೆಪ್ಟೆಂಬರ್ 2) ‘ಡೆಡ್ ಮ್ಯಾನ್ ಆಯಂಥಮ್’ ರಿಲೀಸ್ ಆಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ‘ವಿಕ್ರಾಂತ ರೋಣ’ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ನೀರಜ್ ಚೋಪ್ರಾ ಅವರು ಸುದೀಪ್ಗೆ ಬರ್ತ್ಡೆ ವಿಶ್ ಮಾಡಿದ್ದಾರೆ. ಜತೆಗೆ ಅವರ ಸಿನಿಮಾಗೂ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಜತೆ ಅಚ್ಚರಿ ಕೂಡ ಹೊರ ಹಾಕಿದ್ದಾರೆ.
ಇನ್ನು ಸುದೀಪ್ ಅವರು ಈ ಬಾರಿಯೂ ಅದ್ಧೂರಿ ಹುಟ್ಟುಹಬ್ಬದ ಸಂಭ್ರಕ್ಕೆ ನಿರಾಕರಿಸಿದ್ದಾರೆ. ಜೋರಾಗಿ ಸಂಭ್ರಮ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ. ಕೋವಿಡ್ ಮೂರನೇ ಅಲೆಯ ಭೀತಿ ಒಂದುಕಡೆಯಾದರೆ, ಕಳೆದ ಕೆಲ ವರ್ಷಗಳಿಂದ ಸುದೀಪ್ ಅವರು ಅದ್ಧೂರಿ ಹುಟ್ಟುಹಬ್ಬದ ಸಂಭ್ರಮವನ್ನು ನಿಲ್ಲಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದು ಕೇಕ್ ಹಾಗೂ ಹಾರಕ್ಕೆ ಮಾಡುವ ಖರ್ಚನ್ನು ಬಡ ಮಕ್ಕಳಿಗೆ ನೀಡಿ ಎಂದು ಈ ಹಿಂದೆ ಸುದೀಪ್ ಕರೆ ನೀಡಿದ್ದರು. ಅದರಂತೆ ಅವರ ಅಭಿಮಾನಿಗಳು ಕೂಡ ಈ ಕೆಲಸವನ್ನು ತಪ್ಪದೆ ಮಾಡಿಕೊಂಡು ಬರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.