ಏ.16ರಿಂದ ನಿಟ್ಟೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ; 4 ದಿನ 60 ಸಿನಿಮಾ
Team Udayavani, Apr 14, 2018, 1:44 PM IST
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯ 2ನೇ ವರ್ಷದ ನಿಟ್ಟೆ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಸಲು ಸಿದ್ಧವಾಗಿದ್ದು, ಏಪ್ರಿಲ್ 16ರಿಂದ 19ರವರೆಗೆ ಮಂಗಳೂರಿನ ಭಾರತ್ ಮಾಲ್ ನ ಭಾರತ್ ಸಿನಿಮಾ ಥಿಯೇಟರ್ ನಲ್ಲಿ ನಾಲ್ಕು ದಿನಗಳ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ.
ಕಳೆದ ವರ್ಷ ನಿಟ್ಟೆ ವಿಶ್ವವಿದ್ಯಾಲಯ ಫಿಲ್ಸ್ ಫೆಸ್ಟಿವಲ್ ಅನ್ನು ಆರಂಭಿಸಿತ್ತು. ಇದೀಗ 2ನೇ ವರ್ಷದ ಅಂತಾರಾಷ್ಟ್ರೀಯ ಸಿನಿಮಾ ಉತ್ಸವವಾಗಿದೆ. ದೇಶ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಪ್ರದರ್ಶನಗೊಳ್ಳಲಿದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ಮರಾಠಿ, ಗುಜರಾತಿ ಸೇರಿದಂತೆ 60ಕ್ಕಿಂತಲೂ ಹೆಚ್ಚು ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಸಿನಿಮಾ ಪ್ರದರ್ಶನ ಮತ್ತು ಚರ್ಚೆ, ಗೋಷ್ಠಿ ನಡೆಯಲಿದ್ದು, ಇದು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಪ್ರಥಮ ಆದ್ಯತೆ. ಯಾವ ದಿನ ಯಾವ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂಬ ವಿವರ ನಿಫ್ಸ್ (ಎನ್ ಐಎಫ್ ಎಫ್) ಪೇಸ್ ಬುಕ್ ಪೇಜ್ ನಲ್ಲಿ ಲಭ್ಯ.
ಏ.16ರಂದು ಸಿನಿಮಾ ಉತ್ಸವ ಉದ್ಘಾಟನೆ:
ಏ.16ರ ಬೆಳಗ್ಗೆ 10ಗಂಟೆಗೆ ನಿಟ್ಟೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವವನ್ನು ಖ್ಯಾತ ರಂಗಕರ್ಮಿ, ಸ್ವರ್ಣಕಮಲ ಪ್ರಶಸ್ತಿ ವಿಜೇತ ಸದಾನಂದ ಸುವರ್ಣ ಅವರು ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಮುಕ್ತಿ ಭವನ್ ಹಿಂದಿ ಸಿನಿಮಾ ಪ್ರದರ್ಶನದೊಂದಿಗೆ ಫಿಲ್ಮ್ ಫೆಸ್ಟಿವಲ್ ಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ಒಂದು ಮೊಟ್ಟೆಯ ಕಥೆ ಸಿನಿಮಾದ ನಿರ್ದೇಶಕ ರಾಜ್ ಬಿ ಶೆಟ್ಟಿ, ನಿರ್ದೇಶಕ ಸನಾಲ್ ಕುಮಾರ್ ಶಶಿಧರನ್, ಹೇಮಂತ್ ರಾವ್, ಆರ್ ಎಸ್ ಪ್ರಸನ್ನ ಸೇರಿದಂತೆ ಹಲವು ನಿರ್ದೇಶಕರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಸಿನಿಮಾದ ಪ್ರದರ್ಶನದ ಬಳಿಕ ಸಂವಾದ ನಡೆಯಲಿದೆ.
List of Confirmed Films – NIFF 2018
Kannada
1)Ondu Motteya Kathe (Kannada) 2)Godhi Banna Sadharana Mykattu (Kannada) 3)Dayavittu Gamanisi (Kannada), 4)Puta Thirugisi Nodi (Kannada), 5)Raju (Kannada), 6)Shuddhi (Kannada), 7)Jeerjimbe (Kannada), 8)Mudalaseemeyalli (Kannada), 9)Marikondavaru (Kannada), 10)Mooka Hakki (Kannada)
11)Uppina Kagada (Kannada), 12)Devara Naadalli – Kannada, 13)Naanu Avanalla…Avalu – Kannada
Malayalam
1)Thondimuthalum Driksakshiyum – Malayalam, 2) Maheshinte Prathikaaram – Malayalam, 3) Paathi – Malayalam, 4) Ayaal Sassi – Malayalam, 5) Take Off – Malayalam, 6) Eeda – Malayalam7) Ozhivudivasathe Kali – Malayalam, 8) S Durga – Malayalam.
Tamil
1) To Let (Tamil), 2) Aruvi (Tamil), 3) My Son is Gay (Tamil), 4) Vikram Vedha (Tamil), 5) Joker (Tamil).
Bengali/ Odia/ Assamese
1) Village Rockstars (Assamese), 2) Mayurakshi (Bengali), 3) Benaras: Unexplored Attachments (Bengali), 4) Andarkahini (Bengali), 5) Khyanikaa (Odia), 6) Capital I – Odia.
Marathi/Konkani/Gujarathi
1) Half Ticket (Marathi), 2) Pipsi (Marathi), 3) Gulaabjaam (Marathi), 4) Samhita (Marathi), 5) Maza Bhirbhira (Marathi), 6) Eli Eli Lama Sabachthani? (Marathi/Hindi/English), 7) Idak the Goat (Marathi)
8) Sairat (Marathi), 9) Juze (Konkani), 10) Dhh (Gujarati), 11) Karsandas Pay & Use (Gujarati)
12 Reva (Gujarati).
International films
1) Heidi (German), 2) Alive (French), 3)Touch of Concrete (Czech), 4) Ballad from Tibet (Tibetan/Chinese), 5) Ralang Road (Nepali)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.