ರಣಭೂಮಿಯಲ್ಲಿ ನಿರಂಜನ್‌ ಒಡೆಯರ್‌


Team Udayavani, May 9, 2018, 11:56 AM IST

Niranjan-wodeyar-(2).jpg

ನಟ ನಿರಂಜನ್‌ ಒಡೆಯರ್‌ “ಜಲ್ಸಾ’ ಬಳಿಕ ನಟಿಸಿರುವ “ಓಳ್‌ ಮುನ್ಸಾಮಿ’ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಆ ಚಿತ್ರ ತೆರೆಗೆ ಬರುವ ಮುನ್ನವೇ ಅವರು ಸದ್ದಿಲ್ಲದೆಯೇ ಇನ್ನೊಂದು ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಆ ಚಿತ್ರದ ಹೆಸರು “ರಣಭೂಮಿ’. ಈ ಚಿತ್ರವನ್ನು ದೀಪಕ್‌ ಎಂಬುವವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮೂವರು ಗೆಳೆಯರ ಜೊತೆ ಸೇರಿ, ದೀಪಕ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಿರಂಜನ್‌ ಒಡೆಯರ್‌ ಅವರಿಗೆ ನಾಯಕಿಯರಾಗಿ ಕಾರುಣ್ಯ ರಾಮ್‌ ಹಾಗೂ ಶೀತಲ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಇಬ್ಬರು ನಾಯಕಿಯರು ಅಂದಾಕ್ಷಣ, ಇದೊಂದು ತ್ರಿಕೋನ ಪ್ರೇಮಕಥೆ ಇರಬಹುದು ಎಂಬ ಲೆಕ್ಕಾಚಾರ ಹಾಕಿದರೆ, ಆ ಊಹೆ ತಪ್ಪು. ಯಾಕೆಂದರೆ, ಇದು ಸಸ್ಪೆನ್ಸ್‌ ಮತ್ತು ಹಾರರ್‌ ಚಿತ್ರ. ಇಬ್ಬರು ನಾಯಕಿಯರೂ ನಾಯಕನನ್ನು ಪ್ರೀತಿಸೋದು ನಿಜ. ಆದರೆ, ನಾಯಕ ಒಬ್ಬರನ್ನು ಮಾತ್ರ ಪ್ರೀತಿಸುತ್ತಾನೆ. ಆ ಇಬ್ಬರ ಪೈಕಿ ಯಾರನ್ನು ಇಷ್ಟಪಡ್ತಾನೆ ಎಂಬ ಉತ್ತರಕ್ಕೆ ಚಿತ್ರ ಬರುವವರೆಗೆ ಕಾಯಬೇಕು.

ಇನ್ನು, ಶೀರ್ಷಿಕೆಗೂ ಚಿತ್ರದ ಕಥೆಗೂ ಸಂಬಂಧವಿದೆಯಾ ಎಂಬ ಸಣ್ಣದ್ದೊಂದು ಪ್ರಶ್ನೆ ಎದುರಾಗಬಹುದು. ಆದರೆ, ಚಿತ್ರ ನೋಡಿದಾಗ ಮಾತ್ರ, “ರಣಭೂಮಿ’ ಶೀರ್ಷಿಕೆ ಯಾಕೆ ಇಡಲಾಗಿದೆ ಎಂಬುದು ಗೊತ್ತಾಗಲಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರದಲ್ಲಿ ನಿರಂಜನ್‌ ಒಡೆಯರ್‌ ಅವರು ಒಬ್ಬ ಟೆಕ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾರರ್‌ ಚಿತ್ರ ಅಂದಮೇಲೆ ಇಲ್ಲಿ ಬೆಚ್ಚಿಬೀಳಿಸುವ ಅಂಶಗಳು ಇರದಿದ್ದರೆ ಹೇಗೆ? ಅದೇ ಚಿತ್ರದ ಹೈಲೆಟ್‌.

ಇಲ್ಲಿ ದುಷ್ಟಶಕ್ತಿಯೊಂದು ತೆರೆಯ ಮೇಲೆ ಕಾಣುವ ಕೆಲವರನ್ನು ಸಿಕ್ಕಾಪಟ್ಟೆ ಕಾಡುತ್ತೆ, ಹೆದರಿಸುತ್ತೆ, ಯಾಮಾರಿಸುತ್ತೆ. ಆದರೆ, ಆ ದುಷ್ಟಶಕ್ತಿಯಿಂದ ಹೇಗೆ ಆ ಕೆಲ ಪಾತ್ರಗಳು ಹೊರಬರುತ್ತವೆ ಎಂಬುದು ಚಿತ್ರದ ಕಥಾಹಂದರ. ಸಾಮಾನ್ಯವಾಗಿ ಸಸ್ಪೆನ್ಸ್‌, ಹಾರರ್‌ ಚಿತ್ರಗಳಿಗೆ ಸಂಗೀತ ಮತ್ತು ಎಫೆಕ್ಟ್ಗೆ ಪ್ರಾಮುಖ್ಯತೆ ಇದ್ದೇ ಇರುತ್ತೆ. ಇಲ್ಲೂ ಕೂಡ ಅದು ಹೈಲೆಟ್‌. ಹೊಸ ಪ್ರತಿಭೆಯ ಸಂಗೀತವಿದೆ. ನಾಗಾರ್ಜುನ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು,

ಸದ್ಯಕ್ಕೆ ಚಿತ್ರದ ಬಿಡುಗಡೆ ತಯಾರಿ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಒಂದು ಹಾಡಿದೆ. ಉಳಿದಂತೆ “ಕೆಜಿಎಫ್’ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ವಿಕ್ರಮ್‌, ಈ ಚಿತ್ರದಲ್ಲೊಂದು ಭರ್ಜರಿ ಫೈಟ್‌ ಮಾಡಿದ್ದಾರೆ. ನಾಯಕ ನಿರಂಜನ್‌ ಒಡೆಯರ್‌ಗೆ ಇದು ಮೂರನೇ ಸಿನಿಮಾ. ಸದ್ಯಕ್ಕೆ ಅವರು ಹೊಸ ನಿರ್ದೇಸಕ ಕಿರಣ್‌ ಎಂಬುವವರ ಇನ್ನೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಅಂತಿಮಗೊಳಿಸಿದ್ದು, ಜುಲೈನಲ್ಲಿ ಹೊಸ ಚಿತ್ರಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!

kejriwal 2

BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್

1-wwewqe

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

1-frr

Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್‌ ತಾತ್ಕಾಲಿಕ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

Darshan-kannada

Challenging Star; ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ! ;ಇಂದು ‘ಡೆವಿಲ್‌’ ಡಬ್ಬಿಂಗ್‌!

Manada Kadalu Movie: ಮನದ ಕಡಲಲಿ ಹೂ ದುಂಬಿ

Manada Kadalu Movie: ಮನದ ಕಡಲಲಿ ಹೂ ದುಂಬಿ

Sandalwood: ಹಾಡಲ್ಲಿ ಗರುಡ ಪುರಾಣ

Sandalwood: ಹಾಡಲ್ಲಿ ಗರುಡ ಪುರಾಣ

Sherr Kannada Movie: ಘರ್ಜಿಸಲು ಬಂದ ಶೇರ್‌

Sherr Kannada Movie: ಘರ್ಜಿಸಲು ಬಂದ ಶೇರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!

kejriwal 2

BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್

1-wwewqe

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.